ತಿಲಕನಗರದ ಸರ್ಜಿ ಸೂಪರ್ ಸ್ವೇಷಾಲಿಟಿ ಆಸ್ವತ್ರೆಯಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಸುಗಮ ಸಂಚಾರ ವ್ಯವಸ್ಥೆಯ ಕುರಿತು ಶಿವಮೊಗ್ಗ ನಗರದ ಎಲ್ಲಾ ಖಾಸಗೀ ಆಸ್ಪತ್ರೆಗಳ ಮುಖ್ಯಸ್ಥರ ಸಭೆಯನ್ನು ಆಯೋಜಿಸಿದ್ದು, ಸದರಿ ಸಭೆಯಲ್ಲಿ, ಶ್ರೀ ಮಿಥುನ್ ಕುಮಾರ್ ಜಿ. ಕೆ. ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮುಖ್ಯ ಅಥಿತಿಗಳಾಗಿ ಭಾಗವಹಿಸಿ, ಕಾರ್ಯ ಕ್ರಮದ ಕುರಿತು ಈ ಕೆಳಕಂಡಂತೆ ಮಾತನಾಡಿರುತ್ತಾರೆ.
1) ಆಸ್ಪತ್ರೆಗೆ ಬರುವ ವಾಹನಗಳು ರಸ್ತೆಯ ಮೇಲೆ ಪಾರ್ಕಿಂಗ್ ಮಾಡುವುದುರಿಂದ, ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅಡತಡೆಯಾಗುತ್ತದೆ ಆದ್ದರಿಂದ ಎಲ್ಲಾ ಆಸ್ಪತ್ರೆಯವರು ಶಿವಮೊಗ್ಗ ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸುವ ಸಂಬಂಧ, ತಮ್ಮ ತಮ್ಮ ಆಸ್ಪತ್ರೆಗೆ ಬರುವ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡಬೇಕಿರುತ್ತದೆ.
2) ಶಿವಮೊಗ್ಗ ಸ್ಮಾರ್ಟ್ ಸಿಟಿ ವತಿಯಿಂದ ಈಗಾಗಲೇ ಹಲವು ಕನ್ಸರ್ವೆನ್ಸಿ ಗಳನ್ನು ಅಭಿವೃದ್ಧಿ ಪಡಿಸಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿರುತ್ತಾರೆ. ಎಲ್ಲಾ ಆಸ್ಪತ್ರೆಯವರು ತಮಗೆ ಹತ್ತಿರವಾಗುವ ಕನ್ಸರ್ವೆನ್ಸಿಯಲ್ಲಿ ಪಾರ್ಕಿಂಗ್ ಮಾಡಲು ಮಹಾನಗರ ಪಾಲಿಕೆಯವರ ಜೊತೆ ಚರ್ಚಿಸಿ, ರಿಯಾಯಿತಿ ದರವನ್ನು ಪಾವತಿ ಮಾಡಿ ಟೆಂಡರ್ ಅನ್ನು ಪಡೆದುಕೊಂಡು, ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳುವುದು.
3) ಯಾವುದೇ ಕೃತ್ಯಗಳು ಜರುಗದಂತೆ ತಡೆಯಲು ಮುಂಜಾಗೃತಾ ಕ್ರಮವಾಗಿ ಮತ್ತು ಯಾವುದೇ ಕೃತ್ಯಗಳು ವರದಿಯಾದ ನಂತರ ಶೀಘ್ರವಾಗಿ ಪತ್ತೆ ಮಾಡುವ ಸಂಬಂಧ ಆಸ್ಪತ್ರೆಗಳಿಗೆ ಹತ್ತಿರುವ ಜಂಕ್ಷನ್ ಗಳ ಹತ್ತಿರ ಸಿ. ಸಿ. ಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವುದು.
4) ಸುಗಮ ಸಂಚಾರ ವ್ಯವಸ್ಥೆಯ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರು, ವ್ಯಾಪಾರ ಮಾಡಲು ಸೀಮಿತ ಅಥವಾ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ವ್ಯಾಪಾರ ಮಾಡುವುದು. ಎಂದು ತಿಳಿಸಿರುತ್ತಾರೆ.
ಸದರಿ ಸಭೆಯಲ್ಲಿ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 1, ಶಿವಮೊಗ್ಗ, ಶ್ರೀ ಸಂಜೀವ್ ಕುಮಾರ್ ಡಿಎಸ್ಪಿ ಶಿವಮೊಗ್ಗ-ಬಿ ಉಪ ವಿಭಾಗ, ಶ್ರೀ ಭರತ್ ಮಹಾನಗರ ಪಾಲಿಕೆಯ ಇಂಜಿನಿಯರ್, ಶ್ರೀ ದೇವರಾಜ್, ಸಿಪಿಐ ಶಿವಮೊಗ್ಗ ಸಂಚಾರ ವೃತ್ತ, ಸ್ಮಾರ್ಟ್ ಸಿಟಿಯ ಅಧಿಕಾರಿಗಳು, ಕಾರ್ಪೊರೇಷನ್ ಇಂಜಿನಿಯರ್ ಗಳು ಮತ್ತು ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಯ ವ್ಯವಸ್ಥಾಪಕರು ಮತ್ತು ಆಡಳಿತ ಮಂಡಳಿಯ ಅಧಿಕಾರಿ ಹಾಗೂ ವೈಧ್ಯಾಧಿಕಾರಿಗಳು ಉಪಸ್ಥತರಿದ್ದರು.