ಶ್ರೀ ರಘುವೀರ್ PSI, ತುಂಗಾನಗರ ಪೊಲೀಸ್‌ ಠಾಣೆ ರವರು ಶಿವಮೊಗ್ಗ ನಗರದ Delhi Word School ನಲ್ಲಿ, ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡು

ವಿಧ್ಯಾರ್ಥಿಗಳ ಕುರಿತು ಮಾತನಾಡಿ 1) ಮಕ್ಕಳ ಸಹಾಯವಾಣಿ ಸಂಖ್ಯೆ - 1098, 2) ಕಾನೂನಿನಲ್ಲಿ ಮಕ್ಕಳಿಗೆ ಇರುವ ಹಕ್ಕುಗಳು, 3) ಮಕ್ಕಳಿಗೆ ಶಿಕ್ಷಣದ ಮಹತ್ವ 4) ಪೋಕ್ಸೋ ಕಾಯ್ದೆಯ ಬಗ್ಗೆ ತಿಳಿಸಿಕೊಟ್ಟಿರುತ್ತಾರೆ.

ಈ ಸಂದರ್ಭದಲ್ಲಿ ಮಾತನಾಡಿದ psi ರಘುವೀರ್ ರವರು ಇಂದಿನ ಮಕ್ಕಳು ನಾಳೆ ದೇಶದ ಪ್ರಜೆಗಳು. ಶಾಲೆಯಲ್ಲಿ ಹೇಳಿಕೊಟ್ಟ ಪಾಠಗಳನ್ನು ಚೆನ್ನಾಗಿ ಕಲಿತು ಮುಂದಿನ ಜೀವನದಲ್ಲಿ ಉತ್ತಮ ಪ್ರಜೆಗಳಾಗಿ ಜೀವನವನ್ನು ರೂಪಿಸಿಕೊಳ್ಳಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಶಾಲೆಯ ಮುಖ್ಯ ಉಪಾಧ್ಯಾಯರದ ದಿವ್ಯ ಶೆಟ್ಟಿ ಮಾತನಾಡಿ ನಮ್ಮ ಶಾಲೆಯಲ್ಲಿ ವಿಶೇಷ ಟೀಚಿಂಗ್ ಸಿಬ್ಬಂದಿ ತಂಡ ಹೊಂದಿದ್ದು ಮಕ್ಕಳಿಗೆ ಪರೀಕ್ಷಾ ಸಮಯದಲ್ಲಿ ಎಲ್ಲಾ ರೀತಿಯಲ್ಲೂ ಉಪಯುಕ್ತವಾಗುತ್ತದೆ. ಮಕ್ಕಳು ಮುಂದಿನ ಭವಿಷ್ಯ ರೂಪಿಸಿಕೊಳ್ಳುವುದಕ್ಕೆ ನಮ್ಮ ಶಾಲೆ ಮಾದರಿಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಶಿಕ್ಷಕ ವೃಂದ ಹಾಗೂ ತುಂಗಾನಗರ ಪೊಲೀಸ್‌ ಠಾಣೆಯ ಅಧಿಕಾರಿಗಳು ಉಪಸ್ಥಿತರಿದ್ದರು.