ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದಿದ್ದ ಅಭಿರುಚಿ ಡಿಜಿಟಲ್ ಇಂಡಿಯಾ ಆತ್ಮ ನಿರ್ಭರ್ ಎಲ್ಲ ರಾಜಕಾರಣಿಗಳ ಭಾಷಣಗಳಲ್ಲಿ ಮಾತ್ರ ಅಡಕವಾಗಿದೆ.ದೇಶದ ಶ್ರೀಮಂತರು ಅತಿ ಶ್ರೀಮಂತರಾಗಿ ಮುಂದುವರಿಯುತ್ತಿರುವುದುವಾಸ್ತವ ಬಡಜನರು ಕಡುಬಡವರಾಗಿ ಬದುಕಿಗಾಗಿ ಹೋರಾಡುವುದು ಅನಿವಾರ್ಯವಾಗಿದೆ ಬದುಕಲು ಆಸರೆ ಅನ್ನ ಆಹಾರವಿಲ್ಲದೆ ಸೂರುಗಳಿಲ್ಲದೆ ಸೂರಿದ್ದರೂ ದಾಖಲೆಗಳಿಲ್ಲದೆ ಸ್ವತಂತ್ರ ಭಾರತದ ರಜೆಗಳು ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ 6 ಮಲ್ಲಿಗೇನಹಳ್ಳಿಯ ಕಾಸ್ಮೋ ಕ್ಲಬ್ ಹಿಂಭಾಗದ ಪ್ರೊ ಬಿ.ಕೃಷ್ಣಪ್ಪ ಬಡಾವಣೆ ಮಲ್ಲಿಗೇನಹಳ್ಳಿಯಲ್ಲಿ ಸುಮಾರು 40-50 ವರ್ಷಗಳಿಂದ 20ಬಡ ಕುಟುಂಬಗಳು ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಾ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದರು ವಾಸದ ದೃಢೀಕರಿಸುವ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಮನೆಗಳಿಗೆ ವಿದ್ಯುತ್ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಚುನಾವಣಾ ಗುರುತಿನ ಚೀಟಿಗಳನ್ನು ಸಹ ಹೊಂದಿದ್ದು ತಮ್ಮ ಏಳಿಗೆಗೆ ಶ್ರಮಿಸುವ ರಾಜಕಾರಣಿಗೆ ಮತ ಚಲಾಯಿಸುತ್ತಾ ಬಂದಿರುತ್ತಾರೆ.ಇತ್ತೀಚೆಗೆ ಸ್ಥಾಪನೆಯಾಗಿರುವ ಕಾಸ್ಮೋ ಕ್ಲಬ್ ನವರು ಪ್ರೊ ಬಿ ಕೃಷ್ಣಪ್ಪ ಬಡಾವಣೆಯ ನಿವಾಸಿಗಳು ಮನೆ ಕಟ್ಟಿಸಿ ಕಟ್ಟಿಕೊಂಡಿರುವ ಜಾಗವು ನಮ್ಮ ಕ್ಲಬ್ ಗೆ ಸೇರಿದ್ದು ಎಂದು ತರಾಟೆ ತೆಗೆಯುತ್ತ ಪೋಲಿಸ್ ಕಂಪ್ಲೇಂಟ್ ಕೊಟ್ಟು ತೆರವುಗೊಳಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಆದರೆ ಸದರಿ ಜಾಗವು ದಿಶಾಂಕ್ ಆ್ಯಪ್ ನಲ್ಲಿ ನೋಡಿದರೆ ಮಲ್ಲಿಗೇನಹಳ್ಳಿ ಸ .