ನಾಗರಿಕ ಹಿತರಕ್ಷಣಾ ವೇದಿಕೆ ಮತ್ತು ಅಣ್ಣ ಹಜಾರೆ ಹೋರಾಟದ ಸಮಿತಿ…

ಶಿವಮೊಗ್ಗ ನಗರದ ಹಿರಿಯ ವೈದ್ಯರು ವಿಶೇಷ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಡಾಕ್ಟರ್ ಎನ್. ಎಲ್. ನಾಯಕ್ ಪುತ್ರ ಡಾಕ್ಟರ್ ರಾಮಪ್ರಸನ್ನ ನಾಯಕ್ ಇವರು ಮಹಾರಾಷ್ಟ್ರದ ಶಿರಡಿಯ ಶ್ರೀ ಸಾಯಿನಾಥ ಹಾಸ್ಪಿಟಲ್ ಇಲ್ಲಿ ಕಳೆದ 23 ವರ್ಷಗಳಿಂದ ಕನ್ಸಲ್ಟೆಂಟ್ ಸರ್ಜನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಸುದೀರ್ಘ ಸೇವಾ ಅವಧಿಯಲ್ಲಿ ಡಾ. ರಾಮ್ ಪ್ರಸನ್ನ ಇವರು 2,72,690 ರೋಗಿಗಳಿಗೆ ಚಿಕಿತ್ಸೆ ನೀಡಿ ಅವರಲ್ಲಿ 59637 ರೋಗಿಗಳಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿರುತ್ತಾರೆ.
ಇವರ ಈ ಶ್ರದ್ಧೆ, ನಿಷ್ಠೆ, ಬದ್ಧತೆ ಮತ್ತು ಅವಿರತ ವೈದ್ಯಕೀಯ ಸೇವೆಯನ್ನು
WORLD BOOK OF RECORDS, LONDON
ಇವರು ಗುರುತಿಸಿ
ಪ್ರಶಂಸಾ ಪತ್ರವನ್ನು ನೀಡಿರುತ್ತಾರೆ.

ಇವರ ಈ ಅದ್ಭುತವಾದ ಸಾಧನೆ ನಮ್ಮ ನಾಗರಿಕ ಸಮಾಜಕ್ಕೆ ಅತ್ಯಂತ ಹೆಮ್ಮೆಯ ಮತ್ತು ಗೌರವದ ಪ್ರತೀಕವಾಗಿದೆ.

ಡಾಕ್ಟರ್ ರಾಮಪ್ರಸನ್ನ ನಾಯಕ್ ಅವರ ಈ ಅದ್ಭುತ ಸಾಧನೆಗೆ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟ ಮತ್ತು ಅಣ್ಣ ಹಜಾರೆ ಹೋರಾಟ ಸಮಿತಿ ವತಿಯಿಂದ ಅವರ ತಂದೆ ತಾಯಿಗೆ ಶುಭಾಶಯ ಕೋರಿ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೆ ವಿ ವಸಂತ್ ಕುಮಾರ್ ಡಾ ಸತೀಶ್ ಕುಮಾರ್ ಶೆಟ್ಟಿ ಅಶೋಕ್ ಕುಮಾರ್  ಚನ್ನವೀರಪ್ಪ ಗಾಮನಗಟ್ಟಿ ಸುಬ್ಬಣ್ಣ ಆನಂದ್ ಸುರೇಶ್ ಬಾಬು ನಾಗೇಂದ್ರ ಶ್ರೀಕಾಂತ್ ಮುಂತಾದವರು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *