17 ರಿಂದ 22 ಜುಲೈ 2025 ರವರಿಗೆ, ಕರ್ನಾಟಕ ರಾಜ್ಯ ಟೇಕ್ವಾಂಡೋ ಅಕಾಡೆಮಿ ವತಿಯಿಂದ ಬೆಂಗಳೂರಿನ ಕೋರಮಂಗಳ ಒಳಾಂಗಣ ಕ್ರೀಡಾಂಗಣದಲ್ಲಿ 42ನೇ ರಾಜ್ಯಮಟ್ಟದ ಟೇಕ್ವಾoಡೋ ಪಂದ್ಯಾವಳಿ 2025 ಯನ್ನು ಕರ್ನಾಟಕ ಟೈಕ್ವಾoಡೋ ಅಕಾಡೆಮಿ, ಕರ್ನಾಟಕ ಕ್ರೀಡಾ ಪ್ರಾಧಿಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಂಪಿಕ್ ಸಂಸ್ಥೆಯಿಂದ ಭಾರತೀಯ ಟೇಕ್ವಾoಡೋ ಅಕಾಡೆಮಿ ಯ ಮಾನ್ಯತೆ ಪಡೆದ ಟೇಕ್ವಾoಡೋ ಕ್ರೀಡೆಯಾಗಿದೆ.

ಟೇಕ್ವಾoಡೋ ಕ್ರೀಡೆಯು ಶಾಲಾ-ಕಾಲೇಜುಗಳ ಕ್ರೀಡಾಕೂಟದಲ್ಲಿ, ದಸರಾ ಕ್ರೀಡಾಕೂಟದಲ್ಲಿ, ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ, ಸೇರ್ಪಡೆಯಾದ ಟೇಕ್ವಾoಡೋ ಕ್ರೀಡೆಯಾಗಿದೆ.ಈ 42 ನೇಯ ರಾಜ್ಯ ಮಟ್ಟದ ಟೇಕ್ವಾoಡೋ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಲ್ಲೆಯ ಟೇಕ್ವಾoಡೋ 365 ಸಂಸ್ಥೆಯ ಕ್ರೀಡಾಪಟುಗಳು ಪೊಂಸ್ಸೇ ಮತ್ತು ಕ್ಯೂರೊಂಗಿ ವಿಭಾಗಗಳಲ್ಲಿ ಭಾಗವಹಿಸಿದ
ಅಗಸ್ತ್ಯ , ಮಣಿಕಂಠ = ಚಿನ್ನದ ಪದಕ
ಆರ್ಯನ್, ದೀಕ್ಷಾ, ಸುಹಾಸ್ = ಬೆಳ್ಳಿ ಪದಕ
ರೋಷನ್,ನಂದನ್ ಕುಮಾರ್, ತರುಣ್ = ಕಂಚಿನ ಪದಕ
ಪಡೆದು ಸಂಸ್ಥೆಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.

ಬಹುಮಾನ ಪಡೆದಂತಹ ಕ್ರೀಡಾಪಟುಗಳಿಗೆ ಟೇಕ್ವಾoಡೋ 365 ಸಂಸ್ಥೆಯ ತರಬೇತುದಾರರಾದ ಮಾಸ್ಟರ್ ಸಾಧಿಕ್, ಮಾಸ್ಟರ್ ಕಿರಣ್, ಮಾಸ್ಟರ್ ನವೀನ್ ಮತ್ತು ಮಾಸ್ಟರ್ ಮಂಜುನಾಥ್ ರವರು ಅಭಿನಂದಿಸಿರುತ್ತಾರೆ.