ಮಾನಸಿಕ ಖಾಯಿಲೆಗಳು ಯಾರಿಗೆ ಬೇಕಾದರೂ ಬರಬಹುದು. ಆದರೆ ಇದನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಬಹುದು.
ಇತ್ತೀಚಿನ ಆಧುನಿಕ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾನವ ದುಡಿಮೆ, ಸಂಸಾರ ಹೀಗೆ ಹತ್ತು ಹಲವಾರು ಒತ್ತಡಗಳಿಗೆ ಸಿಲುಕಿ ತನ್ನ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುತ್ತಾ ಬದುಕು ಬವಣೆಯಾಗುತ್ತಿರುವ ಸಂದರ್ಭದಲ್ಲಿ ಇದನ್ನು ಮನಗಂಡ ರಾಜ್ಯ ಸರ್ಕಾರವು ಇದರಿಂದ ಹೊರತರಲು ಮುಂದಾಗಿದ್ದು, 31 ಜಿಲ್ಲೆಗಳನ್ನು ಒಳಗೊಂಡAತೆ ಆರೋಗ್ಯ ಇಲಾಖೆಯ ಸಹಕಾರದಡಿಯಲ್ಲಿ ಮಾನಸಿಕ ಆರೋಗ್ಯವೆಂಬ ಕಾರ್ಯಕ್ರಮವನ್ನು ರೂಪಿಸಿದೆ.


ಮಾನಸಿಕ ಆರೋಗ್ಯ ಕಾರ್ಯಕ್ರಮ ವರ್ತಮಾನದ ಮನುಷ್ಯನ ಮನಸ್ಥಿತಿಗೆ ಅತಿ ಅತ್ಯವಶ್ಯಕವಾಗಿದೆ ಎಂದರೆ ತಪ್ಪಿಲ್ಲ. ಯಾಕೆಂದರೆ ಮನುಷ್ಯ ಹುಟ್ಟಿನಿಂದ ಸಾಯುವವರೆಗು ತನ್ನ ಬದುಕಿನುದ್ದಕ್ಕೂ ಏನೇ ಕಷ್ಟ, ನೋವು, ಜಂಜಾಟಗಳನ್ನು ಅನುಭವಿಸಿದರೂ ಕೊನೆಯದಾಗಿ ಆತ ಬಯಸುವುದು ನೆಮ್ಮದಿಯನ್ನು ಮಾತ್ರ. ಅಂತಹ ನೆಮ್ಮದಿಯೇ ಸಿಗದಿದ್ದಾಗ ಮನುಷ್ಯ ಸ್ಥಿತಿ ಏನೆಂಬುದನ್ನು ನಾವೆಲ್ಲ ಆಲೋಚನೆ ಮಾಡಬೇಕಾಗಿದೆ. ಮನಸ್ಸು ಮನುಷ್ಯನ ನಿಯಂತ್ರಣದಲ್ಲಿರಬೇಕು. ಆದರೆ ಅದು ಈ ಧಾವಂತದ ಬದುಕಿನಲ್ಲಿ ಹಿಡಿತ ತಪ್ಪಿ, ಸಮತೋಲನ ಕಷ್ಟವಾಗಿ, ಮಾನಸಿಕವಾಗಿ ಜರ್ಜಿರಿತನಾಗುತ್ತಿದ್ದಾನೆ.


