ಬಂಟರ ಯಾನೆ ನಾಡವರ ಸಂಘ ಮತ್ತು ಕಂಪನಿಯೋ ಸಂಸ್ಥೆ ಸಹಯೋಗದಲ್ಲಿ ಉಚಿತ ಫೂಟ್ ಪಲ್ಸ್ ತೆರಪಿ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಕಂಪಾನಿಯೋ ಸಂಸ್ಥೆಯವರು ದೇಶಿಯವಾಗಿ ಉತ್ಪಾದನೆ ಮಾಡಿರುವ ವೈದ್ಯಕೀಯ ಪ್ರಮಾಣಿತ ಉಪಕರಣಗಳನ್ನು ಬಳಸಿ ಈ ಥೆರಪಿ ಚಿಕಿತ್ಸೆಯನ್ನು ನೀಡಲಾಗುವುದು.
ಅನೇಕ ದೀರ್ಘಾವಧಿ ದೈಹಿಕ ತೊಂದರೆಗಳು ಮತ್ತು ಖಾಯಿಲೆಗಳನ್ನು ಪರಿಹರಿಸಿಕೊಳ್ಳಲು ಈ ಥೆರಪಿ ಪರಿಣಾಮಕಾರಿ ಚಿಕಿತ್ಸಕ ಮಾರ್ಗವಾಗಿದೆ.
ದೇಶದಾದ್ಯಂತ ಮತ್ತು ಶಿವಮೊಗ್ಗ ನಗರದಲ್ಲಿ ಲಕ್ಷಾಂತರ ಜನರು ಈ ಥೆರಪಿಯಿಂದ ಗುಣಮುಖರಾಗಿದ್ದಾರೆ.
ಗೋಪಾಲಗೌಡ ಬಡಾವಣೆಯಲ್ಲಿರುವ ಶಿವಮೊಗ್ಗ ಬಂಟರ ಭವನದಲ್ಲಿ ದಿನಾಂಕ: 26-6-2025 ರಿಂದ ಪ್ರಾರಂಭಗೊಂಡು 06-07-2025 ರವರೆಗೆ ಒಟ್ಟು 11 ದಿನಗಳು ನಿರಂತರವಾಗಿ ನಡೆಯಲಿರುವ ಈ ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರದ ಪ್ರಯೋಜನವನ್ನು ಸಮಾಜ ಬಾಂಧವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯಬೇಕಾಗಿ ಬಂಟರ ಯಾನೆ ನಾಡವರ ಸಂಘದ ಪರವಾಗಿ ವಿನಮ್ರವಾಗಿ ಕೋರುತ್ತೇವೆ.
ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು
ಬಂಟರ ಯಾನೆ ನಾಡವರ ಸಂಘ, ಶಿವಮೊಗ್ಗ