ಸುಮಾರು 30 ಜನರ ಜೆಸಿಐ ಸದಸ್ಯರಿಂದ. ಮಹಾನಗರ ಪಾಲಿಕೆಯ ಪೌರಕಾರ್ಮಿಕರ ಸಹಾಯದಿಂದ ಶಿವಮೊಗ್ಗ ನಗರದಲ್ಲಿ ಹೆಸರುವಾಸಿಯಾಗಿರುವ ಕೊರ್ಪಳಯ್ಯನ ಛತ್ರದ ಮಂಟಪದ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮ ಎಲ್ಲರ ಶ್ರಮದಾನದಿಂದ ಯಶಸ್ವಿಯಾಗಿ ಜರುಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಲ್ಪಾ ಸತೀಶ್ ವಹಿಸಿದ್ದರು. ಅರುಣ್ ಡಿ.ಎಸ್ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರು ಕಾರ್ಯಕ್ರಮಕ್ಕೆ ಬಂದು ಶುಭ ಕೋರಿದರು,ಮುಖ್ಯ ಅತಿಥಿಗಳಾಗಿ ಜೆಸಿ ನವೀನ್ ಕುಮಾರ್ ಏನ್ ವಿ ವಲಯ ಸಂಯೋಜಕರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಸೆಲ್ಯೂಟ್ ಸೈಲೆಂಟ್ ಸ್ಟಾರ್ ಶೀರ್ಷಿಕೆ ಅಡಿಯಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಒಗ್ಗಟ್ಟಿನಲ್ಲಿ ಬಲವಿದೆ ಸಂದೇಶವನ್ನು ಮತ್ತೊಮ್ಮೆ ನಮ್ಮ ತಂಡದಿಂದ ಸಾಬೀತುಪಡಿಸಲಾಯಿತು. ಜೆಸಿಐ ಸಂಸ್ಥೆ ತರಬೇತಿಗಳ ಜೊತೆಗೆ ಪರಿಸರ ಸಂರಕ್ಷಣೆಯ ಬಗ್ಗೆ ವಾತಾವರಣದ ಸಮತೋಲನದ ಬಗ್ಗೆ ಹಾಗೂ ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡು ತುಂಗಾ ನದಿಯನ್ನು ಮಲಿನಗೊಳಿಸಿದಂತೆ ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕೆಂದು ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಹಾಗೂ ಪ್ಲಾಸ್ಟಿಕ್ ಅನ್ನು ತ್ಯಜಿಸಿ ಪರಿಸರವನ್ನು ಉಳಿಸಿ ಎಂದು ಅಧ್ಯಕ್ಷರು ತಿಳಿಸಿದರು. ಈ ಕಾರ್ಯಕ್ರಮಕ್ಕೆ ಜೆ ಸಿ ಐ ಶಿವಮೊಗ್ಗ ಶಾಶ್ವತಿ ಘಟಕದ ಅಧ್ಯಕ್ಷರಾದ ಜೆಸಿ ಶಿಲ್ಪ ಸತೀಶ್ ಹಾಗೂ ಐಪಿಪಿ ಡಾಕ್ಟರ್ ಶಾಂತ ಸುರೇಂದ್ರ ಮೇಡಂ, ಸುಗಂಧಿನಿ ಪಾಪು ಸೋಮಶೇಖರ್, ರಘು ನಿತಿನ್ ಹೆಚ್ ವಿ, ಸವಿತಾ,ಶಾಂತ ಪದ್ಮ, ಸುಮಾ,ನಿತಿನ್ ಪಾಟೀಲ್, ಮಲ್ಲಿಕಾ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *