ಶ್ರೀ ಅರವಿಂದ ಕಲಗುಜ್ಜಿ, ಪೊಲೀಸ್ ಉಪಾಧೀಕ್ಷಕರು, ತೀರ್ಥಹಳ್ಳಿ ಉಪ ವಿಭಾಗ ರವರ ನೇತೃತ್ವದಲ್ಲಿ, ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕರು ಹಾಗೂ ಮಾಲೀಕರ ಸಭೆಯನ್ನು ನಡೆಸಿದ್ದು, ಸದರಿ ಸಭೆಯಲ್ಲಿ ಹಾಜರಿದ್ದವರಿಗೆ ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿರುತ್ತಾರೆ.

1) ಸುರಕ್ಷತೆಯ ದೃಷ್ಠಿಯಿಂದ ವೇಗದ ಮಿತಿಯಲ್ಲಿಯೇ ಆಟೋಗಳನ್ನು ಚಾಲನೆ ಮಾಡಿ ಹಾಗೂ ಸಾರ್ವಜನಿಕರು / ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಿ.

2) NO PARKING ಸ್ಥಳಗಳಲ್ಲಿ ಆಟೋಗಳನ್ನು ನಿಲ್ಲಿಸಿ, ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡಬೇಡಿ. ಸಂಚಾರ ನಿಯಮಗಳ ಪಾಲನೆ ಮಾಡಿ.

3) ಆಟೋಗಳಿಗೆ ಸಂಬಂಧಿಸಿದ ಎಲ್ಲಾ ಅಗತ್ಯ ದಾಖಲೆಗಳನ್ನು ಆಟೋದಲ್ಲಿ ಇಟ್ಟುಕೊಳ್ಳಿ ಹಾಗೂ ಆಟೋಗಳಿಗೆ ಕಡ್ಡಾಯವಾಗಿ ವಾಹನ ವಿಮೆ ಮಾಡಿಸಿ.

4) ಆಟೋ ಸ್ಟಾಂಡ್ ಗಳಲ್ಲಿ ಸಿ.ಸಿ. ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಿ ಮತ್ತು ಯಾವುದೆ ತುರ್ತು ಸಂದರ್ಭದಲ್ಲಿ, 112 ಸಹಾಯವಾಣಿಗೆ ಕರೆ ಮಾಡಿರಿ ಎಂದು ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ, ಶ್ರೀ ಸೊಪ್ಪುಗುಡ್ಡೆ ರಾಘವೇಂದ್ರ, ಪಟ್ಟಣ ಪಂಚಾಯತ್ ಸದಸ್ಯರು, ತೀರ್ಥಹಳ್ಳಿ, ಶ್ರೀ ಇಮ್ರಾನ್ ಬೇಗ್, ಪಿ.ಐ ತೀರ್ಥಹಳ್ಳಿ ಪೊಲೀಸ್ ಠಾಣೆ, ಹಾಗೂ ತೀರ್ಥಹಳ್ಳಿ ಟೌನ್ ನ ಆಟೋ ಚಾಲಕರು ಮತ್ತು ಮಾಲೀಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *