ವಿನೋಬನಗರ ಶ್ರೀ ಸ್ನೇಹಜೀವಿ ಗೆಳೆಯರ ಬಳಗ ವತಿಯಿಂದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ರವರಿಗೆ ಮನವಿ ಸಲ್ಲಿಸಿದರು. 

ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳು ಬೆಳಗ್ಗೆ 9:00 ಗಂಟೆಗೆ ಶಾಲೆಯನ್ನು ಪ್ರಾರಂಭ ಮಾಡುವುದರಿಂದ ಮಕ್ಕಳಿಗೆ ಬೆಳಗಿನ ತಿಂಡಿಯ ತೊಂದರೆ ಆಗುತ್ತದೆ. ಮಕ್ಕಳ ಮೇಲೆ ತುಂಬಾ ಒತ್ತಡ ಏರುವಂಥ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಆದ್ದರಿಂದ ಎಲ್ಲಾ ಶಾಲೆಗಳು ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗುವಂತೆ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಳಗದ ಶರತ್ ಚಂದ್ರ. ಕಾರ್ಯದರ್ಶಿ ಸಂತೋಷ್ ಆರ್. ಗ್ಯಾರೆಂಟಿ ಅನುಷ್ಠಾನ ಸದಸ್ಯ ಬಸವರಾಜ್. ಕೋಟೆ ಭೀಮಣ್ಣ. ಪ್ರಕಾಶ್ ಯು ಕೆ. ಫಸ್ಟ್ ಸ್ಟೆಪ್ ಆನಂದ್. ಪ್ರವೀಣ್. ಧನಂಜಯ್. ಗಿರೀಶ್ ಮಂತಾದವರು ಮನವಿ ಸಲ್ಲಿಸಿದರು.