ಗ್ರಾಹಕರು ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸುವ ಸಮಯದಲ್ಲಿ ವರ್ತಕರು ಉಪಯೋಗಿಸುವ ತೂಕ/ಅಳತೆ/ತೂಕದ ಸಾಧನಗಳು/ಅಳತೆ ಸಾಧನಗಳು, ತೂಕ ಮತ್ತು ಅಳತೆ ಇಲಾಖೆಯಿಂದ ನಿಗದಿತ ಸಮಯದಲ್ಲಿ ಅವುಗಳ ನಿಖರತೆಗಾಗಿ ಪರಿಶೀಲಿಸಿ ಮುದ್ರೆ ಮಾಡಿಸಿಕೊಂಡಿದ್ದಾರೆಯೇ ಹಾಗೂ ಪ್ರಮಾಣ ಪತ್ರ ಹೊಂದಿದ್ದಾರೆಯೇ ಎಂಬುದನ್ನು ಖಾತ್ರಿ ಪಡಿಸಿಕೊಂಡು ವಸ್ತುಗಳನ್ನು ಅಥವಾ ಸಾಮಗ್ರಿಗಳನ್ನು ಖರೀದಿಸಬೇಕೆಂದು ಕಾನೂನು ಮಾಪನಶಾಸ್ತç ಇಲಾಖೆ ತಿಳಿಸಿದೆ.
ಗ್ರಾಹಕರು ಅಂಗಡಿಯಲ್ಲಿ ವಸ್ತುಗಳನ್ನ ಖರೀದಿಸುವಾಗ ತಯಾರಕರ/ಪ್ಯಾಕರ್ ರವರ/ಆಮದುದಾರರ ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಇ-ಮೇಲ್ ಐಡಿ, ಸಾಮಗ್ರಿ ಅಥವಾ ವಸ್ತುವಿನ ಹೆಸರು, ಸಾಮಗ್ರಿಯ ನಿವ್ವಳ ತೂಕ(ಸ್ಟಾö್ಯಂಡರ್ಡ್ ಯೂನಿಟ್‌ಗಳಲ್ಲಿ-ಗ್ರಾಂ/ಲೀಟರ್/ಸAಖ್ಯೆ), ಸಾಮಗ್ರಿಗಳು ತಯಾರಾದ ತಿಂಗಳು ಮತ್ತು ವರ್ಷ, ಎಂಆರ್‌ಪಿ ಅಥವಾ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ ರೂ….(ಎಲ್ಲಾ ತೆರಿಗೆ ಸೇರಿ), ಅನ್ವಯಿಸುವಂಥ ಪದಾರ್ಥಗಳಿಗೆ ಸಾಮಗ್ರಿ ಅಳತೆ(ಸ್ಟಾö್ಯಂಡರ್ಡ್ ಯೂನಿಟ್‌ಗಳಲ್ಲಿ) ಪರಿಶೀಲಿಸಿಕೊಳ್ಳಬೇಕು.
ಪೊಟ್ಟಣ ಸಾಮಗ್ರಿಗಳನ್ನು ಎಂಆರ್‌ಪಿ ಗಿಂತಲೂ ಅಧಿಕ ಬೆಲೆಗೆ ಮಾರಾಟ ಮಾಡುವುದು ದಂಡಾರ್ಹ ಅಪರಾಧ.
ಪೊಟ್ಟಣ ಸಾಮಗ್ರಿಗಳ ಮೇಲೆ ಎಂಆರ್‌ಪಿ/ಮೇಲೆ ಹೇಳಲಾದ ಯಾವುದೇ ಕಡ್ಡಾಯ ಘೋಷಣೆಗಳನ್ನು ತಿದ್ದುವುದು/ಅಳಿಸುವುದು/ಸ್ಟಿಕ್ಕರ್ ಬಳಸಿ ಮಾರ್ಪಡಿಸುವುದು ದಂಡಾರ್ಹ ಅಪರಾಧವಾಗಿದೆ.ಉಲ್ಲಂಘನೆಗಳು ಏನಾದರೂ ಕಂಡುಬAದಲ್ಲಿ ಸಹಾಯವಾಣಿ ಸಂಖ್ಯೆ 18005991100 ಗೆ ದೂರನ್ನು ಸಲ್ಲಿಸಬಹುದು. ಹಾಗೂ ಕಾನೂನು ಮಾಪನಶಾಸ್ತç ಸಹಾಯಕ ನಿಯಂತ್ರಕರ ಕಚೇರಿ, ಜಿಲ್ಲಾ ಮಾಪನ ಭವನ, ಅಟಲ್ ಬಿಹಾರಿ ವಾಜಪೇಯಿ ಬಡಾವಣೆ, ಮಾಧವ ಮಂಗಲ ಸಭಾಭವನÀದ ಹತ್ತಿರ, ಸಾಗರ ರಸ್ತೆ ಶಿವಮೊಗ್ಗ ಇಲ್ಲಿ ಸಹ ದೂರನ್ನು ಸಲ್ಲಿಸಬಹುದು.
ವರ್ತಕರು/ಮಾರಾಟಗಾರರು/ನ್ಯಾಯಬೆಲೆ ಅಂಗಡಿಗಳು/ಪೆಟ್ರೋಲ್ ಬಂಕ್‌ಗಳು/ಕೈಗಾರಿಕೋದ್ಯಮಗಳು ದಿ ಲೀಗಲ್ ಮೆಟ್ರಾಲಜಿ ಆಕ್ಟ್ 2009, ಪೊಟ್ಟಣ ಸಾಮಗ್ರಿ ನಿಯಮ 2011 ಹಾಗೂ ಇತರೆ ನಿಯಮಗಳು 2011 ರ ಮೇಲ್ಕಂಡ ಅಂಶಗಳನ್ನು ಕಡ್ಡಾಯವಾಗಿ ಚಾಚೂ ತಪ್ಪದೇ ಪಾಲಿಸಿ ಗ್ರಾಹಕರಿಗೆ ನ್ಯಾಯ ಒದಗಿಸಬೇಕು. ತಪ್ಪಿದಲ್ಲಿ ಸದರಿ ನಿಯಮಗಳ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದು.
ಈ ನಿಟ್ಟಿನಲ್ಲಿ ಇಲಾಖೆಯು ಈಗಾಗಲೇ ಸುಮೊಟೊ ಅಧಿಕಾರದಲ್ಲಿ ಸಾಕಷ್ಟು ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಕಾನೂನು ಮಾಪನಶಾಸ್ತç ಇಲಾಖೆಯ ಸಹಾಯಕ ನಿಯಂತ್ರಕರಾದ ಹೆಚ್.ಎಸ್.ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.