ಕರ್ನಾಟಕ ಶಿಕ್ಷಣ ಕಾಯ್ದೆ 1983 ಅನುಚ್ಛೆದ 35ರ ಪ್ರಕಾರ ಹಾಗೂ ಕರ್ನಾಟಕ ಟ್ಯುಟೋರಿಯಲ್ ಇನ್ಸ್ಟಿಟ್ಯೂಷನ್ಸ್ ನಿಯಮಗಳು 2001 ಈ ನಿಯಮವು ಸರ್ಕಾರದ ಅಧಿಸೂಚನೆ ಇಡಿ 43 ವಿವಧ 2000, ದಿ: 05/03/2002 ರಿಂದ ಜಾರಿಗೆ ಬಂದಿದ್ದು, ಈ ನಿಯಮಗಳ ಅಡಿಯಲ್ಲಿ ಪದವಿ ಪೂರ್ವ ಶಿಕ್ಷಣಕ್ಕೆಸಂಬಂಧಿಸಿದ ಕೋಚಿಂಗ್ ಸೆಂಟರ್/ ಸಂಸ್ಥೆಗಳನ್ನು ನಡೆಸಲು ಉದ್ದೇಶಿಸಿದ ಹಾಗೂ ಈಗಾಗಲೇ ನಡೆಸುತ್ತಿರುವ ಕೋಚಿಂಗ್ ಸೆಂಟರ್/ಸಂಸ್ಥೆಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕಾಗಿದ್ದು, ಮತ್ತು ಪ್ರತಿ ವರ್ಷ ನವೀಕರಿಸಿಕೊಳ್ಳಬೇಕು.
ಅನಧಿಕೃತವಾಗಿ ಕೋಚಿಂಗ್ ಸೆಂಟರ್/ಸಂಸ್ಥೆಗಳನ್ನು ನಡೆಸುತ್ತಿರುವುದು ಕಂಡುಬಂದಲ್ಲಿ ಕಾನೂನು ರೀತ್ಯಾ ಕ್ರಮಗಳನ್ನು ಜರುಗಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.