ಜಯ ಕರ್ನಾಟಕ ಜನಪರ ವೇದಿಕೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ರಘುವೀರ್ ಸಿಂಗ್ ರವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ಕೀಲು ಮತ್ತು ಮೂಳೆ ವೈದ್ಯರು ಇಲ್ಲದ ಕಾರಣ ರೋಗಿಗಳಿಗೆ ತುಂಬಾ ಅನಾನುಕೂಲವಾಗಿದ್ದು.

ತಾಲೂಕಿನ ಎಲ್ಲಾ ಕಡೆಯಿಂದ ಬರುವ ರೋಗಿಗಳಿಗೆ ತುಂಬಾ ತೊಂದರೆ ಆಗಿದೆ. ರೋಗಿಗಳಿಗೆ ಯಾವುದೇ ಪ್ರೀತಿಯ ಮೂಳೆ ಮತ್ತು ಕೀಲು ಸಂಬಂಧ ಪಟ್ಟ ಕಾಯಿಲೆಗಳಿಗೆ ಜಿಲ್ಲಾ ಕೇಂದ್ರ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಬೇಕು.ಇದರಿಂದ ಸಾಕಷ್ಟು ತೊಂದರೆ ಆಗಿದೆ.ಆದಷ್ಟು ಬೇಗ ಸಂಬಂಧಪಟ್ಟ ಮುಖ್ಯಸ್ಥರು ವೈದ್ಯರನ್ನು ನೇಮಿಸಿ, ಬಗೆಹರಿಸಬೇಕು ಎಂದು ಮನವಿ ಮಾಡಿದರು.


ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ, ಹುಲಿಗಿ ಕೃಷ್ಣ ಶಿಕಾರಿಪುರ ತಾಲೂಕ ಅಧ್ಯಕ್ಷ ಶಿವಯ್ಯ ಶಾಸ್ತ್ರಿ ಮುಖಂಡರಾದ ಮಂಜುನಾಥ್ ವಿನೋದ್ ಮಾಲತೇಶ್ ಅಕ್ಬರ್ ಅಲಿ ಮಧು ಸೈಯದ್ ಅಲಿ ಸುನಿಲ್ ಸುಮಾ ಅನುರಾಧ ಸುಧೀರ್ ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.