ವೇಗದ ಜಗತ್ತಿಗೆ ಒಗ್ಗಿಕೊಳ್ಳುವ ಭರದಲ್ಲಿ ಅದರ ಹಿಂದೆ ಓಡಲು ಆರಂಭಿಸಿದ್ದಾನೆ. ಮನುಷ್ಯ ಭಾವಜೀವ ಹಾಗೂ ಸಂಘಜೀವಿ. ಆದರೆ ಈಗ ಭಾವನೆಗಳೆಲ್ಲಾ ಬತ್ತಿ ಹೋಗಿ ಮನಸ್ಸು ಮತ್ತು ಬುದ್ದಿಯ ನಡುವಿನ ಸಂಘರ್ಷದಲ್ಲಿ ಮಾನಸಿಕವಾಗಿ ಕುಗ್ಗುತ್ತಿದ್ದಾನೆ. ಹಾಗಾದರೆ ಮನುಷ್ಯನನ್ನು ಮೊದಲಿನಂತೆ ಮಾಡಲು ಸಾಧ್ಯವಿಲ್ಲವೇ? ಅದಕ್ಕೆ ಚಿಕಿತ್ಸೆ ಏನು?
ಮಾನಸಿಕ ಸಮಸ್ಯೆಗಳನ್ನು ಸಾಮಾನ್ಯವಾಗಿ ಮೂಢನಂಬಿಕೆಯ ಹಿನ್ನೆಲೆಯಲ್ಲಿಯೇ ನೋಡಲಾಗುತ್ತದೆ. ದ್ವೆವ, ಭೂತ, ಮಾಟ, ಮಂತ್ರಕ್ಕೆ ಒಳಗಾದವರೆಂದು ಪರಿಹಾರಕ್ಕೆ ಹಲವಾರು ಮಾರ್ಗಗಳನ್ನು ಸಹ ಅನುಸರಿಸುವುದನ್ನು ಕಾಣುತ್ತೇವೆ. ಆದರೆ ಮೆಡಿಕಲ್ ಸೈನ್ಸ್ಗಳು ಇವೆಲ್ಲವನ್ನೂ ಸುಳ್ಳೆಂದು ಕಾಲಾನುಕಾಲದಿಂದ ಸಾಬೀತು ಪಡಿಸುತ್ತಾ ಬಂದಿದೆ. ಹಾಗಾದರೆ ಮಾನಸಿಕ ಕಾಯಿಲೆ ಎಂದರೇನು, ಅದರ ರೂಪಗಳು ಯಾವುವು?. ತಡೆಗಟ್ಟುವುದು ಹೇಗೆ?. ಚಿಕಿತ್ಸೆಯ ಕ್ರಮಗಳೇನು?. ಎಂಬುದನ್ನೆಲ್ಲಾ ಅರಿಯುವುದು ಮುಖ್ಯವಾಗಿದೆ.

