ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಈ ದಿನ ನಾವು ಜೆಸಿಐ ಶಿವಮೊಗ್ಗ ಶಾಶ್ವತಿ ಘಟಕದಿಂದ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ಶಾಶ್ವತಿ ಘಟಕ ಅಧ್ಯಕ್ಷರಾದ ಜೆಸಿ ಶಿಲ್ಪ ಅವರು ಮಾತನಾಡಿ ಕಾರ್ಮಿಕ ದಿನಾಚರಣೆ ಎಂದರೆ ವರ್ಷಕ್ಕೆ ಒಂದು ಸಾರಿ ಆಚರಣೆ ಮಾಡಿದರೆ ಆಗಲ್ಲ ಪ್ರತಿದಿನ ಕಾರ್ಮಿಕರ ದಿನಾಚರಣೆಯನ್ನು ಅವರ ಹಕ್ಕುಗಳು ಮತ್ತು ಕರ್ತವ್ಯಗಳು ಜೊತೆಗೆ ಅವರಿಗೆ ಸಿಗಬೇಕಾದ ಸೌಲಭ್ಯಗಳು ಹಾಗೂ ಆಮೇಲೆ ಕಟ್ಟಡ ಕಾರ್ಮಿಕರಿಗೆ ಬೇಕಾದ ಹಲವು ಸೌಲಭ್ಯಗಳಿವೆ , ಹಾಗೆ ಉನ್ನತ ಶಿಕ್ಷಣ ಮಾಡುವವರಿಗೆ ಸೌಲಭ್ಯ ಇದ್ದರೂ ಕೂಡ ಎಲ್ಲಾ ಮಾಹಿತಿಗಳನ್ನು ಶ್ರಮಿಕ ವರ್ಗವನ್ನು ಗುರುತಿಸುವ ಹಾಗೆ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಗೌರವಿಸುವ ಉದ್ದೇಶದಿಂದ ಪ್ರತಿವರ್ಷ ಮೇ ಒಂದರಂದು ಅಂತರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ ಹಾಗೆ ನಮ್ಮ ಜೆಸಿಐ ಶಾಶ್ವತಿ ಘಟಕದಿಂದ ಇಂದು ನಗರದಲ್ಲಿ ಕೆಲ ಕಾರ್ಮಿಕರು ಹಾಗೂ ಆಟೋ ಚಾಲಕರನ್ನು ಭೇಟಿ ಮಾಡಿ ಅವರಿಗೆ ಸುರಕ್ಷಿತ ಅರಿವು ಮತ್ತು ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಳಕೆಯ ಬಗ್ಗೆ ತಿಳಿಸಿಕೊಟ್ಟು ಸುರಕ್ಷಿತವಾಗಿ ಮಾಡುವಂತಹ ಕೆಲಸವನ್ನು ಸುರಕ್ಷಿತವಾಗಿ ತಮಗೆ ಕಾರ್ಮಿಕರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಮೂಲ ಸೌಕರ್ಯ ಮತ್ತು ಜವಾಬ್ದಾರಿಗಳ ಮಾಹಿತಿ ಯೊಂದಿಗೆ ಹ್ಯಾಂಡ್ ಗ್ಲೌಸ್ ಸಿಹಿ ಹಂಚಿ, ಮಜ್ಜಿಗೆಯನ್ನು ಹಾಗೂ ಸುರಕ್ಷತಾ ಸಾಮಗ್ರಿಗಳನ್ನು ಕಾರ್ಮಿಕರಿಗೆ ವಿತರಿಸಲಾಯಿತು .
ಈ ಸಂದರ್ಭದಲ್ಲಿ ಜೆಸಿಐ ಶಿವಮೊಗ್ಗ ಶಾಶ್ವತಿ ಘಟಕದ ಅಧ್ಯಕ್ಷರು ಜೆಸಿ ಶಿಲ್ಪ ಸತೀಶ್, ಪಾಪು ರಘು, ಸುಗಂಧಿನಿ,ವಿನಂತಿ,ಶಾಂತ ಸವಿತಾ,ಸೋಮಶೇಖರ್ ಸರ್, ಸುಮಾ ಮುಂತಾದವರು ಉಪಸ್ಥಿತರಿದ್ದರು.
ವರದಿ : ನಾಗರಾಜ್ ( ಪಾಪು ) ಶಿವಮೊಗ್ಗ