ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ರವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ನಡೆಸಲಾಯಿತು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಪ್ರಸನ್ನ ಕುಮಾರ್ ರವರು ಮಾತನಾಡಿ ಭಾರತ ರತ್ನ ರಾಜೀವ್ ಗಾಂಧಿ ರವರು ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟು ಮಾಡಿದಲ್ಲದೆ 18 ವರ್ಷದ ಯುವಕರಿಗೆ ಮತದಾನದ ಹಕ್ಕನ್ನು ನೀಡಿ ಸಂವಿದಾನದ 73ನೇ ಕಾಲಂ ನ ತಿದ್ದುಪಡಿ ತಂದು ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯತಿಗಳಿಗೆ ಅಧಿಕಾರ ನೀಡುವುದರ ಮೂಲಕ ದೇಶದ ಸಮಗ್ರ ಅಭಿವೃದ್ದಿಗೆ ಅಪಾರವಾದ ಕೊಡುಗೆ ನೀಡಿರುತ್ತಾರೆ ಯೆಂದು ತಿಳಿಸಿದರು.


ಈ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ  ಎಸ್ ಟಿ ಹಾಲಪ್ಪನವರು, ಹೆಚ್ ಸಿ ಯೋಗೇಶ್ ರವರು, ಕಲೀಂ ಪಾಷಾ ರವರು, ಯು ಶಿವಾನಂದ್ ಶೆಟ್ಟಿ ರವರು, ಎನ್ ರಮೇಶ್ ರವರು, ಎಚ್ ಎಂ ಚಂದ್ರಶೇಖರ್ ರವರು ಮತ್ತು ಇನ್ನತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *