ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕಂಬದಾಳು ಹೊಸೂರು ಪಿಡಿಒ ಮತ್ತು ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲಂಚ ಸ್ವೀಕರಿಸುವ ವೇಳೆ ಇಬ್ಬರನ್ನೂ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಕಾಳನಕಟ್ಟೆ ಗ್ರಾಮದಲ್ಲಿನ ಸರ್ವೆ ನಂಬರ್ 144 ರಲ್ಲಿನ 30×40 ಖಾಲಿ ಜಾಗವನ್ನ ಚೆಕ್ ಬಂದಿ ನಿಗದಿಪಡಿಸುವಂತೆ ಕೋರಿ ಶಾಲಾವಾಹನ ಕೆಲಸ ಮಾಡಿಕೊಂಡಿದ್ದ ದಿನೇಶ್ ಎಂಬುವರು ಅರ್ಜಿ ಸಲ್ಲಿಸಿ ಇದನ್ನ ಇ-ಸ್ವತ್ತು ಮಾಡಿಕೊಡಲು ಕೋರಿದ್ದರು.
ಈ ಕೆಲಸಕ್ಕೆ ಪಿಡಿಒ ಮಹಮದ್ ಅಲಿ ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುರೇಶ್ 30 ಸಾವಿರ ರೂ. ಬೇಡಿಕೆ ಇಟ್ಟಿದ್ದರು. ದಿನೇಶ್ 15 ಸಾವಿರ ರೂ.ಹಣವನ್ನ ಗ್ರಾಮ ಪಂಚಾಯಿತಿ ಎದುರು ಲಂಚವಾಗಿ ನೀಡುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಇಬ್ವರನ್ನೂ ಲೋಕಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.