ಹಿಂದೂ ಜಾಗರಣ ವೇದಿಕೆ ಖಚಿತ ಕಾರ್ಯಕರ್ತರ ಮಾಹಿತಿ ಮೇರೆಗೆ ಪೊಲೀಸರಿಂದ ಗೋವುಗಳ ರಕ್ಷಣೆ.
ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಗೋ ರಕ್ಷಣೆ ಚಟುವಟಿಕೆ ಜಿಲ್ಲೆಯಲ್ಲಿ ಸತತವಾಗಿ ಬೆನ್ನು ಬಿಡದೆ ಮುಂದುವರೆದಿದೆ.ಬೆಳಗ್ಗೆ ಭದ್ರಾವತಿ ಹೊಳೆಹೊನ್ನೂರು ಪೊಲೀಸ್ ಠಾಣೆ ಲಿಮಿಟ್ ಮತ್ತು ಸೊರಬ ಪೊಲೀಸ್ ಠಾಣೆ ಲಿಮಿಟ್ ನಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿವೆ.
ಹೊಳೆ ಹೊನ್ನೂರು ಪಟ್ಟಣದಲ್ಲಿ ಗಾಡಿ ಸಂಖ್ಯೆ KA 26 A 3549 ಅಶೋಕ್ ಲೇಲ್ಯಾಂಡ್ ವಾಹನದಲ್ಲಿ ಯಾವುದೇ ಪರವಾನಗಿಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 4 ಮಲ್ನಾಡ್ ಗಿಡ್ಡ ತಳಿಯ ಗೋವುಗಳು ಪೊಲೀಸರು ರಕ್ಷಣೆ ಮಾಡಿ ಪ್ರಕರಣ ದಾಖಲಿಸಿಕೊಂಡು ಗೋ ಶಾಲೆಗೆ ಬಿಡಲಾಗಿದೆ.
ಸೊರಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಲೆರೋ ಪಿಕಪ್ ಗಾಡಿ ಸಂಖ್ಯೆ KA 47 6172 ರಲ್ಲಿ ಯಾವುದೇ ಪರವಾಗಿ ಇಲ್ಲದೆ ಸಾಗಿಸುತ್ತಿದ್ದ ನಾಲ್ಕು ಮಲ್ನಾಡ್ ಗಿಡ್ಡ ತಳಿಯ ಗೋವುಗಳನ್ನು ರಕ್ಷಣೆ ಮಾಡಿ ಪ್ರಕರಣ ದಾಖಲಿಸಿಕೊಂಡು ಗೋವುಗಳನ್ನು ಗೋಶಾಲೆಗೆ ಬಿಟ್ಟಿದ್ದಾರೆ.