ತೀರ್ಥಹಳ್ಳಿ ತಾಲ್ಲೂಕಿನ 93 ವರ್ಷ ತುಂಬಿದ ಪಟ್ಲು ಮನೆ ಶ್ರೀ ವೆಂಕಟಚಲ ಭಟ್ ಇವರಿಗೆ ಶಿವಮೊಗ್ಗ ಜಿಲ್ಲಾ ಬಬ್ಬೂರು ಕಮ್ಮಿ ಸಂಘದ ವತಿಯಿಂದ ಅವರ ಮನೆಯಲ್ಲಿ ಸನ್ಮಾನಿಸಲಾಯಿತು.

ತೀರ್ಥಹಳ್ಳಿ ತಾಲೂಕಿನ ಪಟ್ಲು ಮನೆಯಲ್ಲಿ ಜಿಲ್ಲಾ ಬಬ್ಬೂರು ಕಮ್ಮಿ ಸಂಘದ ವತಿಯಿಂದ ಸ್ನೇಹ ಮಿಲನ ಕಾರ್ಯಕ್ರಮವನ್ನು ಪಟ್ಲು ಮನೆಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ವೇ. ಬ್ರ. ಶ್ರೀ ಕಾರ್ ಕೊಡಲು ಗುರುಮೂರ್ತಿ ಇವರ ವಹಿಸಿದ್ದರು.ತೀರ್ಥಹಳ್ಳಿಯಲ್ಲಿ ಸಂಘ ಬಲಗೊಳ್ಳಬೇಕು ಅದಕ್ಕಾಗಿ ಎಲ್ಲರೂ ಶ್ರಮಿಸಬೇಕು ಎಂದು ಕರೆಕೊಟ್ಟರು.

ಕಾರ್ಯದರ್ಶಿಗಳದ ನಾಗೇಶ್ ನಿರ್ದೇಶಕರುಗಳಾದ ಸತ್ಯನ್, ಶೇಷ ಗಿರೀ ಶರ್ಮ ಹಾಗೂ ವೆಂಕಟಚಲ ಭಟ್ಟರು ವೇದಿಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ. ವಿದ್ಯಶಂಕರ್ ನಿರೂಪಿಸಿದರು.ವಿಶ್ವವಂದ್ಯ ವೇದ ಘೋಷ ನಡೆಸಿಕೊಟ್ಟರು.ಶ್ರೀರಂಗ ದರ್ಶನ ಪ್ರಾರ್ಥಿಸಿದರು.ಶ್ರೀ ದಿನೇಶ್ ಎಲ್ಲರನ್ನು ಸ್ವಾಗತಿಸಿದರು.ಕುಮಾರಿ ವೈಷ್ಣವಿ ವಂದಿಸಿದರು.

ಶಿವಮೊಗ್ಗ ಜಿಲ್ಲಾ ನಿರ್ದೇಶಕರುಗಳು ಮತ್ತು ಭದ್ರಾವತಿ ಸಂಘದ ಸದಸ್ಯರು, ತೀರ್ಥಳ್ಳಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.ವೆಂಕಟಾಚಲ ಭಟ್ಟರ ಮಕ್ಕಳಾದ ಶ್ರೀ ಉಮೇಶ್ ಮತ್ತು ಪ್ರಕಾಶ್ ದಂಪತಿಗಳು ಮತ್ತು ಮೊಮ್ಮಕ್ಕಳು ಎಲ್ಲರಿಗೂ ಆತಿಥ್ಯ ವನ್ನು ತುಂಬು ಹೃದಯದಿಂದ ನೀಡಿ ಗೌರವಿಸಿದರು.