ತುಂಬಿ ಹರಿಯುತ್ತಿರುವ ಮಲೆನಾಡಿನ ಜೀವನದಿ ತುಂಗೆಗೆ ಶಿವಮೊಗ್ಗ ಜೆ ಸಿ ಐ ಭಾವನದಿಂದ ಬಾಗಿನ
ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಜೀವನದಿಯಾದ ತುಂಗಾ ನದಿಯು ರಾಜ್ಯದ ಕೃಷಿ, ಕುಡಿಯುವ ನೀರು ಮತ್ತು ಪರಿಸರ ಸಮತೋಲನದ ಮತ್ತು ಜಾನುವಾರುಗಳಿಗೆ ಪ್ರಮುಖ ಮೂಲವಾಗಿದ್ದು,ಸಕಲ ದೇವಾನುದೇವತೆಗಳ ಅನುಗ್ರಹದಿಂದ ಮಳೆಗೆ ಮೈದುಂಬಿ ಹರಿಯುತ್ತಿರುವ ತುಂಗೆಗೆ ನಗರದ ಕೋರ್ಪಲ್ಲಯ್ಯನ ಛತ್ರದ ತುಂಗಾ ಮಂಟಪದಲ್ಲಿ ಜೆಸಿಐ ಶಿವಮೊಗ್ಗ ಭಾವನದಿಂದ ಅಧ್ಯಕ್ಷರಾದ ಜೆಸಿ ರೇಖಾ ರಂಗನಾಥ್ ರವರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಜೆ ಸಿ ಚೈತ್ರ ಪಿ ಸಜ್ಜನ ಜೆ ಸಿ ಸುರೇಖಾ ಮುರಳಿಧರ್ ಜೆಸಿ ಪುಷ್ಪ ಶೆಟ್ಟಿ ,ಜೆಸಿ ಮಾಲರಾಮಪ್ಪ ,ಜೆಸಿ ಲಲಿತ ಗುರುಮೂರ್ತಿ, ಜೆಸಿ ಕರಿಬಸಮ್ಮ, ಜೆಸಿ ವಂದನಾ ದಿನೇಶ್ , ಜೆಸಿ ಪೂರ್ಣಿಮಾ ಸುನಿಲ್, ಜೆಸಿ ಸುಶೀಲಾ ಷಣ್ಮುಗಂ, ಜೆಸಿ ಮಂಜುಳಾ ರವಿ, ಜೆಸಿ ಯಶೋದಾ ನಾಗರಾಜ್, ಜೆ ಸಿ ಸುಜಾತಾ ಬಸವರಾಜ್, ನಿರೀಕ್ಷಾ ರಾಮಚಂದ್ರ, ಜೆಜೆಸಿ ಜನ್ಯ ರಂಗನಾಥ್ ಜೊತೆಗೋಡಿದ್ದರು.