ಶಿವಮೊಗ್ಗ ನಗರದ ಸೋಮಿನಕೊಪ್ಪದಿಂದ ಗೆಜ್ಜೇನಹಳ್ಳಿಗೆ ಹೋಗುವ ದಾರಿಯ ಹೊಸದಾಗಿ ನಿರ್ಮಾಣವಾಗುತ್ತಿರುವ 7 ಹಿಲ್ಸ್ ನೂತನ ಬಡಾವಣೆಯ ಪಾರ್ಕ ಪಕ್ಕದಲ್ಲಿ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಶ್ರೀ ಮಿಥುನ್ ಕುಮಾರ್ ಜಿ. ಕೆ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಮತ್ತು ಶ್ರೀ ಅನಿಲ್ ಕುಮಾರ್ ಭುಮರಡ್ಡಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕರು-1, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಶ್ರೀ ಕೃಷ್ಣಮೂರ್ತಿ ಕೆ ಪೊಲೀಸ್ ಉಪಾಧೀಕ್ಷಕರು ಸಿಇಎನ್ ಕ್ರೈಂ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂಧಿಗಳಾದ ಶೇಖರ್ ಎಎಸ್ಐ, ಧರ್ಮಾ ನಾಯ್ಕ ಹೆಚ್ಸಿ, ಅವನಾಶ ಹೆಚ್ಸಿ, ನಾರಾಯಣ ಸ್ವಾಮಿ ಪಿಸಿ, ಪರಮೇಶ್ವರಪ್ಪ ಟಿ ಪಿಸಿ, ಫಿರ್ದೊಸ್ ಅಹಮದ್ ಪಿಸಿ, ರವಿ ಬಿ ಪಿಸಿ, ಆಂಡ್ರ್ಯೂಸ್ ಜೊನ್ಸ್ ಪಿಸಿ, ಮತ್ತು ಶರತ್ ಕುಮಾರ್ ಬಿ ಎಸ್ ಪಿಸಿ* ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಆರೋಪಿ 1) ರಾಜೇಂದ್ರ ಕಾಣೋಜಿ, 22 ವರ್ಷ, ವಾಸ ರಾಜ್ಮಾಲಿ ಗ್ರಾಮ ಬರವಾನಿ ಜಿಲ್ಲೆ ಮದ್ಯ ಪ್ರದೇಶ ರಾಜ್ಯ, ಇವನು ಮದ್ಯ ಪ್ರದೇಶ ರಾಜ್ಯದಿಂದ ಬಸ್ ಮೂಲಕ ಶಿವಮೊಗ್ಗಕ್ಕೆ ಬಂದು ಗಾಂಜಾ ಸೊಪ್ಪನ್ನು 2) ಜಾವೀದ್ ಅಲ್ಲಿಸಾಬ್ ದೊಡ್ಮನಿ, 22 ವರ್ಷ, ವಾಸ ಆರ್ಶಯ ಬಡಾವಣೆ ಬೊಮ್ಮಕನಟ್ಟೆ ಶಿವಮೊಗ್ಗ. ಮತ್ತು 3) ಪರುಶುರಾಮ್ ಬಿನ್ ನಾಗೇಂದ್ರ ಹೆಚ್ 19 ವರ್ಷ ವಾಸ ಆರ್ಶಯ ಬಡಾವಣೆ ಬೊಮ್ಮನಕಟ್ಟೆ ಶಿವಮೊಗ್ಗ. ಇವರಿಗೆ ಮಾರಾಟ ಮಾಡಿ ಹಣ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದವರ ಮೇಲೆ ದಾಳಿ ನಡೆಸಿ, ಈ ಮೇಲ್ಕಂಡ ಮೂರು ಆಸಾಮಿಗಳ ಬಳಿ ಇದ್ದ ಅಂದಾಜು ಮೌಲ್ಯ 70,000/- ರೂಗಳ 2 ಕೆಜಿ 735 ಗ್ರಾಂ ತೂಕದ ಒಣ ಗಾಂಜಾ ಮತ್ತು ಒಂದು ಹೊಂಢಾ ಕಂಪನಿಯ ಬೈಕ್ ಹಾಗೂ 02 ಮೊಬೈಲ್ಗಳನ್ನು ಅಮಾನತ್ತು ಪಡಿಸಿಕೊಂಡು ಸಿಇಎನ್ ಪೊಲೀಸ್ ಠಾಣಾ ಗುನ್ನೆ ನಂ 40/2025 ಕಲಂ 20(b)(ii)(B) ರ ರೀತ್ಯಾ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡೆಸಿದ್ದು ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ನೀಡಿರುತ್ತೆ.
