


ಕರ್ನಾಟಕ ರಾಜ್ಯ ಪೊಲೀಸ್ ಓಟ – 2024ರ ಯಶಸ್ಸಿನ ಹಿನ್ನೆಲೆಯಲ್ಲಿ, 2ನೇ ಆವೃತ್ತಿಯ ಕರ್ನಾಟಕ ರಾಜ್ಯ ಪೊಲೀಸ್ ಓಟವನ್ನು “ನಮ್ಮ ಪೊಲೀಸ್ ನಮ್ಮ ಹೆಮ್ಮೆ,” “ಎಲ್ಲರಿಗಾಗಿ ಫಿಟ್ ನೆಸ್” ಮತ್ತು “ಮಾದಕ ದ್ರವ್ಯ ಮುಕ್ತ ಕರ್ನಾಟಕ” ಧ್ಯೇಯ ವಾಖ್ಯದೊಂದಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ 09ರಂದು ಭಾನುವಾರ
ಶಿವಮೊಗ್ಗ ನಗರದಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ 5K ಮತ್ತು ಪುರುಷರಿಗಾಗಿ 10 K Karnataka State Police Run - 2025 ಮ್ಯಾರಥಾನ್ ಓಟವನ್ನು ಹಮ್ಮಿಕೊಂಡಿದ್ದು, ಶ್ರೀ ಚನ್ನಬಸಪ್ಪ ಶಾಸಕರು, ಶಿವಮೊಗ್ಗ ವಿಧಾನಸಭಾ ಕ್ಷೇತ್ರ, ಡಾ|| ಧನಂಜಯ್ ಸರ್ಜಿ ಎಂ.ಎಲ್.ಸಿ, ನೈರುತ್ಯ ಪದವೀಧರ ಕ್ಷೇತ್ರ, ಶ್ರೀ ಹೇಮಂತ್, ಐಎಎಸ್ ಸಿಇಓ, ಜಿಲ್ಲಾ ಪಂಚಾಯತ್, ಶಿವಮೊಗ್ಗ, ಶ್ರೀ ಮಿಥುನ್ ಕುಮಾರ್ ಜಿ. ಕೆ. ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆರವರು ಬಲೂನ್ ಗಳನ್ನು ಹಾರಿಸಿ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿದರು.



ಮ್ಯಾರಥಾನ್ ಓಟವನ್ನು ಡಿಎಆರ್ ಪೊಲೀಸ್ ಕವಾಯತು ಮೈದಾನದಿಂದ ಪ್ರಾರಂಭಿಸಿ, ಅಶೋಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ಶಿವಪ್ಪ ನಾಯಕ ವೃತ್ತ, ಕರ್ನಾಟಕ ಸಂಘ ವೃತ್ತ, ಡಿವಿಎಸ್ ವೃತ್ತ, ಮಹಾವೀರ ವೃತ್ತ, ಶಿವಮೂರ್ತಿ ವೃತ್ತ, ಜೈಲ್ ವೃತ್ತ, ಐಬಿ ವೃತ್ತದ ಮುಖಾಂತರ ಡಿಎಆರ್ ಪೊಲೀಸ್ ಕವಾಯತು ಮೈದಾನಕ್ಕೆ ಬಂದು ಮುಕ್ತಾಯ ಮಾಡಲಾಯಿತು. 10K ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಕಿರಣ್, ದ್ವಿತೀಯ ಸ್ಥಾನವನ್ನು ನಂದನ್ ತೃತೀಯ ಸ್ಥಾನವನ್ನು ಭರತ್ ರವರು ಹಾಗೂ 5 K ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಬಾಲು ದ್ವಿತೀಯ ಸ್ಥಾನವನ್ನು ಧನರಾಜ್ ತೃತೀಯ ಸ್ಥಾನವನ್ನು ಧನುಷ್ ಹಾಗೂ 5 K ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಧೀಕ್ಷಾ ದ್ವಿತೀಯ ಸ್ಥಾನವನ್ನು ಸಾನಿಕ ತೃತೀಯ ಸ್ಥಾನವನ್ನು ಸೋನಿಯಾ ರವರು ಪಡೆದರು.