ಮಾನಸಿಕ ಖಾಯಿಲೆ ಹಾಗೂ ಅದರ ನಾನಾ ಬಗೆ:
ಮನುಷ್ಯನ ದೈಹಿಕ ಖಾಯಿಲೆಗಿಂತ ಮಾನಸಿಕ ಖಾಯಿಲೆ ಅತ್ಯಂತ ಅಪಾಯಕಾರಿಯಾದದ್ದು. ಯಾಕೆಂದರೆ ದೇಹದ ಮೇಲೆ ಉಂಟಾಗುವ ಖಾಯಿಲೆ ಕಣ್ಣಿಗೆ ಕಾಣುತ್ತದೆ. ಅದನ್ನು ಹೇಗೆ ಗುಣಪಡಿಸಬಹುದು ಎಂಬುದು ಕೂಡ ಸರಳವಾಗಿ ಅರ್ಥೈಸಿಕೊಳ್ಳಬಹುದು. ಆದರೆ ಮಾನಸಿಕ ಖಾಯಿಲೆ ಮನುಷ್ಯನ ನಿಗೂಢ ವ್ಯವಸ್ಥೆಯಲ್ಲಿರುತ್ತದೆ. ಹಲವು ಮಾನಸಿಕ ಸಮಸ್ಯೆಗಳು ತುಂಬಾ ಜಟಿಲವಾಗಿರುತ್ತವೆ. ಕುಟುಂಬ, ಸಮಾಜದ ಮುಂದೆ ಇದನ್ನು ಹೇಗೆ ಹೇಳಬೇಕು, ಎದುರಿಸಬೇಕೆಂಬ ಸಂಕುಚಿತ ಭಾವದಿಂದಲೇ ಸಮಸ್ಯೆ ಉಲ್ಬಣಿಸುತ್ತಾ ಹೋಗುತ್ತದೆ.
ಮಾನಸಿಕ ಖಾಯಿಲೆ ಒಂದೇ ಹಾದಿಯಲ್ಲಿ ಸಾಗುವಂತಹದಲ್ಲಾ, ಅದು ಮನಸ್ಸಿನ ಮೂಲೆಯಲ್ಲಿ ರೂಪಗೊಂಡು ನಾನಾ ಬಣ್ಣ ಪಡೆದುಕೊಳ್ಳುತ್ತದೆ. ಹಾಗೇ ನೋಡುವುದಾದರೇ ಮಾನಸಿಕ ಖಾಯಿಲೆಯೂ ಚಿತ್ತ ಚಂಚಲತೆ, ಚಿತ್ತ ವಿಕಲತೆ, ಮದ್ದು/ಮದ್ಯವ್ಯಸವ, ಬುದ್ಧಿ ಮಾಂದ್ಯತೆ, ಮಕ್ಕಳಲ್ಲಿ ಕಂಡು ಬರುವ ನಡವಳಿಕೆ ದೋಷಗಳು ಮತ್ತಿತರ ಮನಸ್ಸಿನ ಕಾಯಿಲೆ, ಮನೋದೈಹಿಕ ಬೇನೆಗಳು, ವ್ಯಕ್ತಿ ದೋಷಗಳು, ಮೆದುಳಿನ ಅಂಗದೋಷದ ಖಾಯಿಲೆಗಳು ಇವೆ.
ಖಾಯಿಲೆಗಳನ್ನು ತಡೆಗಟ್ಟುವುದು ಹೇಗೆ:
ಮಾನಸಿಕ ಖಾಯಿಲೆ ಎಲ್ಲಡೆ ಹೆಚ್ಚಾಗುತ್ತಿರುವುದರಿಂದ ಸರ್ಕಾರವು ಆರೋಗ್ಯ ಇಲಾಖೆಯ ಸಹಾಯದೊಂದಿಗೆ ಮನುಷ್ಯನನ್ನು ಇವೆಲ್ಲದರಿಂದ ಮುಕ್ತಿಗೊಳಿಸುವಲ್ಲಿ ಪ್ರಯತ್ನಿಸುತ್ತಿದೆ. ಆ ಮೂಲಕ ಜಿಲ್ಲೆಯಲ್ಲಿ ಮಾನಸಿಕ ಖಾಯಿಲೆಗೆ ಸಂಬAಧಪಟ್ಟAತೆ ನಿಯಮಾವಳಿಯನ್ನು ಸಿದ್ದಪಡಿಸಿದೆ. ಅವುಗಳು ಇಂತಿವೆ.


ಆರೋಗ್ಯವAತ ಮಗು :

