ಸಾಗರ ಬಂಟರ ಸಂಘದ ಕಟ್ಟಡಕ್ಕೆ, ಹಲವಾರು ಸಂಘ ಸಂಸ್ಥೆಗಳಲ್ಲಿ ಪ್ರಸಿದ್ದರಾಗಿರುವ, ವಾಗ್ಮಿ, ಅತ್ಯುತ್ತಮ ಸಂಘಟಕ,ವಿಜ್ಞಾನಿ, ಪ್ರೊಫೆಸರ್ ಶಿವಮೊಗ್ಗ ಬಂಟರ ಸಂಘದ ಅಧ್ಯಕ್ಷರಾದ ಡಾ. ಸತೀಶ್ ಕುಮಾರ್ ಶೆಟ್ಟಿ ನೇತೃತ್ವದ ನಿಯೋಗ ಭೇಟಿ ನೀಡಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರಮುಖ ಹಾಗೂ ಪ್ರಭಾವಿ ಬಂಟ ರಾಜಕೀಯ ನಾಯಕ ಸಂಘಟಕ ದಿವಾಕರ್ ಶೆಟ್ಟಿ, ಹಲವಾರು ಸಂಘ ಸಂಸ್ಥೆಯ ಅನುಭವಿ ಪ್ರಖ್ಯಾತ ಉದ್ಯಮಿ ದಾನಿ ಪಿಂಗಾರ ರಾಜಮೋಹನ್ ಹೆಗ್ಡೆ,ಸಂಘಟಕ ಅಪರೂಪದ ವ್ಯಕ್ತಿತ್ವ ಹೊಂದಿರುವ ದಾನಿ ಶೆಟ್ಟಿ ಮೆಡಿಕಲ್ ಅರುಣ್ ಶೆಟ್ಟಿ, ಯುವನಾಯಕ ಸಂಘಟಕ ರಾಘವೇಂದ್ರ ಶೆಟ್ಟಿ ಪ್ರಜಾಶಕ್ತಿ ಪತ್ರಿಕೆಯ ಮುಖ್ಯಸ್ಥರಾದ ಮಂಜುನಾಥ್ ಶೆಟ್ಟಿ ಆಗಮಿಸಿ ಆಗುತ್ತಿರುವ ಕೆಲಸಕ್ಕೆ ಶಕ್ತಿ ತುಂಬಿದರು.
ಇವರೆಲ್ಲರನ್ನು ಸಾಗರ ಬಂಟರ ಸಂಘದ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಹಕ್ಲಾಡಿ ಹಾಗೂ ತಾಲ್ಲೂಕಿನ ಬಂಟ ಮುಖಂಡರು ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಮೊಗ್ಗ ಬಂಟರ ಸಂಘದ ಅಧ್ಯಕ್ಷರಾದ ಡಾ. ಸತೀಶ್ ಕುಮಾರ್ ಶೆಟ್ಟಿ ಅವರು ಬಂಟ ಸಮುದಾಯದ ಏಳಿಗೆಗಾಗಿ ಶಿವಮೊಗ್ಗ ಬಂಟರ ಸಂಘ ಯಾವಾಗಲೂ ಸಮರೋಪಾದಿಯಲ್ಲಿ ಕೆಲಸ ಮಾಡಲು ಸಿದ್ಧರಿರುತ್ತದೆ ಎಂದರು.ಈಗಾಗಲೇ ನಿರ್ಮಾಣಗೊಂಡಿರುವ ಶಿವಮೊಗ್ಗ ಬಂಟರ ಭವನ ಶಿವಮೊಗ್ಗ ಬಂಟರ ಪ್ರೀತಿಯ ದ್ಯೋತಕವಾಗಿ ರಾಜ್ಯದಲ್ಲಿ ಶಿವಮೊಗ್ಗವನ್ನು ಪ್ರತಿನಿಧಿಸುತ್ತಿದೆ ಎಂದು ಸಂದರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಬಂಟರ ಭವನಕ್ಕಾಗಿ ದುಡಿದ ಹಲವಾರು ಹಿರಿಯರು, ಯುವಕರು, ದಾನಿಗಳು, ರಾಜಕೀಯ ಮುಖಂಡರು ಗಳ ಸೇವೆಯನ್ನು ಸಮಯದಲ್ಲಿ ಸ್ಮರಿಸಿದರು.ಮುಂದಿನ ದಿನಗಳಲ್ಲಿ ಹಲವಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಹಾಗೂ ಹಲವಾರು ಬಡ ಬಂಟ ಕುಟುಂಬಗಳ ಅಭಿವೃದ್ಧಿಗಾಗಿ ಶಿವಮೊಗ್ಗ ಬಂಟರ ಸಂಘ ಕೆಲಸ ಮಾಡಲಿದೆ ಎಂದರು.
