ಸೇನಾ ನೇಮಕಾತಿ ಕಚೇರಿ, ಮಂಗಳೂರು ಇವರು ಭಾರತೀಯ ಸೇನೆಗೆ ಸೇರ ಬಯಸುವ ಅಭ್ಯರ್ಥಿಗಳಿಗೆ ಸರ್ಕಾರಿ ನೌಕರರ ಭವನ, ಶಿವಮೊಗ್ಗ ಇಲ್ಲಿ ಕರ್ನಲ್ ಸೋಮು ಮಹಾರಾಜನ್, ನಿರ್ದೇಶಕರು, ಸೇನಾ ನೇಮಕಾತಿ ಕಛೆರಿ, ಮಂಗಳೂರು, ಮೇಜರ್ ಡಾ. ಅಬಜೀತ ಸಿಂಗ್ ಮಾರ್ಗದರ್ಶನ ಶಿಬಿರ ನಡೆಸಿಕೊಟ್ಟರು.

ಕರಾಸನೌಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಕಾರ್ಯಕ್ರಮ ಉದ್ಘಾಟಿಸಿ, ಭಾರತೀಯ ಸೇನೆಯ ಸೇವಾ ಭಾವ, ದೇಶ ರಕ್ಷಣೆಯಲ್ಲಿ ವಹಿಸುವ ಮಹತ್ವದ ಪಾತ್ರದ ಕುರಿತು ಮಾತನಾಡಿದರು. ಕರಾಸನೌಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನಕುಮಾರ ಅಧ್ಯಕ್ಷತೆ ವಹಿಸಿ, ಭಾರತೀಯ ಸೇನೆಗೆ ಸಂಬಂಧಿಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಸೇನೆಯ ಪಾತ್ರವನ್ನು ಶ್ಲಾಘಿಸಿದರು.

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಡಾ.ಸಿ.ಎ.ಹಿರೇಮಠ ಸ್ವಾಗತಿಸಿದರು. ನಿವೃತ್ತ ಕರ್ನಲ್ ರಾಮಚಂದ್ರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅನಿಲ ಪಾಮಲಪಾಟಿ ವಂದಿಸಿ, ಸತೀಶ ವೈ.ಎಸ್ ಕಾರ್ಯಕ್ರಮ ನಿರೂಪಿಸಿದರು.