ಆರೋಗ್ಯವಂತ ಮಗು ಪಡೆಯಲು ಗರ್ಭಿಣಿ ಸ್ತಿçÃಯರ ಯೋಗಕ್ಷೇಮವನ್ನು ನೋಡಿಕೊಂಡು, ಆಕೆಗೆ ಒಳ್ಳೆಯ ಆಹಾರ, ಸರಿಯಾದ ಸಮಯದಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಬೇಕು.
ಮೆದುಳಿನ ಆರೋಗ್ಯ: ತಲೆಗೆ ಪೆಟ್ಟು ಬೀಳುವುದನ್ನು ತಪ್ಪಿಸಬೇಕು.
ದೈಹಿಕ ಆರೋಗ್ಯ: ಯಾವುದೇ ಶಾರೀರಿಕ ರೋಗ ಲಕ್ಷಣ ಕಾಣಿಸಿಕೊಂಡಾಗ ಉದಾಸೀನ ಮಾಡದೇ ಪರಿಚಯದ ವೈದ್ಯರನ್ನು ಕಾಣಬೇಕು.
ಸಂಬAಧಗಳು: ಎಲ್ಲರೊಡನೆ ಸ್ನೇಹ ಬೆಳಿಸಿ, ಸ್ನೇಹಪೂರ್ವಕ ನಡವಳಿಕೆ ಬೆಸೆದುಕೊಂಡಾಗ ಆತಂಕವನ್ನು ಕಡಿಮೆ ಮಾಡುತ್ತದೆ. ರೋಗಿಗಳು ತಮ್ಮ ಅಭಿರುಚಿಗೆ ತಕ್ಕವರ ಹಾಗೂ ನಿಮ್ಮೊಡನೆ ಸ್ಪಂದಿಸಬಲ್ಲ ಕೆಲವು ಆತ್ಮೀಯರೊಡನೆ ನಿಮ್ಮ ಅನಿಸಿಕೆ, ಆಲೋಚನೆ, ಭಾವನೆಗಳನ್ನು ಹಂಚಿಕೊಳ್ಳಿ.
ಜೀವನ ಶೈಲಿ ಹಾಗೂ ಮೌಲ್ಯಗಳು: ಒಂದು ಆದರ್ಶ, ರೀತಿ, ನೀತಿ, ಜೀವನ ಮೌಲ್ಯಗಳನ್ನು ರೂಪಿಸಿಕೊಂಡು ಅದಕ್ಕೆ ನಿಷ್ಟರಾಗಿರಿ. ದೇವರು ಅಥವಾ ಮಾನವಾತೀತವಾದ ಶಕ್ತಿಯೊಂದರಲ್ಲಿ ನಂಬಿಕೆ ಇಟ್ಟುಕೊಳ್ಳಿ.
ದಿನಚರಿ: ದೈನಂದಿನ ಕೆಲಸಗಳನ್ನು ಕ್ರಮವಾಗಿ ಮಾಡಿ, ಮನೆಕೆಲಸ, ಮನರಂಜನೆ, ವಿಶ್ರಾಂತಿಗೆ ಗಮನ ಕೊಡಿ. ಶರೀರಕ್ಕೆ ವ್ಯಾಯಾಮ ಅತ್ಯವಶ್ಯಕ.
ಮಾನಸಿಕ ಒತ್ತಡ: ಸಂಕಷ್ಟ, ಸಮಸ್ಯೆಗಳು ಎದುರಾದಾಗ ಓಡಲು ಯತ್ನಿಸಬೇಡಿ, ಅದನ್ನು ಮರೆಯಲು ಮದ್ದು-ಮದ್ಯಗಳಿಗೆ ದಾಸರಾಗಬೇಡಿ. ಮನೆಯವರ, ಆತ್ಮೀಯರ, ಸಲಹೆ ಸಹಾಯ ಪಡೆಯಿರಿ.

ಸ್ಕಿಜೋಫ್ರೀನಿಯಾ ಕಾಯಿಲೆ:
ಸ್ಕಿಜೋಫ್ರೀನಿಯಾ ಎಂದರೆ ಮಾನಸಿಕ ಅಸ್ವಸ್ಥತೆ. ಈ ರೋಗಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಪಾಯ, ಅಸಾಧ್ಯ ಎಂದು ಎಲ್ಲರೂ ಹೇಳುವ ಕಾಲವಿತ್ತು. ಈ ಖಾಯಿಲೆ ತುತ್ತಾದವರು ಸಾಯುವವರೆಗು ಹಾಗೇ ಇರುವರು, ಇದು ಗುಣವಾಗುವುದೇ ಇಲ್ಲ ಎಂದು ನಂಬಿದ್ದರು. ಆದರೆ ಕಳೆದ 30 ವರ್ಷಗಳಿಂದ ಪರಿಸ್ಥಿತಿ ಬದಲಾಗಿದೆ ವೈದ್ಯಕೀಯರ ಆವಿಷ್ಕಾರದಿಂದ ರೋಗಿಗಳನ್ನು ಆಸ್ಪತ್ರೆಗೆ ಸೇರಿಸದೇ ಮನೆಯಲ್ಲೇ ಇಟ್ಟು ಮನೆಯವರ ನೆರವಿನಿಂದಲೆ ಚಿಕಿತ್ಸೆ ಪಡೆದರೆ ಫಲ ಅದ್ಬುತ. ಸ್ಕಿಜೋಫ್ರೀನಿಯಾ ರೋಗಿಗಳಿಗೆ ಹೊರರೋಗಿ ವಿಭಾಗದಲ್ಲೇ ಚಿಕಿತ್ಸೆ ನಡೆಸುವುದು, ಪ್ರಾ.ಆ.ಕೇಂದ್ರಗಳ ಹಾಗೂ ಖಾಸಗಿ ಚಿಕಿತ್ಸಾಲಯಗಳ ಸಾಧಾರಣ ವೈದ್ಯರ ನೆರವಿನಿಂದಲೇ ಚಿಕಿತ್ಸೆ ಮುಂದುವರೆಸುವುದು ಈಗ ಜನಪ್ರತಿಯವಾಗುತ್ತಿದೆ.

