ಕೇಂದ್ರ ಸರ್ಕಾರದ ಮೂಲಭೂತ ಅನುದಾನ 15 ನೇ ಹಣಕಾಸು ಆಯೋಗದ 2024-25 ನೇ ಸಾಲಿನ ಅನುದಾನ ಬಿಡುಗಡೆಗೊಂಡಿದ್ದರೂ ಇಲ್ಲಿಯವರೆಗೂ ರಾಜ್ಯ ಸರ್ಕಾರವು ಸದರಿ 15 ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಗೊಳಿಸುವಲ್ಲಿ ತಡವರಿಸುತ್ತಿದೆ.
ಅದರಂತೆ ಕರ್ನಾಟಕ ರಾಜ್ಯ 6500 ಕ್ಕೂ ಹೆಚ್ಚಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಲಭೂತ ಅಭಿವೃದ್ಧಿ ಕೆಲಸಗಳಾದ ಕೃಷಿ ತೋಟಗಾರಿಕೆ, ರೇಷ್ಮೇ ಬೆಳೆಗಳ ಉತ್ಪಾದನೆ ಹೆಚ್ಚಳ ಮಾಡಲು, ಬಡತನ ನಿರ್ಮೂಲನ ಕಾರ್ಯಕ್ರಮ ಅನುಷ್ಟಾನ, ಪ್ರಾಥಮಿಕ ಪ್ರೌಢ ಶಿಕ್ಷಣಕ್ಕೆ ಸಂಬಂಧಿಸಿದ ಮೂಲ ಸೌಕರ್ಯ ಅಭಿವೃದ್ಧಿ, ಆರೋಗ್ಯ ಇಲಾಖೆ, ಮೂಲಭೂತ ಸೌಕರ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಅನುದಾನ ವಿನಿಯೋಗಿಸುವ ಸಲುವಾಗಿ ಬಿಡುಗಡೆ ಮಾಡಲಾಗುವುದು.
ಆದರೆ ರಾಜ್ಯ ಸರ್ಕಾರದ ಅಧಿಕಾರಿಗಳ ನಿರ್ಲಕ್ಷದಿಂದ ಸದರಿ ಮೂಲ ಅನುದಾನ ಅನಿರ್ಬಂಧಿತ (Untied Fund) ಶೇಕಡ 40ರಷ್ಟು ಹಂಚಿಕೆಯನ್ನು ಉದಾಸೀನತೆಯಿಂದ ನಿರ್ಬಂಧಿತ ಅನುದಾನ (Tied Fund) ಹಂಚಿಕೆಯಲ್ಲಿ ಬದಲುಗೊಳಿಸಿ, ಹಂಚಿಕೆ ಮಾಡಿ, ಅನಿರ್ಬಂಧಿತ (Untied Fund) ಶೇಕಡ 40ರಷ್ಟು ಹಂಚಿಕೆ ಹಣದಿಂದ ಆಗಬೇಕಾಗಿರುವ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಕೆಲಸಗಳನ್ನು ಸ್ಥಗಿತಗೊಳಿಸಿ, ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮವಹಿಸದೇ ಇರುವುದು ಶೋಚನೀಯ ಸಂಗತಿಯಾಗಿರುತ್ತದೆ.
ಆದ್ದರಿಂದ ಈ ಅನುದಾನ ಹಂಚಿಕೆಯಲ್ಲಿ ಮಾಡಿರುವ ಉದಾಸೀನತೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೋಂಡು ಆಗಿರುವ ಲೋಪವನ್ನು ಕೂಡಲೇ ಸರಿಪಡಿಸಿ, ರಾಜ್ಯಾದ್ಯಂತ 6500 ಕ್ಕೂ ಹೆಚ್ಚಿನ ಪಂಚಾಯಿತಿಗಳಿಗೆ ಒದಗಬೇಕಾದ ಮೂಲ ಅನುದಾನ ಅನಿರ್ಬಂಧಿತ (Untied Fund) ಶೇಕಡ 40ರಷ್ಟು ಹಂಚಿಕೆಯನ್ನು ಅನುದಾನವನ್ನು ಬಿಡುಗಡೆಗೊಳಿಸಿ , ಆದೇಶಿಸುವಂತೆ ರಾಜ್ಯ ಸರ್ಕಾರವನ್ನು
ಸನ್ಮಾನ್ಯ ವಿಧಾನ ಪರಿಷತ್ತಿನ ಶಾಸಕರು, ರಾಜ್ಯ ಭಾಜಪ ಕಾರ್ಯದರ್ಶಿಗಳು
ಶ್ರೀ ಡಿ.ಎಸ್ ಅರುಣ್ ರವರು ಆಗ್ರಹಿಸಿದರು.