ಶಿವಮೊಗ್ಗದ ಕುವೆಂಪು ನಗರ ಬಳಿಯ ಬಂಗಾರಪ್ಪ ಬಡಾವಣೆಯಲ್ಲಿ ನಡೆದಂತಹ ದೇವರ ವಿಗ್ರಹ ಧ್ವಂಸಗೊಳಿಸಿರುವ ಅಹಿತಕರ ಘಟನೆಯ ವಿಚಾರವಾಗಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ 2023ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಆ ಭಾಗದ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಹೆಚ್.ಸಿ ಯೋಗೇಶ್ ರವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಶಾಂತಿನಗರ ಪ್ರವೇಶಿಸುವಾಗ ನಾಗರಕಟ್ಟೆ ಹಾಗೂ ಗಣಪತಿಯ ದೇವಸ್ಥಾನವಿದ್ದು ಪ್ರತಿಯೊಬ್ಬರಿಗೂ ಆಶೀರ್ವದಿಸುವ ಮುಖಾಂತರ ಬಡಾವಣೆ ಪ್ರಾರಂಭವಾಗುತ್ತದೆ.ಹಾಗೂ ಆ ಭಾಗದಲ್ಲಿ ಮಸೀದಿ ಚರ್ಚ್ ಗಳು ಸಹ ಇದ್ದು ಎಲ್ಲಾ ರೀತಿಯ ಜನರು ವಾಸವಾಗಿರುವ ಬಡಾವಣೆಯಾಗಿದೆ.

ಈ ರೀತಿ ಮನೆಯ ಮುಂಭಾಗದಲ್ಲಿ ದೇವರ ವಿಗ್ರಹವನ್ನು ಧ್ವಂಸಗೊಳಿಸಿರುವುದು ಖಂಡನೀಯ ಹಿಂದೂ ಧರ್ಮದ ಪ್ರಕಾರ ಪ್ರತಿಯೊಂದು ಜೀವರಾಶಿಯಲ್ಲು ಸೂರ್ಯ ಚಂದ್ರ ಮರ ಗಾಳಿ ನೀರು ಎಲ್ಲದರಲ್ಲೂ ದೇವರನ್ನು ಕಾಣುವವರು. ನಾವುಗಳು ಹೀಗಿರುವಾಗ ಈ ರೀತಿಯ ಕೃತ್ಯ ಎಸಗಿದ ದುಷ್ಕರ್ಮಿಗಳಿಗೆ ಬುದ್ಧಿ ಪ್ರಮಣಿಯಾಗಿರುವುದು ಎದ್ದು ಕಾಣುತ್ತಿದೆ.

ಪೊಲೀಸ್ ಇಲಾಖೆಯವರು ಈಗಾಗಲೇ ಈ ಘಟನೆಗೆ ಸಂಬಂಧಿಸಿದ ಮೂವರನ್ನು ಬಂಧಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತಿದ್ದಾರೆ. ರಾಜಕೀಯವಾಗಿ ಕೆಎಸ್ ಈಶ್ವರಪ್ಪನವರಾಗಲಿ ಚನ್ನಬಸಪ್ಪನವರಾಗಲಿ ಹೇಳಿಕೆಗಳನ್ನು ನೀಡುವ ಮೊದಲು ಅನಧಿಕೃತ ಹಾಗೂ ಅಕ್ರಮ ಜಾಗಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ.

ಅನಧಿಕೃತವೇ ಬೇರೆ ಅಕ್ರಮವೇ ಬೇರೆ ಆಗಿರುವುದರಿಂದ ಅಕ್ರಮವಾಗಿ ಮನೆ ಕಟ್ಟಿರುವುದನ್ನು ಮಹಾನಗರ ಪಾಲಿಕೆಯವರು ಪರಿಶೀಲಿಸಿ ನೋಟಿಸ್ ನೀಡುವ ಮುಖಾಂತರ ಕ್ರಮ ಕೈಗೊಂಡಿರುತ್ತಾರೆ. ಅಕ್ರಮ ಎಂದು ಹೇಳುವ ಮುಖಾಂತರ ಚನ್ನಬಸಪ್ಪನವರು ಮಹಾನಗರ ಪಾಲಿಕೆ ಸದಸ್ಯರಾಗಿದ್ದ ಕಾಲದಲ್ಲಿ ಈ ಮನೆಗಳನ್ನು ತೆರವುಗೊಳಿಸಲು ಹೋಗಿದ್ದರು.