ಇದರ ಲಕ್ಷಣಗಳು:
ಇದು ಸಾಮಾನ್ಯವಾಗಿ ಮುಖ್ಯವಾಗಿ ಆಲೋಚನೆಗಳು, ಭಾವನೆಗಳು ಹಾಗೂ ಪಂಚೇAದ್ರಿಯಗಳ ಮೂಲಕ ಸಂವೇದನಾ ಕ್ರಿಯೆಯಲ್ಲಿ ಏರುಪೇರಾಗುತ್ತದೆ.
ಅಸ್ತವ್ಯಸ್ತ ಆಲೋಚನೆ- ಅಂದರೆ ಸ್ಕಿಜೋಫ್ರೀನಿಯಾ ರೋಗಿಯ ಆಲೋಚನೆ ಸ್ವಷ್ಟವಾಗಿರುವುದಿಲ್ಲ. ಹಾಗೂ ತರ್ಕಬದ್ದವಾಗಿರುವುದಿಲ್ಲ. ಅಸಂಬದ್ಧವಾಗಿರುತ್ತದೆ. ಅರ್ಥಹೀನವಾಗಿರುತ್ತದೆ. ವಿಚಿತ್ರವಾಗಿರುತ್ತದೆ. ಆತ ವ್ಯಕ್ತಪಡಿಸುವ ನಂಬಿಕೆಗಳಿಗೆ ಯಾವುದೇ ಆಧಾರವಿರುವುದಿಲ್ಲ. ವಿನಾಕಾರಣ ಆತ ಸಂಶಯಪೀಡಿತನಾಗಬಹುದು.
ಭಾವನೆಗಳ ಏರುಪೇರು-ಸ್ಕಿಜೋಫ್ರೀನಿಯಾ ಖಾಯಿಲೆಯಿಂದ ನರಳುತ್ತಿರುವ ವ್ಯಕ್ತಿಗೆ ವಿಪರೀತ ಕೋಪ, ದುಃಖ, ಸಂತೋಷದ ಮನಸ್ಥಿತಿ ಇರುತ್ತದೆ, ವಿನಾಕಾರಣ ನಗುವುದು, ಅಳುವುದು ಅಥವಾ ಯಾವುದೇ ಭಾವನೆ ತೋರಿಸದೆ ನಿರ್ಲಿಪ್ತನಂತಿರುವುದು.
ಅಸಹಜ ಹಾಗೂ ವಿಚಿತ್ರ ಅನುಭವಗಳು- ಈ ವ್ಯಕ್ತಿಯು ಭ್ರಮಾಧೀನನಾಗಿರುತ್ತಾನೆ. ಕಣ್ಣು ನೋಡುವುದೊಂದಾದರೆ, ಆತ ಅರ್ಥ ಮಾಡಿಕೊಳ್ಳುವುದು ಇನ್ನೊಂದಾಗುತ್ತದೆ. ಆತನ ಪ್ರಜಾಸ್ಥಿತಿ ನೂರಕ್ಕೆ ನೂರು ಸರಿ ಇದ್ದರೂ ಹಗಲಿನಲ್ಲೂ ಹಗ್ಗವನ್ನು ಕಂಡು ಹಾವೆಂದು ಭಯ ಭೀತನಾಗಬಹುದು. ನೆರಳನ್ನು ಕಂಡು ಭೂತ/ಕಳ್ಳ ಎಂದು ಹೇಳಬಹುದು. ಹಾಗೆಯೇ ಕೇಳಿದ ಧ್ವನಿಯನ್ನು, ಗ್ರಹಿಸಿದ ವಾಸನೆಯನ್ನು, ಸ್ವರ್ಶವನ್ನು ತಪ್ಪು ತಪ್ಪಾಗಿ ವಿಶ್ಲೇಷಿಸುತ್ತಾನೆ.


