HOTEL ARAMANE SWADISTA GRAND OPENING…

ಹೋಟೆಲ್ ಅರಮನೆ ಸ್ವಾದಿಷ್ಟ ಮತ್ತು ಪಾರ್ಟಿ ಹಾಲ್ ಶುಭಾರಂಭಗೊಂಡಿದೆ.ನಗರದ ತೀರ್ಥಹಳ್ಳಿ ರಸ್ತೆಯ ನ್ಯೂ ಮಂಡ್ಲಿಯಲ್ಲಿ 9ನೇ ಶಾಖೆಯನ್ನು ಶಾಸಕರಾದ ಚನ್ನಬಸಪ್ಪ ಡಾ ಸತೀಶ್ ಕುಮಾರ್ ಶೆಟ್ಟಿ ಡಿ ಎಸ್ ಅರುಣ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕರಾವಳಿಯ ಬಂಟ ಸಮಾಜ ರಾಜ್ಯ ಮತ್ತು ದೇಶದ ಎಲ್ಲಾ ಕಡೆಗಳಲ್ಲೂ ಹೋಟೆಲ್ ಉದ್ಯಮ ನಡೆಸಿ ಯಶಸ್ವಿಯಾಗಿದ್ದಾರೆ.6 ತಿಂಗಳಲ್ಲಿ ಹಿಂದೆ ಅಯೋಧ್ಯದಲ್ಲಿ ಸಹ ನೂತನ ಹೋಟೆಲ್ ಉಡುಪಿ ಶುಭಾರಂಭಗೊಂಡಿದೆ.ಅರಮನೆ ತಂಡವು ರಾಜ್ಯದ ಎಲ್ಲಾ ಕಡೆಗಳಲ್ಲಿ ಶಾಖೆಗಳನ್ನು ಹೊಂದಿದೆ.ಈಗ ಶಿವಮೊಗ್ಗದ 9ನೇ ಶಾಖೆಯನ್ನು ತೆರೆದು ಗ್ರಾಹಕರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದರು.

ಶಿವಮೊಗ್ಗ ಬಂಟರ ಸಂಘದ ಅಧ್ಯಕ್ಷರಾದ ಡಾ ಸತೀಶ್ ಕುಮಾರ್ ಶೆಟ್ಟಿ ಮಾತನಾಡಿ ಅರಮನೆ ತಂಡವು ಸುಮಾರು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ರುಚಿ ಗಳನ್ನು ನೀಡುತ್ತಾ ಬಂದಿದ್ದಾರೆ. ಇದೇ ರೀತಿ ಮುಂದೆಯೂ ಸಹ ಗುಣಮಟ್ಟ ಕಾಪಾಡಿಕೊಳ್ಳಲಿ ಎಂದು ಸಂಘದ ಪರವಾಗಿ ಮತ್ತು ವೈಯಕ್ತಿಕವಾಗಿ ಶುಭ ಹಾರೈಸುತ್ತೇನೆ ಎಂದರು.


ವಿಧಾನ ಪರಿಷತ್ ಸದಸ್ಯರಾದ ಡಿ ಎಸ್ ಅರುಣ್ ಮಾತನಾಡಿ ಸುಮಾರು ವರ್ಷಗಳಿಂದ ನನಗೆ ಪ್ರಸನ್ನ ಶೆಟ್ಟಿ ಪರಿಚಯಿಸ್ತರು. ಅವರು ಮಾಡಿದ ಎಲ್ಲಾ ಹೋಟೆಲ್ ಗಳು ಗ್ರಾಹಕರಿಗೆ ಉತ್ತಮವಾದ ಸೇವೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.ಈ ನೂತನ ಹೋಟೆಲ್ ಸಹ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಮಾಜಿ ಉಪ ಮಹಾಪೌರರಾದ ಶಂಕರ ಗನ್ನಿ ಮಾಜಿ ಪಾಲಿಕೆ ಸದಸ್ಯರಾದ ಲಕ್ಷ್ಮಿ ಶಂಕರ್ ನಾಯಕ್ ಮತ್ತು ಸಮಸ್ತ ಗ್ರಾಹಕರು ಬಂಟ ಸಮಾಜದವರು ಮತ್ತು ಆತ್ಮೀಯರು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನೂತನ ಉದ್ಯಮಕ್ಕೆ ಶುಭವಾಗಲಿ ಎಂದು ಹಾರೈಸಿದರು.