ಶಿವಮೊಗ್ಗ : ಅಂತರಾಷ್ಟ್ರೀಯ ಪ್ರತಿಷ್ಠಿತ ಸೇವಾ ಸಂಸ್ಥೆಗಳಲ್ಲಿ ಒಂದಾದ ಇನ್ನರ್ ವೀಲ್ ಸಂಸ್ಥೆಗೆ ಜಿಲ್ಲಾ ಚೇರ್ಮನ್ ಆಗಿ ಶಿವಮೊಗ್ಗದ ಇನ್ನರ್ ವೀಲ್ ಶಿವಮೊಗ್ಗ ಪೂರ್ವ ಸಂಸ್ಥೆಯ ಶಬರಿ ಕಡಿದಾಳವರು ಆಯ್ಕೆಯಾಗಿದ್ದಾರೆ.

2025 -26 ನೇ ಸಾಲಿಗೆ ಇನ್ನರ್ ವೀಲ್ ಸಂಸ್ಥೆ ಎಂಟು ರೆವಿನ್ಯೂ ಜಿಲ್ಲೆಗಳಾದ ಹಾಸನ, ಮೈಸೂರು, ಶಿವಮೊಗ್ಗ, ಚಿಕ್ಕಮಂಗಳೂರು, ಮಡಿಕೇರಿ, ಉಡುಪಿ, ಮಂಗಳೂರು, ಚಾಮರಾಜನಗರ, ಈ ಜಿಲ್ಲೆಗಳನ್ನು ಒಳಗೊಂಡಂತೆ 55 ಇನ್ನರ್ ವೀಲ್ ಕ್ಲಬ್ ಗಳಿದ್ದು, ಈ ಕ್ಲಬ್ ಗಳ ನಾಯಕತ್ವವನ್ನು ವಹಿಸಿ ಜಿಲ್ಲಾ ಚೇರ್ಮನ್ ಆಗಿ ಆಯ್ಕೆಯಾಗಿದ್ದಾರೆ.

ಈ ಪ್ರತಿಷ್ಠಿತ ಹುದ್ದೆ ಒಂದು ವರ್ಷಗಳ ಕಾಲ ಅವಧಿಗೆ ಇದ್ದು, ಅನೇಕ ಸೇವಾ ಕಾರ್ಯಗಳ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ ಇವರಿಗೆ ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವ ವತಿಯಿಂದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಸನ್ಮಾನಿಸಿ ಗೌರವಿಸಿದರು.

ಶಬರಿ ಕಡಿದಾಳ್ ಇವರು ಡಾ. ಕಡಿದಾಳ್ ಗೋಪಾಲ್ ಅವರ ಪುತ್ರಿಯಾಗಿದ್ದು, ಶಬರಿ ಕಡಿದಾಳ್ ರವರು ಶಿವಮೊಗ್ಗದ ಗೆಳತಿ. ಶಾರದಾ ಜೆಸಿ, ಎಲೈಟ್ ಸಂಸ್ಥೆ, ಶ್ರೀನಿಧಿ ಎಜುಕೇಶನ್ ಟ್ರಸ್ಟ್ ನ ಟ್ರಸ್ಟಿ, ಒಕ್ಕಲಿಗರ ಮಹಿಳಾ ವೇದಿಕೆಯಲ್ಲಿ ಪದಾಧಿಕಾರಿಗಳಾಗಿ ಹಾಗೂ ಶಿವಮೊಗ್ಗದ ಅನೇಕ ಸಂಘ ಸಂಸ್ಥೆಗಳಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವರು.

ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್, ವಿಜಯ ರಾಯ್ಕರ್, ಪದ್ಮಿನಿ ಹೋಬಳಿದಾರ್, ಆಶಾ ಶ್ರೀಕಾಂತ್, ರಾಜೇಶ್ವರಿ ಪ್ರತಾಪ್, ವೇದಾ ನಾಗರಾಜ್, ಮಧುರ ಮಹೇಶ್, ಜ್ಯೋತಿ ಸುಬ್ಬೇಗೌಡ, ಅನಿತಾ ರವಿಶಂಕರ್, ಸೀತಾಲಕ್ಷ್ಮೀ, ಸುಮತಿ ಕುಮಾರಸ್ವಾಮಿ, ಜ್ಯೋತಿ, ಡಾ. ಲಲಿತಾ ಭರತ್, ಭಾಗ್ಯ ಹಾಗೂ ಇನ್ನರ್ ವೀಲ್ ಸದಸ್ಯರು ಉಪಸ್ಥಿತರಿದ್ದರು.