ಗೋಪಾಳದ ಶ್ರೀ ಸಿದ್ಧಿ ಬುದ್ಧಿ ಮಹಾಗಣಪತಿ ದೇವಾಲಯದಲ್ಲಿ ಇಂದು 4ನೇ ವರ್ಷದ ವರ್ಧಂತೋತ್ಸವ ಕಾರ್ಯಕ್ರಮ ಮತ್ತು ದೇವರಿಗೆ ವಿಶೇಷ ರೀತಿಯ ಪೂಜೆ ಅಭಿಷೇಕಗಳು ನಡೆಯಿತು.ಮುಖ್ಯ ಅತಿಥಿಗಳಾಗಿ ಡಾ ಬಸವ ಮರುಳಸಿದ್ದ ಸ್ವಾಮಿಗಳು ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಿದ್ಧಿ ಬುದ್ಧಿ ಮಹಾಗಣಪತಿ ದೇವಾಲಯದಲ್ಲಿ ಸತತ ಮೂರು ವರ್ಷಗಳಿಂದ ಒಳ್ಳೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ.ಮುಂದೆಯೂ ಸಹ ಇದೇ ರೀತಿಯಲ್ಲಿ ವಿಶೇಷ ದೇವರ ಪೂಜೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಯಕ್ಷಗಾನ ಮಾಡಲಿ ಎಂದು ಆಶಿಸುತ್ತೇನೆ ಎಂದರು.
ಈ ಸಮಯದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆಇ ಕಾಂತೇಶ್ ಮತ್ತು ಜೆಡಿಎಸ್ ಉಪಾಧ್ಯಕ್ಷರು ಮಾಜಿ ಶಾಸಕರಾದ ಕೆಬಿ ಪ್ರಸನ್ನ ಕುಮಾರ್ ರವರು ಭಾಗವಹಿಸಿ ದೇವರ ಆಶೀರ್ವಾದ ಪಡೆದರು. ದೇವಾಲಯ ಸಮಿತಿಯ ಅಧ್ಯಕ್ಷರಾದ ಸುರೇಶ್ ಕುಮಾರ್ ಶೆಟ್ಟಿ ಉಪಾಧ್ಯಕ್ಷರಾದ ಗೋಪಾಲಕೃಷ್ಣ ಕಾರ್ಯದರ್ಶಿಯಾದ ಅಶೋಕ್ ಕುಮಾರ್ ನಿರ್ದೇಶಕರಾದ ದಿವಾಕರ್ ಶೆಟ್ಟಿ ಹಾಲ ನಾಯ್ಕ್ ಶೇಶಪ ಗೌಡ ಮುಂತಾದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.