ಕೇಂದ್ರೀಯ ಸೈನಿಕ ಮಂಡಳಿ (ಕೆ.ಎಸ್.ಬಿ)ಯ ಜಾಲತಾಣವು ತಾಂತ್ರಿಕ ದೋಷದಿಂದಾಗಿ ಕಾರ್ಯ ನಿರ್ವಹಿಸುತ್ತಿಲ್ಲವಾಗಿದ್ದು, ಉನ್ನತೀಕರಣದ (Upgradation) ಕಾರ್ಯವು ಪ್ರಗತಿಯಲ್ಲಿದ್ದು ಪೂರ್ಣಗೊಳ್ಳಲು ಸುಮಾರು 2 ರಿಂದ 3 ತಿಂಗಳುಗಳು ಬೇಕಾಗಬಹುದು. ಏ. 03 ರ ನಂತರದ ದಿನಗಳಲ್ಲಿ ಕೆ.ಎಸ್.ಬಿ ಯಿಂದ ಗಣಕೀಕೃತವಾಗಿ ತಿರಸ್ಕೃತಗೊಂಡ ಅರ್ಜಿಗಳನ್ನು ಪುನಃಸ್ಥಾಪಿಸಲಾಗುವುದು ಹಾಗೂ ಈ ಸಮಯದಲ್ಲಿ ಯಾವುದೇ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದಲ್ಲಿ, ಅಂತಹ ಯೋಜನೆಗಳಿಗೆ ಕೋರಿಕೆಯ ಮೇರೆಗೆ ಮರು ಅವಕಾಶ ಕಲ್ಪಿಸಲಾಗುವುದು.

ಇನ್ನಿತರೆ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಬಾಕಿಯಿರುವವರು ಜಾಲತಾಣ ಉನ್ನತೀಕರಣಗೊಂಡ ಕೂಡಲೇ ಎಲ್ಲಾ ನವೀಕೃತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವುದು ಹಾಗೂ ಈ ಕುರಿತಂತೆ ಯಾವುದಾದರೂ ಮಾಹಿತಿಯಿದ್ದಲ್ಲಿ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂಬುದನ್ನು ಕೇಂದ್ರೀಯ ಸೈನಿಕ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *