ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ 2023 ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಹೆಚ್ ಸಿ ಯೋಗೇಶ್ ಅವರು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿದರು. ಶಿವಮೊಗ್ಗ ನಗರದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಈಗಾಗಲೇ ಅನೇಕ ಭಾಗಗಳಲ್ಲಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಾಣ ಮಾಡಿರುತ್ತೀರಿ ಆದರೆ ಇದುವರೆಗೂ ಯಾವುದೇ ರೀತಿಯಲ್ಲಿ ಕಟ್ಟಡಗಳನ್ನು ಹರಾಜು ಪ್ರಕ್ರಿಯೆ ನಡೆಸುವ ಮುಖಾಂತರ ಬಾಡಿಗೆಗೆ ನೀಡಿ ಮನವಿ ಮಾಡಿದರು.
- ಗಾರ್ಡನ್ ಏರಿಯಾದಲ್ಲಿ ನಿರ್ಮಾಣವಾಗಿರುವ ವಾಣಿಜ್ಯ ಕಟ್ಟಡವು ಉದ್ಘಾಟನೆಯಾಗಿದ್ದರೂ ಸಹ ಪಾಳು ಬಿದ್ದಿದ್ದು ಕೂಡಲೆ ವ್ಯಾಪಾರಸ್ಥರಿಗೆ ಹರಾಜು ಪ್ರಕ್ರಿಯೆ ನಡೆಸುವ ಮುಖಾಂತರ ಬಾಡಿಗೆಗೆ ನೀಡುವುದರಿಂದ ವ್ಯಾಪಾರಸ್ಥರಿಗೂ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ.
- ಶಿವಮೊಗ್ಗ ಗಾಂಧಿನಗರ ಭಾಗದಲ್ಲಿ ನಿರ್ಮಾಣವಾಗಿರುವ ಮಹಾನಗರ ಪಾಲಿಕೆಯ ವಾಣಿಜ್ಯ ಕಟ್ಟಡವು ಸಹ ಈಗಾಗಲೇ ಉದ್ಘಾಟನೆಯಾಗಿದ್ದರು ಯಾವುದೇ ರೀತಿಯ ವ್ಯಾಪಾರಸ್ಥರಿಗೆ ಹರಾಜು ಪ್ರಕ್ರಿಯೆ ನಡೆಸುವ ಮುಖಾಂತರ ಬಾಡಿಗೆಗೆ ನೀಡಿರುವುದಿಲ್ಲ, ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ವ್ಯಾಪಾರಸ್ಥರನ್ನು ಗಮನದಲ್ಲಿಟ್ಟುಕೊಂಡು ಕೂಡಲೇ ಮಳಿಗೆಗಳನ್ನು ಬಾಡಿಗೆಗೆ ನೀಡುವುದರಿಂದ ಅನುಕೂಲವಾಗುತ್ತದೆ.
- ಶಿವಪ್ಪ ನಾಯಕ ವೃತ್ತ ಬಳಿ ನಿರ್ಮಾಣವಾಗಿರುವ ಬಹು ಮಹಡಿ ವಾಹನ ನಿಲುಗಡೆ ಕಟ್ಟಡವು ಸಹ ಈಗಾಗಲೇ ಉದ್ಘಾಟನೆಯಾಗಿದ್ದು ಪಾಳು ಬಿದ್ದಿರುತ್ತದೆ, ಮಹಾನಗರ ಪಾಲಿಕೆಯವರು ಕೂಡಲೇ ಸೂಕ್ತ ಕ್ರಮ ಕೈಗೊಂಡು ಪೋಲಿಸ್ ಇಲಾಖೆಯವರ ಸಹಾಯದಿಂದ ವಾಹನಗಳನ್ನು ಪಾರ್ಕಿಂಗ್ ಮಾಡಲು ಅನುಕೂಲ ಮಾಡಿದ್ದಲ್ಲಿ ಆ ಭಾಗದಲ್ಲಿ ವಾಹನ ಸಂಚಾರಕ್ಕೆ ಸೂಕ್ತ ಜಾಗ ಸಿಗುವುದಲ್ಲದೆ ಅನೇಕ ಅಪಘಾತಗಳು ಸಹ ತಡೆಯಬಹುದು.
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಅನೇಕ ವಾಣಿಜ್ಯ ಮಳಿಗೆಗಳು ಬಾಡಿಗೆಗೆ ನೀಡುವುದರಿಂದ ಮಹಾನಗರ ಪಾಲಿಕೆಗೆ ಹಾಗೂ ಸರ್ಕಾರಕ್ಕೂ ಸಹ ಆದಾಯವಾಗುವುದರ ಜೊತೆಗೆ ಸಾರ್ವಜನಿಕರಿಗೂ ವ್ಯಾಪಾರಸ್ಥರಿಗೂ ಬಹಳಷ್ಟು ಅನುಕೂಲವಾಗುತ್ತದೆ ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ತಾವುಗಳು ಕೂಡಲೇ ಮಹಾನಗರ ಪಾಲಿಕೆ ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ನೀಡುವ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಆಯುಕ್ತರಿಗೆ ಮನವಿ ನೀಡಿದರು.ಈ ಸಂದರ್ಭದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಎಸ್ ಶಿವಕುಮಾರ್ ಅವರು, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಮ್ ಪಾಷಾ ರವರು, ಮಹಾನಗರ ಪಾಲಿಕೆ ಮಾಜಿ ಮಹಾಪೌರರಾದ ನಾಗರಾಜ್ ಕಂಕಾರಿ ರವರು, ಮಹಾನಗರ ಪಾಲಿಕೆ ಮಾಜಿ ಉಪಮಹ ಪೌರರಾದ ಹೆಚ್ ಪಾಲಾಕ್ಷಿ ರವರು, ಮಹಾನಗರ ಪಾಲಿಕೆ ಮಾಜಿ ವಿರೋಧ ಪಕ್ಷದ ನಾಯಕರಾದ ಯಮುನಾ ರಂಗೇಗೌಡ ರವರು, ಮಹಾನಗರ ಪಾಲಿಕೆ ಮಾಜಿ ಸದಸ್ಯರುಗಳಾದ ವಿಶ್ವನಾಥ್ ಕಾಶಿ ರವರು, ಶಾಮೀರ್ ಖಾನ್ ರವರು, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಕೆ ರಂಗನಾಥ್ ರವರು, ಚಿನ್ನಪ್ಪ ರವರು, ರಂಗೇಗೌಡರವರು, ಚೇತನ್ ರವರು, ನವೀನ್ ರವರು ಗ್ಯಾರಂಟಿ ಸಮಿತಿ ಸದಸ್ಯರಾದ ಎಸ್ ಬಸವರಾಜ್ ರವರು ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು.