ಜೆಡಿಎಸ್ ವತಿಯಿಂದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ರವರಿಗೆ ಮನವಿ ನಗರದ ನಾಗರೀಕರಿಗೆ ಅನುಕೂಲ ಕಲ್ಪಿಸಿಕೊಡಲು ಮಹಾನಗರ ಪಾಲಿಕೆ ಆಡಳಿತ ಹೊಸದಾಗಿ ಅಸ್ತಿತ್ವಕ್ಕೆ ತಂದಿರುವ ಮೂರು ವಲಯ ಕಚೇರಿಗಳ ವಾರ್ಡ್ ಗಳ ಹಂಚಿಕೆ ಅವೈಜ್ಞಾನಿಕವಾಗಿದೆ ಎಂದು ಜೆಡಿಎಸ್ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ.
ವಿನೋಬನಗರ ಪೊಲೀಸ್ ಚೌಕಿ ಬಳಿಯಿರುವ ಪಾಲಿಕೆ ವಲಯ ಕಚೇರಿ 1 ಕ್ಕೆ ವಾರ್ಡ್ ಗಳಾದ 1, 2, 3, 4, 6, 7, 8, 9, 32, 33, 34 ನ್ನು ಹಂಚಿಕೆ ಮಾಡಲಾಗಿದೆ. ಸದರಿ ವಾರ್ಡ್ ಗಳ ಪೈಕಿ 32, 33 ಹಾಗೂ 34 ಕ್ರಮವಾಗಿ ಟಿಪ್ಪುನಗರ, ಸವಾಳಿ ಪಾಳ್ಯ ಹಾಗೂ ವಿದ್ಯಾನಗರ ದಕ್ಷಿಣ ಭಾಗಗಳಾಗಿವೆ. ವಿನೋಬನಗರ ವಲಯ ಕಚೇರಿಯಿಂದ ಸುಮಾರು 5 ರಿಂದ 6 ಕಿ.ಮೀ. ದೂರದಲ್ಲಿವೆ ಎಂದು ಮನವಿ ಪತ್ರದಲ್ಲಿ ತಿಳಿಸಿದರು.
ಹಾಗೆಯೇ ವಲಯ ಕಚೇರಿ 3 ರ ವ್ಯಾಪ್ತಿಗೆ ವಾರ್ಡ್ 12, 13, 14, 15, 16, 17. 18, 19, 23, 24, 25, 27 ಹಾಗೂ 28 ಹಂಚಿಕೆ ಮಾಡಲಾಗಿದೆ. ಈ ಪೈಕಿ 18 ಮತ್ತು 19 ನೇ ವಾರ್ಡ್ ಗಳು ಕ್ರಮವಾಗಿ ವಿನೋಬನಗರ ದಕ್ಷಿಣ ಹಾಗೂ ಶರಾವತಿ ನಗರ ಆಗಿರುತ್ತದೆ. ವಲಯ ಕಚೇರಿಯಿರುವ ಪ್ರದೇಶಕ್ಕೆ ವಿನೋಬನಗರ ಹಗೂ ಶರಾವತಿ ನಗರ ಪ್ರದೇಶಗಳಿಗೆ ದೂರವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರೂ ಆದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್, ಶಿವಮೊಗ್ಗ ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್, ಮುಖಂಡರಾದ ಉಮಾಶಂಕರ್ ಉಪಾಧ್ಯಯ, ಕೃಷ್ಣ, ವೆಂಕಟೇಶ್, ವಿಜಯ್ ಕುಮಾರ್, ಸಂಜಯ್ ಕಶ್ಯಪ್,ದಯಾನಂದ ಸಾಲಾಗಿ, ಮಾಧವಮೂರ್ತಿ, ಸಿದ್ದೇಶ್, ಗೋವಿಂದ್ ರಾಜ್, ಗೋಪಿ ಮೊದಲಿಯಾರ್, ನಿಹಾಲ್ ಖಾನ್, ನೀಲು, ರುದ್ರೇಶ್, ಮೂರ್ತಿ, ಪ್ರಪುಲ್ಲ ಚಂದ್ರಶೇಖರ್, ಚಿನ್ನು, ಬಸಪ್ಪ, ಪುಷ್ಪ, ಲಕ್ಷ್ಮೀ, ಸರಿತ ಮುಂತಾದವರು ಉಪಸ್ಥಿತರಿದ್ದರು.