ಸಹ್ಯಾದ್ರಿ ಸ್ನೇಹ ಸಂಘ, ನೆಹರು ಕ್ರೀಡಾಂಗಣ ಶಿವಮೊಗ್ಗ ಹಾಗೂ ಕಂಪನಿಯೋ ಸಂಸ್ಥೆ ಇವರ ಜಂಟಿ ಸಹಯೋಗದಲ್ಲಿ
ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರ ವನ್ನು ಆಯೋಜಿಸಲಾಗಿದೆ.
ಕಂಪಾನಿಯೋ ಸಂಸ್ಥೆಯವರು ದೇಶಿಯವಾಗಿ ಉತ್ಪಾದನೆ ಮಾಡಿರುವ ಉಪಕರಣಗಳನ್ನು ಬಳಸಿ ಈ ಥೆರಪಿ ಚಿಕಿತ್ಸೆಯನ್ನು ನೀಡಲಾಗುವುದು.
ಅನೇಕ ದೀರ್ಘಾವಧಿ ದೈಹಿಕ ತೊಂದರೆಗಳು ಮತ್ತು ಖಾಯಿಲೆಗಳನ್ನು ಪರಿಹರಿಸಿಕೊಳ್ಳಲು ಈ ಥೆರಪಿ ಪರಿಣಾಮಕಾರಿ ಚಿಕಿತ್ಸಕ ಮಾರ್ಗವಾಗಿದೆ.
ದೇಶದಾದ್ಯಂತ ಮತ್ತು ಶಿವಮೊಗ್ಗ ನಗರದಲ್ಲಿ ಲಕ್ಷಾಂತರ ಜನರು ಈ ಥೆರಪಿಯಿಂದ ಗುಣಮುಖರಾಗಿದ್ದಾರೆ.
ನೆಹರು ಕ್ರೀಡಾಂಗಣದಲ್ಲಿ ದಿನಾಂಕ: 6-4-2025 ರಿಂದ ಪ್ರಾರಂಭಗೊಂಡು 16-4-2025 ರವರೆಗೆ 11 ದಿನಗಳು ನಿರಂತರವಾಗಿ ನಡೆಯಲಿರುವ ಈ ಉಚಿತ ಥೆರಪಿ ಚಿಕಿತ್ಸಾ ಶಿಬಿರದ ಪ್ರಯೋಜನವನ್ನು ತಾವು ಮತ್ತು ತಮ್ಮ ಕುಟುಂಬ ವರ್ಗದವರು ಪಡೆಯಬೇಕಾಗಿ ಸಹ್ಯಾದ್ರಿ ಸ್ನೇಹ ಸಂಘದ ಪರವಾಗಿ ವಿನಮ್ರವಾಗಿ ಕೋರುತ್ತೇವೆ.
ಅಧ್ಯಕ್ಷರು, ಕಾರ್ಯದರ್ಶಿಮತ್ತು ಕಾರ್ಯಕಾರಿ ಸಮಿತಿ ಸದಸ್ಯರು
ಸಹ್ಯಾದ್ರಿ ಸ್ನೇಹ ಸಂಘ, ಶಿವಮೊಗ್ಗ