ನಂ 1 ಎಂದು ತೋರಿಸುತ್ತದೆ. ಶಿವಮೊಗ್ಗ ತಾಲ್ಲೂಕು ಕಸಬಾ 1 ಹೋಬಳ್ಳಿ ಮಲ್ಲಿಗೇನಹಳ್ಳಿ ನಂ 1ರ ಪಹಣಿ ತೆಗೆದು ನೋಡಿದರೆ ಸ. ನಂ 1 ರಲ್ಲಿ ಒಟ್ಟು 6 ಎಕರೆ 8 ಗುಂಟೆ ಜಮೀನಿದ್ದು 1ಗುಂಟೆ ಖರಾಬ್ ಉಳಿದ 6-17 ಎಕರೆ ಜಮೀನಿನಲ್ಲಿ 3-00 ಎಕರೆ ದಿನಾಂಕ :30-04-2019 ತುಮಕೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206 ಕ್ಕೆ ಭೂಸ್ವಾಧೀನ ನಡವಳಿಯಲ್ಲಿದೆ ಎಂದು ಇನ್ನುಳಿದ 3-17 ಎಕರೆ ಜಮೀನು ಮೂಲ ವಾರಸುದಾರರಾದ ಫಾತಿಮುನ್ನಿಸಾ ಕೋಂ ಸೈಯದ್ ಪೀರ್ ಹಾಗೂ ಕೋo ಗುಜ್ಜಾರಿ ಗೌಸ್ ಹೆಸರಿನಲ್ಲಿ ಜಂಟಿ ಖಾತೆಯಿದೆ.ಆದರೆ ಕಾಸ್ಮೋ ಕ್ಲಬ್‌ ನವರು ಪ್ರೊ ಬಿ ಕೃಷ್ಣಪ್ಪ ಬಡಾವಣೆಯ ನಿವಾಸಿಗಳ ಮನೆಗಳಿಗೆ ಹೊಂದಿಕೊಂಡಂತೆ ಸದರಿ ಫಾತಿಮುನ್ನಿಸಾ ಇಕ್ಬಲ್ ನಿಸಾರ್ ರವರ ಜಮೀನಿಗೆ ಅಕ್ರಮವಾಗಿ ಕಾಂಪೌಂಡ್ ಹಾಕಿಕೊಂಡಿದ್ದು ತಮ್ಮ ಹಣ ಹಾಗೂ ರಾಜಕೀಯ ಬಲ ಬಳಸಿ ಪ್ರೊ ಬಿ ಕೃಷ್ಣಪ್ಪ ಬಡಾವಣೆಯ ನಿವಾಸಿಗಳನ್ನು ತೆರವುಗೊಳಿಸುವ ಶತಪ್ರಯತ್ನ ಮಾಡುತ್ತಿದ್ದಾರೆ.ಆದ್ದರಿಂದ ಜಿಲ್ಲಾಡಳಿತ ತಕ್ಷಣ ಈ ಜಾಗದ ಸ್ಥಳ ತನಿಖೆ ಮಾಡಿಸಿ 40-50 ವರ್ಷಗಳಿಂದ ಬಡ ಕುಟುಂಬಗಳು ವಾಸವಾಗಿರುವ ಪ್ರೊ .ಬಿ ಕೃಷ್ಣಪ್ಪ ಬಡಾವಣೆಯನ್ನು ಸ್ಲಂ ಎಂದು ಘೋಷಣೆ ಮಾಡಿ ಜಾಗವನ್ನು ಭೂಸ್ವಾಧೀನ ಪಡಿಸಿಕೊಂಡು ನಿವಾಸಿಗಳಿಗೆ ಪರಿಚಯ ಭದ್ರಾ ಕೊಡಿಸುವುದರ ಜೊತೆಗೆ ಹಕ್ಕುಪತ್ರ ಕೊಡಿಸಬೇಕು ಎಂದು ಸಮಿತಿಯು ಪ್ರತಿಭಟನಾ ಧರಣಿ ಮಾಡುವುದರ ಮೂಲಕ ಜಿಲ್ಲಾಡಳಿತವನ್ನು ಒತ್ತಾಯಿಸುತ್ತದೆ.