ರಾಜ್ಯ ಸರ್ಕಾರದ ಐದನೇಯ ಗ್ಯಾರಂಟಿ ಯೋಜನೆಯಾದ ಯುವನಿಧಿ -2025ರ ಯೋಜನೆಯ ನೋಂದಣಿ ಅಭಿಯಾನ ಆರಂಭವಾಗಿದ್ದು, 2023, 2024 ಮತ್ತು 2025ರಲ್ಲಿ ಯಾವುದೇ ಪದವಿ/ಸ್ನಾತಕೋತ್ತರ ಪದವಿ/ಡಿಪ್ಲೋಮಾ ಉತ್ತೀರ್ಣ ಅಭ್ಯರ್ಥಿಗಳು ಫಲಿತಾಂಶ ಪ್ರಕಟವಾದ 180 ದಿನಗಳ ನಂತರವೂ ಸಾರ್ವಜನಿಕ/ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಸಿಗದವರು ಹಾಗೂ ಸ್ವಯಂ ಉದ್ಯೋಗ ಮಾಡದವರು, ಉನ್ನತ ವ್ಯಾಸಂಗ ಮುಂದುವರೆಸದೇ ಇರುವವರು ನೋಂದಣಿ ಮಾಡಿಕೊಳ್ಳುವುದು.
ಮಾಹೆಯಾನ ನಿರುದ್ಯೋಗ ಭತ್ಯೆ ಪದವೀಧರರಿಗೆ ರೂ. 3000/- ಮತ್ತು ಡಿಪ್ಲೋಮಾ ಪದವೀದರರಿಗೆ ರೂ. 1500/- ಗಳನ್ನು ಖಾತೆಗೆ ನೇರ ನಗದು ಮೂಲಕ ನೀಡಲಾಗುವುದು.
ಆರ್ಹ ಯುವಜನರು ಸೇವಾ ಸಿಂಧು ಪೋರ್ಟಲ್ ಅಥವಾ ಹತ್ತಿರದ ಗ್ರಾಮ ಒನ್, ಶಿವಮೊಗ್ಗ ಒನ್ ಕೇಂದ್ರಗಳಲ್ಲಿ ಆಗಸ್ಟ್ 07 ರೊಳಗಾಗಿ ನೋಂದಾಯಿಸಿಕೊಳ್ಳುವAತೆ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.