ಶಿವಮೊಗ್ಗ ರೌಂಡ್ ಟೇಬಲ್, ಶಿವಮೊಗ್ಗ ಮಲ್ನಾಡ್ ರೌಂಡ್ ಟೇಬಲ್, ಮಲ್ನಾಡ್ ಮಾಸ್ಟರ್ಸ್ ನ ವತಿಯಿಂದ ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ Knights In Khaki ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸದರಿ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ನಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳಾದ 1) ಸಂತೋಷ್ ಆರ್, ಸಿಪಿಸಿ ಮಹಿಳಾ ಪೊಲೀಸ್ ಠಾಣೆ, 2) ಆದರ್ಶ್ ಹೆಚ್. ಡಿ, ಸಿಪಿಸಿ, ಕುಂಸಿ ಪೊಲೀಸ್ ಠಾಣೆ, 3) ಪದ್ಮರಾಜ್ ಎಸ್, ಕೆ, ಹೆಚ್.ಸಿ ಶಿವಮೊಗ್ಗ ಸಂಚಾರ ಪೂರ್ವ ಪೊಲೀಸ್ ಠಾಣೆ, 4) ರಾಘವೇಂದ್ರ ಜಿ, ಹೆಚ್.ಸಿ, ಹಳೆನಗರ ಪೊಲೀಸ್ ಠಾಣೆ, 5) ತಿರುಕಪ್ಪ, ಹೆಚ್.ಸಿ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ, 6) ಕೃಷ್ಣಮೂರ್ತಿ ಸಿಪಿಸಿ, ಸಾಗರ ಟೌನ್ ಪೊಲೀಸ್ ಠಾಣೆ, 7) ಕಿರಣ್ ಕುಮಾರ್, ಹೆಚ್.ಸಿ ಪೊಲೀಸ್ ಠಾಣೆ, 8) ಶ್ರೀಮತಿ ವೀಣಾ ಹೆಚ್.ಸಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿ, ಡಿಎಸ್ಬಿ ಶಾಖೆ, 9) ಜನಾರ್ದನ್ ಎಲ್, ಹೆಚ್.ಸಿ (ನಿಸ್ತಂತು) ಕಂಟ್ರೋಲ್ ರೂಂ ಶಿವಮೊಗ್ಗ, 10)ಶ್ರೀ ರಮೇಶ್ ನಾಯ್ಕ್, ಎಎಸ್ಐ, ಫಿಂಗರ್ ಪ್ರಿಂಟ್ ಯೂನಿಟ್ ಶಿವಮೊಗ್ಗ, 11) ರಾಘವೇಂದ್ರ, ಎಪಿಸಿ, ಡಿಎಆರ್ ಶಿವಮೊಗ್ಗ ಮತ್ತು 12) ಸಂತೋಷ್ ಕುಮಾರ್, ಎಪಿಸಿ, ಡಿಎಆರ್ ಶಿವಮೊಗ್ಗ ರವರುಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿ ಅಭಿನಂದಿಸಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಶ್ರೀ ಧನಂಜಯ್ ಸರ್ಜಿ, ಎಂ.ಎಲ್.ಸಿ ಶಿವಮೊಗ್ಗ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ್ಗ, ಶ್ರೀ ಸುಶ್ರುತ್ ಬೆಳಗೂರ್ ಎವಿಸಿ, ಶ್ರೀ ಪ್ರಶಾಂತ್ ಕೆ, ಚೇರ್ ಮನ್, ಶ್ರೀ ಆದಿತ್ಯ ಆಚಾರ್ಯ, ಚೇರ್ ಮನ್ ಮತ್ತು ಶ್ರೀ ರೋಹನ್ ಎಎಸ್ ಚೇರ್ ಮನ್ ಹಾಗೂ ಶಿವಮೊಗ್ಗ ಮಲ್ನಾಡ್ ರೌಂಡ್ ಟೇಬಲ್, ರೌಂಡ್ ಟೇಬಲ್ ನ ಪದಾಧಿಕಾರಿಗಳು, ಕುಟುಂಬ ಸದಸ್ಯರು ಮತ್ತು ಪೊಲೀಸ್ ಅಧಿಕಾರಿ ಸಿಬ್ಬಂಧಿಗಳ ಕುಟುಂಬ ಸದಸ್ಯರುಗಳು ಉಪಸ್ಥಿತರಿದ್ದರು.