ಯುವ ಸಬಲೀಕರಣ ಮತ್ತು ಕ್ರೀಡಾ ಮಂತ್ರಾಲಯದಿಂದ 2024-25ನೇ ಸಾಲಿನ ಟೆನ್ಜಿಂಗ್ ನೊರ್ಜಿ ನ್ಯಾಷನಲ್ ಅಡ್ವೆಂಜರ್ ಅವಾರ್ಡ್ (TNNAA) ಗಾಗಿ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
2022 ರಿಂದ 2024ನೇ ಸಾಲಿನಲ್ಲಿ ಜಲ ಸಾಹಸ, ವಾಯು ಸಾಹಸ ಮತ್ತು ಭೂ ಸಾಹಸ ಕ್ರೀಡೆಗಳಲ್ಲಿ ಸಾಧನೆ ಮಾಡಿರುವ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟುಗಳು ಈ ಪ್ರಶಸ್ತಿಗೆ ಅರ್ಹರಿದ್ದು, ಆಸಕ್ತರು http://awards.gov.in ವೆಬ್‌ಸೈಟ್ ಮೂಲಕ ಜೂ. 30 ರೊಳಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