ದೈಹಿಕ ಕ್ರಿಯೆಗಳ ಏರುಪೇರು- ರೋಗಿಯು ಹಸಿವು ಮತ್ತು ಆಹಾರ ಸೇವನೆ ಅಸ್ತವ್ಯಸ್ತವಾಗುತ್ತದೆ, ಮನಸ್ಸಿಗೆ ಬಂದರೆ ತಿನ್ನುವುದು, ಇಲ್ಲದಿದ್ದರೆ ದಿನಗಟ್ಟಲೆ ಉಪವಾಸವಿರುವುದು. ಯಾವುದನ್ನು ತಿನ್ನಬೇಕು, ಯಾವುದು ತಿನ್ನಬಾರದು ಆತನಿಗೆ ತಿಳಿದಿರುವುದಿಲ್ಲ.
ಇದಲ್ಲದೇ ಇನ್ನೂ ಸಾಮಾನ್ಯವಾಗಿ ಮಂಕುತನ, ಜಡತ್ವ ಗಲಾಟೆ ಹಾಗೂ ಉದ್ರೇಸಕಾವಸ್ಥೆ ಅಥವಾ ಅತ ಸಂಶಯ/ಅನುಮಾನ ಪ್ರವೃತ್ತಿ ಸ್ಥಿತಿ ಕಾಣುತ್ತದೆ.
ಸ್ಕಿಜೋಫ್ರೀನಿಯಾ ಸಂಭವ:
ಇದು ಸಾಮಾನ್ಯವಾಗಿ 15 ರಿಂದ 25 ವರ್ಷ ವಯಸ್ಸಿನ ಅವಧಿಯಲ್ಲಿ ಕಾಣಿಸಿಕೊಳ್ಳುತ್ತದೆ. ಪದೇ ಪದೇ ಬರುವ ತೀವ್ರತರವಾದ ಸಂಕಷ್ಟಗಳಿಗೆ ವ್ಯಕ್ತಿ ಸಿಲುಕಿದಾಗ ಕಾಯಿಲೆ ಬರುತ್ತದೆ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಜನ, ಶ್ರೀಮಂತರು ಹಾಗೂ ಬಡವರು ಎಲ್ಲ ಬುಡಕಟ್ಟಿಗೆ ಸೇರಿದವರು ಸಮಾನವಾಗಿ ಈ ರೋಗಕ್ಕೆ ತುತ್ತಾಗುತ್ತಾರೆ.

ಚಿಕಿತ್ಸೆಯ ಕ್ರಮಗಳು:
ಮಾನಸಿಕ ಖಾಯಿಲೆಗೆ ಆಪ್ತ ಸಮಾಲೋಚನೆ, ವೈದ್ಯರ ಸಲಹೆಯೊಂದಿಗೆ ಔಷಧಿಗಳು, ಚುಚ್ಚುಮದ್ದುಗಳ ರೂಪದಲ್ಲಿ ಅನೇಕ ಬಗೆಯ ಚಿಕಿತ್ಸೆಗಳು ನೀಡಲಾಗುತ್ತದೆ.
ಇನ್ನೂ ಇಂತಹ ಖಾಯಿಲೆ ಕಾಣಿಸಿಕೊಂಡ ಕೆಲವೇ ವಾರದೊಳಗೆ ಔಷಧೋಪಚಾರವನ್ನು ಪ್ರಾರಂಭಿಸಬೇಕು. ವೈದ್ಯರನ್ನು ಆಗಿಂದಾಗ್ಗೆ ಕಂಡು ಸಲಹೆ ಮಾರ್ಗದರ್ಶನ ಪಡೆಯಬೇಕು. ಮನೆಯವರು ಸರಿ ಪ್ರಮಾಣದ ಪ್ರೀತಿ, ವಿಶ್ವಾಸ, ಆಸರೆ ನೀಡಬೇಕು. ರೋಗಿ ವಾಸಿಸುವ ವಾತಾವರಣ ಅಹಿತಕರವಾಗಿದ್ದರೆ ಖಾಯಿಲೆೆ ವಾಸಿಯಾಗದು ಹಾಗೂ ಮರುಕಳಿಸಬಹುದು. ಕೆಲಸ, ಮನರಂಜನೆ, ರೋಗಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಆತನ ಆತ್ಮವಿಶ್ವಾಸ, ಸ್ವಾವಲಂಬನೆ ಪ್ರೋತ್ಸಾಹಿಸತಕ್ಕಂತಹ ಕೆಲಸ ಮಾಡಬೇಕು. ಮದ್ಯ, ಮಾದಕ, ವರ್ಜ್ಯ-ರೋಗಿ ಯಾವುದೇ ಕಾರಣಕ್ಕಾಗಿ ಮದ್ಯಪಾನ ಮಾಡುವುದು, ಗಾಂಜಾ, ಅಫೀಮು ಇತ್ಯಾದಿ ಮಾದಕ ವಸ್ತುಗಳನ್ನು ಸೇವಿಸುವುದರಿಂದ ಖಾಯಿಲೆ ವಾಸಿಯಾಗದೆ ಜಾಸ್ತಿಯಾಗಬಹುದು, ಇವೆಲ್ಲವುಗಳನ್ನು ಕ್ರಮವಾಗಿ ಪಾಲಿಸುವದರಿಂದ ಸ್ಕಿಜೋಫ್ರೀನಿಯಾ ರೋಗವು ಗುಣಮುಖವಾಗುತ್ತದೆ. ಹಾಗೂ ಈ ಖಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಯಾವುದೇ ಆಹಾರ ಪಥ್ಯ ಮಾಡುವ ಅಗತ್ಯವಿಲ್ಲ.

