ಮಹಾನಗರ ಪಾಲಿಕೆ ನೌಕರರ ಪ್ರತಿಭಟನೆ ಮೂರನೆ ದಿನಕ್ಕೆ ಕಾಲಿಟ್ಟಿದೆ. ಈ ಪ್ರತಿಭಟನಾ ಸ್ಥಳಕ್ಕೆ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪನವರು ಭೇಟಿ ನೀಡಿ ಪ್ರತಿಭಟನೆಗೆ ಬೆಂಬಲ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಿಮ್ಮ ಎಲ್ಲ ಬೇಡಿಕೆಗಳು ನ್ಯಾಯಯುತವಾಗಿದೂ. ನಿಮ್ಮ ಬೆಂಬಲಕ್ಕೆ ನಾನಿರುತ್ತೇನೆ ಎಂದರು.ನಗರಾಭಿವೃದ್ಧಿ ಸಚಿವರಾದಂತಹ ಬೈರತಿ ಸುರೇಶ್ ರವರೊಂದಿಗೆ ಕರೆ ಮಾಡಿ ಪಾಲಿಕೆ ನೌಕರರ ಸಮಸ್ಯೆಯನ್ನು ಸಭೆ ಕರೆದು ಮಾತನಾಡಿ ಎಂದು ಸಚಿವರಿಗೆ ಮನವಿ ಮಾಡಿದರು.
ಹಾಗೆ ನಗರಾಭಿವೃದ್ಧಿ ಮುಖ್ಯ ಕಾರ್ಯದರ್ಶಿಗಳು ಆದಂತಹ ಶ್ರೀಮತಿ ದೀಪ ಚೋಳನ್ ಅವರ ಜೊತೆನೆ ಮಾತುಕತೆ ನಡೆಸಿ ಸಂಘದ ಪದಾಧಿಕಾರಿಗಳನ್ನು ಮಾತುಕತೆಗೆ ಆಹ್ವಾನಿಸುವ ಬಗ್ಗೆ ವಿಷಯ ಪ್ರಸ್ತಾಪಿಸಿದರು.
ಈ ಸಂದರ್ಭದಲ್ಲಿ ಕೆ.ಈ.ಕಾಂತೇಶ್, ಸುವರ್ಣ ಶಂಕರ್, ಈ.ವಿಶ್ವಾಸ್, ಮೋಹನ್ ಜಾಥವ್, ಬಾಲು,ಶಂಕರ್ ನಾಯ್ಕ,ಶ್ರೀಕಾಂತ,ಅ.ಮಾ.ಪ್ರಕಾಶ್,ರಾಜು,ಶಿವಾಜಿ, ಚನ್ನಬಸಪ್ಪ ಮುಂತಾದವರು ಉಪಸ್ಥಿರಿದ್ದರು.