PINGARA PARADISE GRAND OPENING…
ಶಿವಮೊಗ್ಗದಲ್ಲಿ ಕೆಲವು ವರ್ಷಗಳಿಂದ ಬಸ್ಟಾಂಡ್ ಹತ್ತಿರದ ಹೃದಯ ಭಾಗದಲ್ಲಿರುವ ರಾಜ್ ಮೋಹನ್ ಹೆಗ್ಡೆ ಮಾಲೀಕತ್ವದ ಪಿಂಗರಾ ಬಾರ್ ಅಂಡ್ ರೆಸ್ಟೋರೆಂಟ್ ವು ನಗರದ ಜನತೆಗೆ ಉತ್ತಮ ಸೇವೆ ನೀಡಿ ಜನರ ಮನಸ್ಸಿಗೆ ಹತ್ತಿರ ಆಗುವಂತೆ ಉತ್ತಮ ಸೇವೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದೀಗ ನೂತನವಾಗಿ ನಿರ್ಮಿಸಲಾದ ಪಿಂಗಾರ ಪ್ಯಾರಡೈಸ್ ಬಾರ್ ಅಂಡ್ ರೆಸ್ಟೋರೆಂಟ್ ಅನ್ನು ರಾಜ್ ಮೋಹನ್ ಹೆಗ್ಡೆ ಇಂದು ಉದ್ಘಾಟಿಸಿದರು.ಅವರ ಪತ್ನಿ ಶಕುಂತಲಾ ಹೆಗ್ಡೆ, ಮಗಳು ಸಿಂಚನ ಹೆಗ್ಡೆ,ಅಳಿಯ ಅಶ್ವಿನ್ ಆಳ್ವ ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬಂಟರ ಯಾನೆ ನಾಡವರ ಸಂಘ ಶಿವಮೊಗ್ಗ ಅಧ್ಯಕ್ಷರು ಮತ್ತು ಸಮಸ್ತ ಪದಾಧಿಕಾರಿಗಳು ಮತ್ತು ವಿವಿಧ ಸಮಾಜದ ಮುಖಂಡರುಗಳು ಹಿತೈಷಿಗಳು ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನೂತನ ಉದ್ಯಮಕ್ಕೆ ಶುಭವಾಗಲಿ ಎಂದು ಹಾರೈಸಿದರು.