ಅಕ್ರಮವಾಗಿ ನಿರ್ಮಾಣಗೊಂಡಿರುವ ಮನೆಗಳಾಗಿದ್ದರು ಸಹ ಆ ಭಾಗದಲ್ಲಿ 25 ಮನೆಗಳಿಗೆ ಮಹಾನಗರ ಪಾಲಿಕೆ ವತಿಯಿಂದ ಮೂಲಭೂತ ಸೌಕರ್ಯಗಳನ್ನು ಸಹ ಒದಗಿಸಿರುತ್ತಾರೆ. ದೇವಸ್ಥಾನದ ನಿರ್ಮಾಣವನ್ನು ಸಹ ಆ ಭಾಗದ ನಿವಾಸಿಗಳೇ ಮಾಡಿದ್ದು. ವಿನಾಕಾರಣ ಮನೆಗಳ ವಿಚಾರವಾಗಿ ಬಾಯಿ ಬಡೆದುಕೊಳ್ಳುತ್ತಿರುವ ಈಶ್ವರಪ್ಪನವರು ಹಾಗೂ ಚನ್ನಬಸಪ್ಪನವರು 25 ಮನೆಗಳಲ್ಲಿ ವಾಸ ಮಾಡುತ್ತಿರುವ ನಿವಾಸಿಗಳಿಗೆ ತೊಂದರೆ ಕೊಡುತ್ತಿರುವುದು ಎದ್ದು ಕಾಣುತ್ತಿದೆ.

ಪ್ರಮುಖವಾಗಿ ಆ ಭಾಗದಲ್ಲಿನ 21 ಮನೆಗಳು ಹಿಂದೂಗಳದ್ದಾಗಿದ್ದು ನಾಲ್ಕು ಮನೆಗಳು ಮುಸಲ್ಮಾನರುದ್ದ ಆಗಿರುತ್ತದೆ.ಆದ್ದರಿಂದ ರಾಜಕೀಯ ಮಾಡದೆ ಜನರ ಒಳಿತನ್ನು ಗಮನಿಸಬೇಕೆಂದು ತಿಳಿ ಹೇಳಿದರು. ರಾಗಿಗುಡ್ಡ ಭಾಗದಲ್ಲಿ ಈಗಾಗಲೇ 14 ಗಣಪತಿಗಳನ್ನು ಪ್ರತಿ ವರ್ಷ ಪ್ರತಿಷ್ಠಾಪಿಸುತ್ತಾ ಬಂದಿದ್ದು, ಇದೇ ಗಣಪತಿ ಹಬ್ಬದಂದು ಬಂಗಾರಪ್ಪ ಬಡಾವಣೆಯಲ್ಲೂ ಸಹ ಗಣಪತಿಯ ಪ್ರತಿಷ್ಠಾಪನೆಯನ್ನು ಮಾಡುವ ಮುಖಾಂತರ ಒಟ್ಟು ರಾಗಿ ಗುಡ್ಡ ಭಾಗದಲ್ಲಿ 15 ಗಣಪತಿಗಳನ್ನು ಪ್ರತಿಷ್ಠಾಪಿಸಿ, ಪ್ರತಿ ವರ್ಷದಂತೆ ಒಟ್ಟಿಗೆ ಹದಿನೈದು ಗಣಪತಿಗಳ ವಿಜೃಂಭಣೆಯ ವಿಸರ್ಜನೆಯನ್ನು ನೆರವೇರಿಸುವ ಭರವಸೆಯನ್ನು ಹೆಚ್ ಸಿ ಯೋಗೇಶ್ ರವರು ಹಾಗೂ ಆ ಭಾಗದ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಧೀರಜ್ ಹೊನ್ನವಿಲೆ ರವರು ವಹಿಸಿಕೊಂಡಿರುತ್ತಾರೆ.

ಈ ಸಂದರ್ಭದಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ವಿಶ್ವನಾಥ್ ಕಾಶಿ ರವರು, ಕಾಂಗ್ರೆಸ್ ಮುಖಂಡರಾದ ಜಿ ಮಧುಸೂದನ್ ರವರು, ನವಲೆ ಚೇತನ್ ರವರು, ಅನಿಲ್ ಪಾಟೀಲ್ ರವರು, ನಾಲ್ಕನೇ ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ಎಂ ಮಹಾದೇವ ರವರು, ಮೂರನೇ ವಾರ್ಡ್ ಅಧ್ಯಕ್ಷರಾದ ಇರ್ಫಾನ್ ಖಾನ್, ಮುಖಂಡರಾದ ಪವನ್,ಮುಕ್ತಿಯಾರ್, ಬಸವರಾಜ್, ಕಾಲ ಮಿರ್ಚಿ, ರಹಮತ್ , ಶ್ರೀನಿವಾಸ್, ಸದ್ದಾಂ, ಪ್ರಸಾದ್, ಹಾಗೂ ಬಂಗಾರಪ್ಪ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.