ಟೆಲಿಮನಸ್-ರೋಗಿಗಳಿಗೆ ಅನುಕೂಲ:
ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಆಪ್ತ ಸಮಾಲೋಚನ ಕಾರ್ಯಕ್ರವವನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಆ ಮೂಲಕ ಔಷಧಿಗಳಿಂದ ಗುಣಮುಖರಾಗದವರನ್ನು ಆಪ್ತ ಸಮಾಲೋಚನೆಯ ಮೂಲಕ ಗುಣಪಡಿಸುವ ಆಶಾಭಾವನೆಯನ್ನು ಹೊಂದಿದ್ದಾರೆ. ಸರ್ಕಾರವು ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಇಂತಹ ಕಾರ್ಯಕ್ರಮವನ್ನು ನಡೆಸುತ್ತಿದೆ. ಮುಖಾಮುಖಿಯಾಗಿ ಹಾಗೂ ದೂರವಾಣಿ ಸಂಪರ್ಕ ಮೂಲಕ ಆಪ್ತ ಸಮಾಲೋಚನೆ ರೋಗಿಗಳಿಗೆ ನೆರವಾಗಲಿದ್ದು, ಟೆಲಿಮನಸ್ ಸಂಖ್ಯೆ 14416 ನಂಬರ್ ಗೆ ಕರೆ ಮಾಡಿ ವ್ಯಥೆಗೆ ಒಳಪಟ್ಟವರು, ಪರೀಕ್ಷೆ ಒತ್ತಡಕ್ಕೊಳಗಾದವರು, ಕೌಟುಂಬಿಕ ಮಸ್ಯೆ, ಆತ್ಮಹತ್ಯೆ ಆಲೋಚನೆ, ಮಾದಕ ವ್ಯಸನ, ಇತರೆ ಯಾವುದೇ ಮಾನಸಿಕ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಈ ಸಹಾಯವಾಣಿ ರೋಗಿಯ ಮಾಹಿತಿಯನ್ನು ಕಲೆಹಾಕಿ ಆಯಾ ಜಿಲ್ಲೆಯ ಆರೋಗ್ಯ ಕೇಂದ್ರಕ್ಕೆ ಮಾಹಿತಿಯನ್ನು ತಲುಪಿಸುತ್ತದೆ. ಇದರಿಂದ ರೋಗಿಗಳಿಗೆ ಜಿಲ್ಲೆಯ ಆರೋಗ್ಯ ಕೇಂದ್ರದಿAದ ಎಲ್ಲ ರೀತಿ ಚಿಕಿತ್ಸೆ ದೊರಕುತ್ತದೆ.

  • ಆಕಾಶ್. ಆರ್.ಎಸ್, ಪ್ರಶಿಕ್ಷಣಾರ್ಥಿ, ವಾರ್ತಾ ಇಲಾಖೆ

Leave a Reply

Your email address will not be published. Required fields are marked *