ಆತ್ಮ ಯೋಜನೆಯಡಿ 2025-26 ನೇ ಸಾಲಿಗೆ ನೇರ ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ಭದ್ರಾವತಿ ತಾಲ್ಲೂಕಿನ ಕೂಡ್ಲಿಗೆರೆ ರೈತ ಸಂಪರ್ಕ ಕೇಂದ್ರಕ್ಕೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಹುದ್ದೆಗೆ ನೇಮಿಸಲು ಅರ್ಜಿ ಆಹ್ವಾನಿಸಲಾಗಿದೆ.
45 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಕೃಷಿ ಅಥವಾ ಕೃಷಿ ಸಂಬAಧಿತ ವಿಷಯದಲ್ಲಿ ಪದವಿ ಹೊಂದಿದ್ದು, 1 ವರ್ಷದ ಅನುಭವ, ಕಂಪ್ಯೂಟರ್ ಸಾಕ್ಷರತೆ ಹೊಂದಿರಬೇಕು. ಅರ್ಜಿಯೊಂದಿಗೆ ಸ್ನಾತಕ/ಸ್ನಾತಕೋತ್ತರ ಪದವಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಅಂತಿಮ ಅಂಕಪಟ್ಟಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಯಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ, ಸೇವಾ ಅನುಭವ ಪ್ರಮಾಣ ಪತ್ರ ಲಗತ್ತಿಸಬೇಕು.
ಅರ್ಜಿಯನ್ನು ಯೋಜನಾ ನಿರ್ದೇಶಕರು(ಆತ್ಮ) ಹಾಗೂ ಜಂಟಿ ನಿರ್ದೇಶಕರು, ಶಿವಮೊಗ್ಗ ಇವರ ಕಚೇರಿಯಲ್ಲಿ ಪಡೆದು ಸ್ವವಿವರಗಳೊಂದಿಗೆ ದಿನಾಂಕ: 21-07-2025 ರೊಳಗೆ ಯೋಜನಾ ನಿರ್ದೇಶಕರು(ಆತ್ಮ) ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಹಳೇ ತೀರ್ಥಹಳ್ಳಿ ರಸ್ತೆ, ಶಿವಮೊಗ್ಗ 577202 ಇಲ್ಲಿಗೆ ಸಲ್ಲಿಸಬಹುದೆಂದು ಕೃಷಿ ಜಂಟಿ ನಿರ್ದೇಶಕರು ಹಾಗೂ ಯೋಜನಾ ನಿರ್ದೇಶಕರು(ಆತ್ಮ) ತಿಳಿಸಿದ್ದಾರೆ.