ಶ್ರೀ ಉಮೇಶ್, 38 ವರ್ಷ, ಕಳಸಗುಂಡಿ ಗ್ರಾಮ ತೀರ್ಥಹಳ್ಳಿ ತಾಲ್ಲೂಕು ರವರು ಕೆಲಸದ ಮೇಲೆ ಊರಿಗೆ ಹೋಗಿದ್ದು, ಅವರ ತಂದೆ ತೋಟಕ್ಕೆ ಹೋಗಿ ಸಂಜೆ ಬಂದು ನೋಡಿದಾಗ, ಕಳ್ಳರು ಮನೆಯ ಬೀರುವಿನಲ್ಲಿ ಇಟ್ಟಿದ್ದ ಅಂದಾಜು ಮೌಲ್ಯ 4,93,000/- ರೂಗಳ ಬೆಳ್ಳಿ ಹಾಗೂ ಬಂಗಾರದ ಆಭರಣಗಳು ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು, ನೀಡಿದ ದೂರಿನ ಮೇರೆಗೆ ಮಾಳೂರು ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0009/2025 ಕಲಂ 305, 331(3) ಬಿ ಎನ್ ಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

ಪ್ರಕರಣದಲ್ಲಿ ಕಳುವದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 1 ಶಿವಮೊಗ್ಗ ಜಿಲ್ಲೆ, ಶ್ರೀ ಕಾರಿಯಪ್ಪ ಎ.ಜಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 2 ಶಿವಮೊಗ್ಗ ಜಿಲ್ಲೆ, ರವರ ಮಾರ್ಗದರ್ಶನದಲ್ಲಿ, ಶ್ರೀ ಅರವಿಂದ್ ಎನ್ ಕಲಗುಚ್ಚಿ ಪೊಲೀಸ್ ಉಪಾಧೀಕ್ಷಕರು ತೀರ್ಥಹಳ್ಳಿ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ, ಶ್ರೀ ಶ್ರೀಧರ್ ಪೊಲೀಸ್ ವೃತ್ತ ನಿರೀಕ್ಷಕರು ಮಾಳೂರು ವೃತ್ತ ರವರ ನೇತೃತ್ವದಲ್ಲಿ, ಶ್ರೀ ಕುಮಾರ್ ಕುರಗುಂದ ಪಿಎಸ್ಐ, ಮಾಳೂರು ಪೊಲೀಸ್ ಠಾಣೆ ಶ್ರೀ ಶಿವಾನಂದ ಧರೇನವರ್, ಪಿಎಸ್ಐ ಮಾಳೂರು ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಹೆಚ್. ಸಿ ಸುರಕ್ಷಿತ್, ಮೋಹನ್, ಮೇಘರಾಜ್, ಮಂಜುನಾಥ, ಲೊಕೇಶ್, ಸಿಪಿಸಿ ಸಂತೋಷ್ ಕುಮಾರ್, ರಮೇಶನಾಯ್ಕ, ವಿವೇಕ, ಪುನೀತ್ ಕುಮಾರ್, ವಿನಯ್ ಕುಮಾರ್, ಅರವಿಂದ, ಚೇತನ್ ಕುಮಾರ್ ಅಭಿಲಾಷ್, ಮಂಜಾನಾಯ್ಕ, ಪ್ರವೀಣ್ ಕುಮಾರ್ ಮತ್ತು ಪ್ರಸನ್ನ ರವರನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ದಿನಾಂಕಃ 13-03-2025 ರಂದು ಪ್ರಕರಣದ ಆರೋಪಿತರಾದ 1) ಅಬ್ದುಲ್ ಶಫೀಕ್ ಅಬ್ದುಲ್ ರಶೀದ್, 21 ವರ್ಷ, ಶ್ರೀರಾಮನಗರ, ಗೋಪಾಳ, ಶಿವಮೊಗ್ಗ. 2) ಖಲೀಲ್ ಖಾನ್ 24 ವರ್ಷ, ಸೂಳೆಬೈಲ್ ಶಿವಮೊಗ್ಗ ಟೌನ್ ಮತ್ತು 3) ಸೈಯದ್ ಜಾವೀದ್ @ ಶೋಯೆಬ್, 23 ವರ್ಷ, ಜೆ.ಪಿ. ನಗರ, ಶಿವಮೊಗ್ಗ ಟೌನ್ ಇವರುಗಳನ್ನು ದಸ್ತಗಿರಿ ಮಾಡಿ ಸದರಿ ಆರೋಪಿತರಿಂದ ಮೇಲ್ಕಂಡ ಪ್ರರಕಣವೂ ಸೇರಿದಂತೆ, ಮಾಳೂರು ಪೊಲೀಸ್ ಠಾಣೆಯಲ್ಲಿ 2025ನೇ ಸಾಲಿನಲ್ಲಿ ವರದಿಯಾದ 2 ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 80,000/- ರೂಗಳ ಸುಜುಕಿ ಆಕ್ಸೆಸ್ ಸ್ಕೂಟರ್, ಅಂದಾಜು ಮೌಲ್ಯ 5,50,000/- ರೂಗಳ 72 ಗ್ರಾಂ ತೂಕದ ಬಂಗಾರದ ಆಭರಣಗಳು, ಅಂದಾಜು ಮೌಲ್ಯ 22,000/- ರೂಗಳ 265 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಸೇರಿ ಒಟ್ಟು 6,52,000/- ರೂಪಾಯಿಯ ಬೆಳ್ಳಿ, ಬಂಗಾರದ ಆಭರಣಗಳು ಮತ್ತು ದ್ವಿ ಚಕ್ರ ವಾಹನವನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತರನ್ನು ಘನ ನ್ಯಾಯಾಲಯಕ್ಕೆ ಹಾಜರ್ ಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.