ಪ್ರಥಮ ಸ್ಥಾನ ಪಡೆದ ವಿಜೇತರಿಗೆ ರೂ 10,000/- ನಗದು ಬಹುಮಾನ, ಪದಕ ಮತ್ತು ಪ್ರಶಸ್ತಿ ಪತ್ರವನ್ನು, ದ್ವಿತೀಯ ಸ್ಥಾನ ಪಡೆದ ವಿಜೇತರಿಗೆ ರೂ 8,000/- ನಗದು ಬಹುಮಾನ, ಪದಕ ಮತ್ತು ಪ್ರಶಸ್ತಿ ಪತ್ರವನ್ನು ಹಾಗೂ ತೃತೀಯ ಸ್ಥಾನ ಪಡೆದ ವಿಜೇತರಿಗೆ ರೂ 5,000/- ನಗದು ಬಹುಮಾನ, ಪದಕ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಲಾಯಿತು ಹಾಗೂ ಮ್ಯಾರಥಾನ್ ನಲ್ಲಿ ಭಾಗವಹಿಸಿ, ಪೂರ್ಣಗೊಳಿಸಿದ ಎಲ್ಲರಿಗೂ ಪ್ರಶಂಸನಾ ಪತ್ರ ನೀಡಲಾಯಿತು
.
ಈ ಸಂದರ್ಭದಲ್ಲಿ ವ್ಯಸನ ಮುಕ್ತ ಸಮಾಜ ನಿರ್ಮಾಣ, ಸೈಬರ್ ಸುರಕ್ಷತಾ ಕ್ರಮಗಳು ಮತ್ತು ಸಂಚಾರ ನಿಯಮಗಳ ಕಡ್ಡಾಯ ಪಾಲನೆಯ ಕುರಿತು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು.ಸದರಿ ಮ್ಯಾರಥಾನ್ ನಲ್ಲಿ ಶ್ರೀ ಯುವಕುಮಾರ್ ಕಮಾಂಡೆಂಟ್, 8ನೇ ಪಡೆ, ಮಾಚೇನಹಳ್ಳಿ, ಶಿವಮೊಗ್ಗ, ಶ್ರೀ ಶಿವಕುಮಾರ್ ಕಮಾಂಡೆಂಟ್, 2ನೇ ಪಡೆ ಕೆ.ಎಸ್.ಐ.ಎಸ್.ಎಫ್, ಶಿವಮೊಗ್ಗ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 01, ಶಿವಮೊಗ್ಗ ಜಿಲ್ಲೆ, ಶ್ರೀ ಎ ಜಿ ಕಾರಿಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 02, ಶಿವಮೊಗ್ಗ ಜಿಲ್ಲೆ,
ಶ್ರೀ ಬಾಬು ಆಂಜನಪ್ಪ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಎ ಉಪ ವಿಭಾಗ, ಶ್ರೀ ಸಂಜೀವ್ ಕುಮಾರ್ ಟಿ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗ, ಶ್ರೀ ನಾಗರಾಜ್, ಪೊಲೀಸ್ ಉಪಾಧೀಕ್ಷಕರು, ಭದ್ರಾವತಿ ಉಪ ವಿಭಾಗ, ಗೋಪಾಲ ಕೃಷ್ಣ ಟಿ ನಾಯಕ್ ಪೊಲೀಸ್ ಉಪಾಧೀಕ್ಷಕರು ಸಾಗರ ಉಪ ವಿಭಾಗ, ಶ್ರೀ ಕೃಷ್ಣ ಮೂರ್ತಿ, ಪೊಲೀಸ್ ಉಪಾಧೀಕ್ಷಕರು, ಸಿಇಎನ್ ಕ್ರೈಂ ಪೊಲೀಸ್ ಠಾಣೆ, ಶಿವಮೊಗ್ಗ ಮತ್ತು ಶ್ರೀ ಕೃಷ್ಣ ಮೂರ್ತಿ, ಪೊಲೀಸ್ ಉಪಾಧೀಕ್ಷಕರು, ಡಿಎಆರ್ ಶಿವಮೊಗ್ಗ, ಶಿವಮೊಗ್ಗ ಜಿಲ್ಲಾ ಪೊಲೀಸ್ ನ ಅಧಿಕಾರಿ ಮತ್ತು ಸಿಬ್ಬಂಧಿಗಳು, ಕೆ.ಎಸ್.ಆರ್.ಪಿ 8ನೇ ಪಡೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳು, ಕೆ.ಎಸ್.ಐ.ಎಸ್.ಎಫ್ 2ನೇ ಪಡೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳು ಹಾಗೂ ಯುವಜನ ಮತ್ತು ಕ್ರೀಡಾ ಇಲಾಖೆಯ ವಿಧ್ಯಾರ್ಥಿಗಳು, ವಿವಿಧ ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳು, ಶಿವಮೊಗ್ಗದ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂಧಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.