ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ವಿವಿಧ ಕಲಾಪ್ರಕಾರಗಳಾದ ಚಿಗುರು, ಯುವಸೌರಭ, ಸಾಂಸ್ಕೃತಿ ಸೌರಭ ಕಾರ್ಯಕ್ರಮಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.


ಚಿಗುರು ಕಾರ್ಯಕ್ರಮಕ್ಕೆ 8 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಅವಕಾಶವಿದ್ದು, ಈ ಕಾರ್ಯಕ್ರಮದಲ್ಲಿ ಶಾಸ್ತ್ರೀಯ, ಕರ್ನಾಟಕ, ಹಿಂದೂಸ್ಥಾನಿ ಸಂಗೀತ, ಗಾಯನ, ವಾದ್ಯ ಸಂಗೀತ, ಸುಗಮ ಸಂಗೀತ, ವಚನ ಸಂಗೀತ, ಜನಪದ ಗೀತೆಗಳು, ಸಮೂಹ ನೃತ್ಯ, ನೃತ್ಯರೂಪಕ, ನಾಟಕ, ಯಕ್ಷಗಾನ, ಮೂಡಲಪಾಯ, ಬಯಲಾಟ, ಗೊಂಬೆಮೇಳ ಮತ್ತು ಏಕಪಾತ್ರಾಭಿನಯ ಕಾರ್ಯಕ್ರಮಗಳಿವೆ.


ಯುವಸೌರಭದಲ್ಲಿ 15 ರಿಂದ 30 ವರ್ಷದೊಳಗಿನ ಯುವಕರಿಗೆ ಸುಗಮ ಸಂಗೀತ, ವಚನ ಸಂಗೀತ, ಜನಪದ ಗೀತೆಗಳು, ಸಮೂಹ ನೃತ್ಯ/ ನೃತ್ಯರೂಪಕ, ಜನಪದ ಪ್ರದರ್ಶನ ಕಲಾತಂಡ (ವಿವಿಧ 02 ಕಲಾಪ್ರಕಾರಗಳು) ನಾಟಕ, ಯಕ್ಷಗಾನ, ಮೂಡಲಪಾಯ, ಬಯಲಾಟ, ಗೊಂಬೆಮೇಳ ಪ್ರಕಾರಗಳಿಗೆ ಅವಕಾಶವಿದೆ.


ಸಾಂಸ್ಕೃತಿಕ ಸೌರಭದಲ್ಲಿ 30 ವರ್ಷ ಮೇಲ್ಪಟ್ಟ ಹಿರಿಯ ಕಲಾವಿದರಿಗೆ ಸಂಬಂಧಿಸಿದ ಕಲಾಪ್ರಕಾರಗಳಾಗಿದ್ದು, ಇದರಲ್ಲಿ ಶಾಸ್ತ್ರೀಯ ಸಂಗೀತ, ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ಗಾಯನ, ವಾದ್ಯ ಸಂಗೀತ, ಸುಗಮ ಸಂಗೀತ, ವಚನ ಸಂಗೀತ, ಜನಪದ ಗೀತೆಗಳು, ಸಮೂಹನೃತ್ಯ, ನೃತ್ಯರೂಪಕ, ಜನಪದ ಪ್ರದರ್ಶನ ಕಲಾತಂಡ, (03 ವಿವಿಧ ಕಲಾಪ್ರಕಾರಗಳು) ನಾಟಕ, ಯಕ್ಷಗಾನ, ಬಯಲಾಟ, ಗೊಂಬೆಮೇಳ, ಗಮಕ, ಕಥಾಕೀರ್ತನ ಕಾರ್ಯ ಕ್ರಮಗಳಿವೆ.


ಆಸಕ್ತ ಕಲಾವಿದರು ತಮ್ಮ ವಯಸ್ಸಿನ ಧೃಡೀಕರಣ ದಾಖಲೆಗಳೊಂದಿಗೆ ಸಂಗೀತ ವಿದ್ಯಾಭ್ಯಾಸದ ಪ್ರಥಮ ದರ್ಜೆ (ಜೂನಿಯರ್ ಗ್ರೇಡ್), ಪ್ರೌಢದರ್ಜೆ (ಸೀನಿಯರ್ ಗ್ರೇಡ್), ವಿದ್ವತ್ ಶ್ರೇಣಿ, ಆಕಾಶವಾಣಿ ಬಿ ಐಗ್ರೇಡ್ ಹಾಗೂ ಸರಕಾರದಿಂದ ನೀಡುವ ಪ್ರಶಸ್ತಿ ಪುರಸ್ಕೃತ ದಾಖಲೆಗಳೊಂದಿಗೆ ತಮ್ಮ ಸ್ವವಿವರವನ್ನು ಬಿಳಿ ಹಾಳೆ ಮೇಲೆ ಬರೆದು ಸಂಗೀತ ದಾಖಲೆಗಳೊಂದಿಗೆ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕುವೆಂಪು ರಂಗಮAದಿರ ಶಿವಮೊಗ್ಗ ಇಲ್ಲಿನ ವಿಳಾಸಕ್ಕೆ ಜು.15 ರೊಳಗಾಗಿ ಅರ್ಜಿಯನ್ನು ಸಲ್ಲಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂ.ಸಂ.08182-223354 ಗೆ ಸಂಪರ್ಕಿಸುವುದು.