ಶಿವಮೊಗ್ಗ ರಂಗಾಯಣವು ನಗರದ ರಂಗಾಯಣ ಕಚೇರಿ ಸುವರ್ಣ ಸಂಸ್ಕೃತಿ ಭವನದಲ್ಲಿ ಜುಲೈ ಎರಡನೇ ವಾರದಿಂದ ಪ್ರತಿದಿನ ಸಂಜೆ 6.00 ರಿಂದ 90.00ರವರೆಗೆ 30 ದಿನಗಳ ನಾಟಕ ನಿರ್ಮಾಣ ಉಚಿತ ಕಾರ್ಯಾಗಾರ ಏರ್ಪಡಿಸಲಾಗಿದ್ದು, ಶಿವಮೊಗ್ಗ ನಗರದ ಆಸಕ್ತ ಕಲಾವಿದರಿಂದ ಅರ್ಜಿ ಆಹ್ವಾನಿಸಿದೆ.
ಭಾಗವಹಿಸುವ ಅಭ್ಯರ್ಥಿಗಳು 18-35ರೊಳಗಿನ ವಯೋಮಾನದವರಾಗಿದ್ದು, ಕಾರ್ಯಾಗಾರದಲ್ಲಿ ಭಾಗವಹಿಸಿ, ನಾಟಕ ಪ್ರದರ್ಶನ ನೀಡಲು ಸಿದ್ಧರಿರಬೇಕು. ನಿರ್ಮಿತ ನಾಟಕದ ಪ್ರದರ್ಶನಗಳು ವಿವಿಧ ಸ್ಥಳಗಳಲ್ಲಿ ನಡೆಯಲಿದ್ದು, ಈ ಪ್ರದರ್ಶನದ ಸಮಯದಲ್ಲಿ ಪ್ರದರ್ಶನದ ಭತ್ಯೆಯನ್ನು ರಂಗಾಯಣದ ನಿಯಮಾನುಸಾರ ನೀಡಲಾಗುತ್ತದೆ.
ಆಸಕ್ತರು ತಮ್ಮ ಹೆಸರು, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ರಂಗಾನುಭವ ಮತ್ತು ವಿದ್ಯಾಭ್ಯಾಸದ ಸ್ವವಿವರಗಳೊಂದಿಗೆ ಆಧಾರ್ ಕಾರ್ಡ್ ಪ್ರತಿಯನ್ನು ಲಗತ್ತಿಸಿ ಜು. 05 ರೊಳಗಾಗಿ ಆಡಳಿತಾಧಿಕಾರಿಗಳು, ರಂಗಾಯಣ, ಸುವರ್ಣ ಸಂಸ್ಕೃತಿ ಭವನ, ಅಶೋಕನಗರ, ಶಿವಮೊಗ್ಗ ಇಲ್ಲಿಗೆ ಖುದ್ದಾಗಿ, ಅಂಚೆ ಅಥವಾ ಇ-ಮೇಲೆ admin.rangayanashivamogga@gmail.com ಮೂಲಕ ಸಲ್ಲಿಸುವಂತೆ ರಂಗಾಯಣದ ಆಡಳಿತಾಧಿಕಾರಿ ಡಾ. ಶೈಲಜಾ ಎ.ಸಿ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.