K.P.SHETTY…
ರೋಟರಿ ವಲಯ 10ರ ಗವರ್ನರ್ ಆಗಿ ಕೃಷ್ಣ ಪ್ರಸಾದ್ ಶೆಟ್ಟಿ, ನೂತನವಾಗಿ ಆಯ್ಕೆಯಾಗಿದ್ದಾರೆ.
ಅವರು ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಸ್ಥಾಪಕ ಸದಸ್ಯರಾಗಿ ಮತ್ತು ಸ್ಥಾಪಕ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದಾರೆ.2019-20ರ ಸಾಲಿನ ಯಶಸ್ವಿ ಅಧ್ಯಕ್ಷರಾಗಿ ಶಿವಮೊಗ್ಗ ಜಿಲ್ಲಾಮಟ್ಟದ 12 ಪ್ರಶಸ್ತಿಗಳನ್ನು ಪಡೆದು ರೋಟರಿ ಇಂಟರ್ನ್ಯಾಷನಲ್ ಅಧ್ಯಕ್ಷರ ಪ್ರತಿಷ್ಠಿತ SIETATION AWARD ಪಡೆದುಕೊಂಡಿದ್ದಾರೆ.
ಕೆಪಿ ಶೆಟ್ಟಿ ಅವರು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 34 ವರ್ಷ ಬ್ಯಾಂಕ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಶಿವಮೊಗ್ಗ ಬಂಟರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.ಇವರ ಪತ್ನಿ ವಾಣಿಕೃಷ್ಣ ಪ್ರಸಾದ್ ಜಾವಳಿ ಜ್ಞಾನ ದೀಪ ವಿದ್ಯಾಸಂಸ್ಥೆಯಲ್ಲಿ ಮುಖ್ಯ ಉಪಾಧ್ಯಾಯನಿಯಾಗಿ ಸಲ್ಲಿಸುತ್ತಿದ್ದಾರೆ. ಇವರ ಮಗಳು ಅರ್ಪಿತ ಶೆಟ್ಟಿ, ಬೆಂಗಳೂರಿನ ಎಪಿಎಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೃಷ್ಣ ಪ್ರಸಾದ್ ಶೆಟ್ಟಿ ರವರಿಗೆ ಶಿವಮೊಗ್ಗ ಬಂಟರ ಸಂಘವು ಅಭಿನಂದನೆ ತಿಳಿಸಿದ್ದಾರೆ.