
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪನವರನ್ನು ಮಾರ್ಷಲ್ ಆರ್ಟ್ಸ್ ನಲ್ಲಿ ರಾಷ್ಟ್ರಮಟ್ಟದ ಅತಿ ಕಿರಿಯ ವಯಸ್ಸಿನ ಪದಕ ವಿಜೇತೆ ಹೆಗ್ಗಳಿಕೆಗೆ ಪಾತ್ರರಾಗಿ ಇತಿಹಾಸ ಸೃಷ್ಟಿಸಿರುವ ಕುಮಾರಿ ಪ್ರಣತಿ ಜಿ ಅವರು ಭೇಟಿ ಮಾಡಿದರು.
ರಷ್ಯಾ ದೇಶದ ಮಾಸ್ಕೋದಲ್ಲಿ ನಡೆಯಲಿರುವ (International Wushu Star Championship – 2025) ಇಂಟರ್ನ್ಯಾಷನಲ್ ವುಶು ಸ್ಟಾರ್ ಚಾಂಪಿಯನ್ ಶಿಪ್-2025 ರ ಪಂದ್ಯಕ್ಕೆ ಆಯ್ಕೆಯಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಸಾಧಿಸಲೆಂದು ಈ ಸಂದರ್ಭದಲ್ಲಿ ಮಾನ್ಯ ಸಚಿವರು ಶುಭಹಾರೈಸಿದರು.
ಈ ವೇಳೆ ಆತ್ಮೀಯ ಯುವಮುಖಂಡರು ಹಾಗೂ ಉದ್ಯಮಿಯಾದ ಶ್ರೀ ಪ್ರತಾಪ್ ಕುಮಾರ್. ಆರ್ ಅವರು ಸಚಿವರ ಮೂಲಕ ಪ್ರಣತಿಯವರ ಮುಂದಿನ ಕ್ರೀಡಾ ಸಾಧನೆಗಾಗಿ “ಒಂದು ಲಕ್ಷ ಮೊತ್ತದ ಚೆಕ್” ಅನ್ನು ನೀಡುವುದರ ಮೂಲಕ ಆರ್ಥಿಕವಾಗಿ ನೆರವು ನೀಡಿ ಪ್ರೋತ್ಸಾಹಿಸಿದರು. ಈ ಆರ್ಥಿಕ ನೆರವು ನೀಡಿದ ಉದ್ಯಮಿ ಪ್ರತಾಪ್ ರವರನ್ನು ಅಭಿನಂದಿಸಿದರು.
ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸರಕಾರದಿಂದ ಇನ್ನಷ್ಟು ಹೆಚ್ಚಿನ ಶಕ್ತಿ ನೀಡಲು ಬೇಕಾದ ಪೂರಕ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರಾದ ಬಿ.ಹೆಚ್. ಚಂದ್ರಶೇಖರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು
ವಂದನೆಗಳೊಂದಿಗೆ
ಜಿ.ಡಿ. ಮಂಜುನಾಥ್ ರಾಜ್ಯ ಸಂಯೋಜಕರು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗ ಶಿವಮೊಗ್ಗ.