ನೀಟ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಉತ್ತರ ಭಾರತದಲ್ಲಿ ಅತಿಹೆಚ್ಚು ನೀಟ್ ನಲ್ಲಿ ಪಾಸ್ ಆಗ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ಕಡಿಮೆ. ಹಾಗಾಗಿ ದೇಶ್ ನೀಟ್ ಅಕಾಡೆಮಿ ಈ ನೀಟ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅನುಕೂಲವಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಒಂದು ವರ್ಷ ನಡೆಸಿ ನಂತರ ಪರೀಕ್ಷೆ ಬರೆಯಿಸಿದರು. ಅದರಲ್ಲಿ ಯಶಸ್ವಿಯಾದರು. ದೇಶ್ ನೀಟ್ ಅಕಾಡೆಮಿ 2022 ರಲ್ಲಿ ಶಿವಮೊಗ್ಗದಲ್ಲಿ ಆರಂಭಿಸಿ 2024 ರಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 40 ಜನ ಪಾಸ್ ಆಗಿದ್ದಾರೆ. ಈ ಕ್ಯಾಂಪಸ್ 400 ಜನ ಸಾಮರ್ಥವಾಗಿದೆ. ಶಿವಮೊಗ್ಗದಲ್ಲಿ ಮಾತ್ರ ದೇಶ್ ಇದೆ. ಶಿವಮೊಗ್ಗದ ಜನ 30% ಮಾತ್ರ ಸೇರ್ಪಡೆಯಾಗಿದ್ದಾರೆ. ಉಳಿದವರೆಲ್ಲ ಬಹುತೇಕ ಹೊರಗಡೆಯವರು ಆಗಿದ್ದಾರೆ ಎಂದರು. 

ಮಧ್ಯಮ ಹಾಗೂ ಬಡಮಕ್ಕಳು ಪರೀಕ್ಷೆಯಲ್ಲಿ 700 ಕ್ಕೆ 400 ಮೇಲೆ ಅಂಕ ಪಡೆದರೆ 50% ಡಿಸ್ಕೌಂಟ್ ಮಾಡಲಾಗಿದೆ. ಬಡಮಕ್ಕಳಿದ್ದರೆ ನಮ್ಮ ಗಮನಕ್ಕೆ ತನ್ನಿ  ಅವರಿಗೆ ಪರೀಕ್ಷೆಚಮತ್ತು ತರಬೇತಿ ಅವಕಾಶ ಮಾಡಿಕೊಡಲಾಗುತ್ತದೆ. 2 ಲಕ್ಷ ರೂ. ಪ್ರವೇಶ ಶುಲ್ಕವಿದೆ. ಬಡವರಿಗೆ ಅನುಕೂಲ ಮಾಡಿಕೊಡುತ್ತೇವೆ. ಹಣ ಮಾಡಲು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. 

ಇಡೀ ದೇಶದಲ್ಲಿ 1 ಲಕ್ಷದ 5 ಸಾವಿರ ಮಾತ್ರ ನೀಟ್ ಸೀಟ್ ಗಳಿವೆ. ಆದರೆ ಪರೀಕ್ಷೆ ಬರೆಯುವರು ಹೆಚ್ಚು ಜನರಿದ್ದಾರೆ. ದೇಶ್ ದಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 12ರವರೆಗೆ ವಿದ್ಯಾಭ್ಯಾಸವಾಗುತ್ತದೆ. ಈ ವಿದ್ಯೆಯಿಂದ ಮಕ್ಕಳು ನೀಟ್ ಪಾಸ್ ಆಗದಿದ್ದರೆ ಅದು ಮುಂದಿನ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅನುಕೂಲವಾಗಲಿದೆ. ಮಕ್ಕಳು ಹತಾಶೆಯಾಗದಂತೆ ಮನವಿ ಮಾಡಿದರು.

ನೀಟ್ ತರಬೇತಿಯಲ್ಲಿ ಸಾಬೀತಾದ ಅನುಭವ ಹೊಂದಿರುವ NEET ತಜ್ಞರ ಸರ್ಪಿತ ತಂಡ, ಸಮಗ್ರ ಪಠ್ಯಕ್ರಮ, ದೈನಂದಿಕ ಅಭ್ಯಾಸ್ ಪ್ರಶ್ನೆಗಳು, ನಿಯಮಿತ ಅನುಮಾನ ನಿವಾರಣ ಅವಧಿಗಳು, ವಿದ್ಯಾರ್ಥಿಗಳ ಕಾರ್ಯಕ್ಷಮತೆ ಟ್ರ್ಯಾಕಿಂಗ್, ನಿರಂತರ ಮೇಲ್ವಿಚರಣೆ, ಡಿಜಿಟಲ್ ಸಾಧನಗಳು, ಆಧುನಿಕ ತರಗತಿ ಕೊಠಡಿಗಳು, ಗೊಂದಲಗಳಿಂದ ಮುಕ್ತವಾದ ಕೇಂದ್ರಿಕೃತ ಶೈಕ್ಷಣಿಕ ವಾತಾವರಣ. ಪ್ರೇರಕ ಬೆಂಬಲ, ಮನೆ ಮಾದರಿಯ ಊಟದ ವ್ಯವಸ್ಥೆ, ಶಿಸ್ತುಬದ್ದ ಹಾಸ್ಟೆಲ್ ವ್ಯವಸ್ಥೆಯನ್ನ ಹೊಂದಿದೆ ಎಂದರು.

https://www.blogger.com/comment/frame/4139484057548375673?po=5913782681459930143&hl=kn&saa=47563&skin=soho&blogspotRpcToken=3919166

ಸುದ್ದಿಗೋಷ್ಠಿಯಲ್ಲಿ ಬ್ರಹ್ಮ ಗಾಯಕ್ವಾಡ್ ದಾಮೋದರ್ ರೆಡ್ಡಿ ಗೋವರ್ಧನ್ ಮುಂತಾದವರು ಉಪಸ್ಥಿರಿದ್ದರು.

Leave a Reply

Your email address will not be published. Required fields are marked *