ಎಡಗೈಯೇ ಅಪಘಾತಕೆ ಕಾರಣ ಚಿತ್ರತಂಡ ಪತ್ರಿಕಾಗೋಷ್ಠಿ ನಡೆಸಿದರು.ಜೂನ್ 13ರಂದು ಬಿಡುಗಡೆಯಾಗಿರುವ  ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.‌ ಸಮರ್ಥ್ ಕಡಕೋಳ್ ಉತ್ತಮ‌ ನಿರ್ದೇಶನ‌ ನೀಡಿದ್ದಾರೆ. ನಿರ್ಮಾಣದ ಜವಾಬ್ದಾರಿ ಸಹ ಹೊತ್ತಿದ್ದಾರೆ. ನಟ ದಿಗಂತ್ ಚಿತ್ರದಲ್ಲಿ ಅದ್ಬುತವಾಗಿ ನಟಿಸಿದ್ದಾರೆ.‌ ನಮ್ಮ ಚಿತ್ರವನ್ನು ರವಿಚಂದ್ರ ವಿತರಿಸಿದ್ದಾರೆ. ಧನು ಮತ್ತು ಹರ್ಷ ಮೊದಲ ಚಿತ್ರದಲ್ಲೆ ಎಲ್ಲರ ಗಮನ ಸೆಳೆಯುವಂತೆ ನಟಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗದ ರಾಜೇಶ್ ಕೀಳಂಬಿ ತಿಳಿಸಿದರು.

300ಕ್ಕೂ ಹೆಚ್ಚು ಪ್ರದರ್ಶನ ಪ್ರಾರಂಭವಾಯಿತು. ‌ಜನರಿಂದ ಜನರಿಗೆ ತಿಳಿದು ಉತ್ತಮ ಪ್ರದರ್ಶನ ಕಾಣುತ್ತಿದೆ. ಶಿವಮೊಗ್ಗದಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ಮಲ್ಲಿಕಾರ್ಜುನ, ಭಾರತ್ ಸಿನಿಮಾಸ್ ನಲ್ಲಿ ಚಿತ್ರವು ಪ್ರದರ್ಶನ ಆಗುತ್ತಿದೆ ಎಂದರು.

ನಟ ದೂದ್ ಪೇಡ ದಿಗಂತ ಮಾತನಾಡಿ ಮಲೆನಾಡಿನ ಶಿವಮೊಗ್ಗದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ‌ಒಳ್ಳೆಯ ಸಿನಿಮಾ ಮಾಡಿದ್ದೇವೆ. ಕುಟುಂಬ ಸಮೇತ ಎಲ್ಲರೂ ಬಂದು ಚಿತ್ರ ವೀಕ್ಷಿಸಿ ಬೇಕು ಎಂದರು. ನಾನು ಇದೇ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನವನು.ಕನ್ನಡ ಚಿತ್ರವನ್ನು ಪ್ರೋತ್ಸಾಹಿಸಿ ಬೆಳೆಸಿ ಎಂದರು.

ಈ ಸಂದರ್ಭದಲ್ಲಿ ನಟಿ ನಿಧಿ ಸುಭಯ ಶಿವಮೊಗ್ಗ ಸಿನಿಮಾ ಅಡ್ಡ ಮುಖ್ಯಸ್ಥರಾದ ರಘು ಗುಂಡ್ಲು ಹೋಟೆಲ್ ಶುಭ ಮಾಲಿಕರಾದ ಉದಯ್ ಕಡಂಬ ಬಿಜೆಪಿ ಸಾಮಾಜಿಕ ಜಾಲತಾಣದ ಶ್ರೀನಾಗ್ ಮತ್ತು ಚಿತ್ರತಂಡದ ಮುಂತಾದವರು ಉಪಸ್ಥರಿದ್ದರು.