ಈ ಸಮಯದಲ್ಲಿ ನಿರ್ದೇಶಕರಾದ ದಿವಾಕರ್ ಶೆಟ್ಟಿ ಮಾತನಾಡಿ ಸಾಗರದಲ್ಲಿ ನಿರ್ಮಾಣವಾಗುತ್ತಿರುವ ಸಾಗರ ಬಂಟರ ಭವನಕ್ಕೆ ಶಿವಮೊಗ್ಗ ಬಂಟರು ಜೊತೆಯಾಗಿ ನಿಮ್ಮ ಕೆಲಸಕ್ಕೆ ಪ್ರೇರಣೆಯಾಗಿ ನಾವು ನಿಂತುಕೊಳ್ಳುತ್ತೇವೆ ಹಾಗೂ ನಿಮಗೆ ಮಾರ್ಗದರ್ಶನವನ್ನು ನೀಡುವುದರ ಜೊತೆಗೆ 3 ಲಕ್ಷ ರೂಪಾಯಿಗಳ ದೇಣಿಗೆಯನ್ನು ಶಿವಮೊಗ್ಗ ಬಂಟರ ಸಂಘದ ವತಿಯಿಂದ ನೀಡುತ್ತಿದ್ದೇವೆ ಎಂದು ಘೋಷಿಸಿ 3 ಲಕ್ಷ ರೂಪಾಯಿಗಳನ್ನು ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಗರ ಬಂಟರ ಸಂಘದ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಹಕ್ಲಾಡಿ ಶಿವಮೊಗ್ಗ ಬಂಟರ ಸಂಘ ನೀಡಿದ ಮೂರು ಲಕ್ಷ ರೂಪಾಯಿ ನಮಗೆ ಇನ್ನೂ ಬಲಶಾಲಿಯನ್ನಗಿಸಿದೆ.ಶಿವಮೊಗ್ಗ ಬಂಟರ ಉದಾರ ಗುಣವನ್ನು ಕೊಂಡಾಡಿದರು.ಸಾಗರ ಬಂಟರ ಸಂಘದ ವತಿಯಿಂದ ಅಧ್ಯಕ್ಷರು ಹಾಗೂ ಸರ್ವರಿಗೆ ಧನ್ಯವಾದಗಳನ್ನು ತಿಳಿಸಿದರು.ಸಾಗರ ಬಂಟರ ಸಂಘ ಕ್ಕೆ 43 ವರ್ಷಗಳ ಇತಿಹಾಸ ಇದೆ.ಈಗ ಸಾಗರ ಬಂಟರ ಸಂಘದ ಕಟ್ಟಡ ಶೇಕಡ 90ರಷ್ಟು ಮುಗಿದಿದ್ದು,ನವೆಂಬರ್ ಅಂತ್ಯ ದಲ್ಲಿ ಉದ್ಘಾಟನೆಯ ಹಂತದಲ್ಲಿದೆ ಎಂದರು.
ಯಶಸ್ವೀಯಾಗಿ ಶಿವಮೊಗ್ಗ ಬಂಟರ ಸಂಘದ ಕಟ್ಟಡ ನಿರ್ಮಾಣ ಮಾಡಿರುವ ಇಂಜಿನಿಯರ್ ಆದ ಹೆಗ್ಗೋಡು ಉಲ್ಲಾಸ ಸುರೇಶ್ ಹೆಗ್ಡೆ ಅವರು ಸಾಗರದ ಬಂಟರ ಭವನವನ್ನು ಕೂಡ ನಿರ್ಮಾಣ ಮಾಡುತ್ತಿದ್ದು ಅತ್ಯುತ್ತಮ ಕೆಲಸ ನಡೆಯುತ್ತಿದೆ ಎಂದರು. ಹಾಗೆಯೇ ಕಟ್ಟಡಕ್ಕಾಗಿ ದೇಣಿಗೆ ನೀಡಿದ ದಾನಿಗಳ ಹಾಗೂ ಹಿರಿಯರ ಹೆಸರನ್ನು ನೆನಪಿಸಿಕೊಂಡರು ಡಾ. ಪ್ರಕಾಶ್ ಶೆಟ್ಟಿ ಅವರ ದೇಣಿಗೆ, ಸಹಕಾರ, ಮಾರ್ಗದರ್ಶನವನ್ನು ಸ್ಮರಿಸಿದರು.ಎಲ್ಲರಿಗೂ ಸಾಗರ ಬಂಟರ ಸಂಘದ ವತಿಯಿಂದ ಮಾಲಾರ್ಪಣೆ ಮಾಡಲಾಯಿತು..
ಈ ಸಂದರ್ಭದಲ್ಲಿ ಸಾಗರ ಬಂಟರ ಸಂಘದ ಗೌರವಾಧ್ಯಕ್ಷರಾದ ಟಿ. ಬಿ ಮಂಜುನಾಥ ಶೆಟ್ಟಿ, ಮಾಜಿ ಅಧ್ಯಕ್ಷರಾದ ಟಿ. ಗೋಪಾಲ್ ಶೆಟ್ಟಿ,ಉಪಾಧ್ಯಕ್ಷರಾದ ರಘುಪತಿ ಶೆಟ್ಟಿ, ಕಾರ್ಯದರ್ಶಿಗಳಾದ ಪ್ರಕಾಶ್ ಶೆಟ್ಟಿ, ರಮೇಶ್ ಹೆಗ್ಡೆ, ಖಜಾಂಚಿಗಳಾದ ಅಣ್ಣಪ್ಪ ಶೆಟ್ಟಿ, ನಿರ್ದೇಶಕರುಗಳಾದ ಸತ್ಯನಾರಾಯಣ ಶೆಟ್ಟಿ, ಸದಾನಂದ ಶೆಟ್ಟಿ, ಶ್ರೀಧರ ಶೆಟ್ಟಿ, ಪ್ರತಾಪ್ ಶೆಟ್ಟಿ, ಮಹೇಂದ್ರ ಶೆಟ್ಟಿ,ಶ್ರೀನಿವಾಸ್ ಶೆಟ್ಟಿ, ಪ್ರಭಾಕರ್ ಶೆಟ್ಟಿ ಕಂಟ್ರಾಕ್ಟರ್,ಸತೀಶ್ ಶೆಟ್ಟಿ,ಸುರೇಶ್ ಶೆಟ್ಟಿ ನಿಸ್ರಾಣಿ, ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು.