ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಜಿಲ್ಲಾಧಿಕಾರಿಗಳ ಮುಂದೆ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗೆ ಮನವಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಮುರಳಿರವರು ಮೆಗ್ಗಾನ್ ಆಸ್ಪತ್ರಯಲ್ಲಿ ಸುಮಾರು ವರ್ಷಗಳಿಂದ ರೋಗಿಗಳ ಅನುಕೂಲಕ್ಕಾಗಿ ಔಷಧಿ ಕೊಡುವ ಸಮಯವನ್ನು ಬೆಳಗ್ಗೆ 9ರಿಂದ ಮಧ್ಯಾಹ್ನ ಒಂದರವರೆಗೆ ನಂತರ 2ರಿಂದ 4 ಗಂಟೆಯವರೆಗೆ ನೀಡಲಾಗುತ್ತಿತ್ತು.
ಇದರಿಂದ ಜಿಲ್ಲೆಯ ಬೇರೆ ಊರಿನಿಂದ ಬರುವ ರೋಗಿಗಳಿಗೆ ಸಾಕಷ್ಟು ಅನುಕೂಲಗಳು ಆಗುತ್ತಿತ್ತು. ಈಗ ಕೆಲವು ತಿಂಗಳ ಹಿಂದೆ ಮಧ್ಯಾಹ್ನದ ಔಷಧಿ ಕೊಡುವ ಸಮಯವನ್ನು ನಿಲ್ಲಿಸಿದ್ದಾರೆ. ಜಿಲ್ಲೆಯ ನಾನಾ ಕಡೆಯಿಂದ ಬರುವ ರೋಗಿಗಳಿಗೆ ತೊಂದರೆಯಾಗುತ್ತಿದೆ.
ಆದರಿಂದ ಈ ಮುಂಚೆ ಮಧ್ಯಾಹ್ನ ಮೇಲೆ ಔಷಧಿ ವಿತರಣವನ್ನು ಮಾಡುತ್ತಿದ್ದರು ಅದೇ ರೀತಿ ಇನ್ನು ಮುಂದೆ ಸಹ ಮುಂದೆವರಿಸಬೇಕು ಎಂದು ಪ್ರತಿಭಟನೆ ನಡೆಸಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಅನಿಲ್ ಹರೀಶ್ ಮುರುಗ ಸುಜಿತ್ ಅಮಿತ್ ಮುಂತಾದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರಿದ್ದರು.