ಅಬಕಾರಿ ನಿರೀಕ್ಷಕರು ಶಿವಮೊಗ್ಗ ವಲಯ-2ರ ವ್ಯಾಪ್ತಿಯಲ್ಲಿ ದಾಖಲಾದ ಅಬಕಾರಿ ಪ್ರಕರಣಗಳಲ್ಲಿ ವಶಪಡಿಸಿಕೊಂಡು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ ವಾಹನಗಳನ್ನು ಮೇ.26 ರ ಬೆಳಿಗ್ಗೆ 11 ಗಂಟೆಗೆ ನಗರದ ಅಬಕಾರಿ ಭವನದ ಆವರಣದಲ್ಲಿ ಬಹಿರಂಗ ಹರಾಜು/ಟೆಂಡರ್ ಮೂಲಕ ವಿಲೇವಾರಿ ಮಾಡಲಾಗುವುದು.
ಬಜಾಜ್ ಪಲ್ಸರ್ ಕೆಎ-14-ಇಸಿ-7965, ಟಿವಿಎಸ್ ಅಪಾಚಿ ಆರ್‌ಟಿಆರ್-160 ಕೆಎ-14-ಇಜಿ-5037, ಟಿವಿಎಸ್ ಎಕ್ಸ್ಎಲ್ ಸೂಪರ್ ಹೆವಿ ಡ್ಯೂಟಿ ಕೆಎ-14-ಇಡಿ-5883, ಡಿಯೋ ಕೆಎ-14-ಇಬಿ-2413, ಹೀರೋ ಸ್ಪೆ÷್ಲಂಡರ್ ಪ್ಲಸ್ ಕೆಎ-14-ಇಯು-1458, ಬಜಾಜ್ ಪಲ್ಸರ್ ಕೆಎ-14-ಇಎಕ್ಸ್-3876 ವಾಹನಗಳನ್ನು ಹರಾಜಿಗೆ ಇಡಲಾಗಿದ್ದು, ಷರತ್ತುಗಳು ಅನ್ವಯಿಸುತ್ತದೆ.
ವಾಹನಗಳನ್ನು ನೋಡಬಯಸುವ ಸಾರ್ವಜನಿಕರಿಗೆ ಕಛೇರಿ ಸಮಯ ಬೆಳಿಗ್ಗೆ 10 ರಿಂದ ಸಂಜೆ 5.30 ರವೆಗೂ ಅವಕಾಶ ನೀಡಲಾಗಿದೆ ಎಂದು ಡೆಪ್ಯುಟಿ ಕಮಿಷನರ್ ಆಪ್ ಎಕ್ಸೆöÊಜ್ ತಿಳಿಸಿದ್ದಾರೆ.