ಪ್ರಜೆಗಳು ಮತ್ತು ಕಾರ್ಯಾಂಗ ಒಟ್ಟು ಸೇರಿದರೆ ಸಮಸ್ಯೆಯನ್ನು ಸರಳವಾಗಿ ಬಗೆಹರಿಸಬಹುದು ಜನರು ಕೈಜೋಡಿಸಿದರೆ ಸುಂದರ ನಗರ ಕಟ್ಟಬಹುದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಹೇಳಿದ್ದಾರೆ.


ಅವರು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ. ಹಮ್ಮಿಕೊಂಡಿದ್ದ ಬೃಹತ್ ಟ್ರೇಡ್ ಲೈಸೆನ್ಸ್ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.


ಶಾಸಕಾಂಗ ತೀರ್ಮಾನಿಸಿದ ಕಾನೂನನ್ನು ಕಾರ್ಯಾಂಗ ಜಾರಿ ಮಾಡುತ್ತದೆ ಜನರ ತೆರಿಗೆ ಹಣದಿಂದ ನಮಗೆ ಸಂಬಳ ಸೌಲಭ್ಯ ಸಿಗುತ್ತದೆ. ವಾಣಿಜ್ಯ ಸಂಘಗಳು ಸ್ವಪ್ರೇರಣೆಯಿಂದ ಈ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ. ಮನೆ ಬಾಗಿಲಿಗೆ ಆಡಳಿತ ಹೋಗಬೇಕು ತೆರಿಗೆ ಕಟ್ಟುವ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅವರ ಹಕ್ಕುಗಳನ್ನು ಮತ್ತು ಬೇಡಿಕೆಗಳನ್ನು ಈಡೇರಿಸುವುದು ನಮ್ಮ ಕರ್ತವ್ಯ. ಎಲ್ಲೋ ಒಂದು ಕಡೆ ಲೋಪದೋಷಗಳಾಗುತ್ತವೆ ಅದನ್ನು ಸರಿಪಡಿಸುವ ಸಣ್ಣ ಸಣ್ಣ ಪ್ರಯತ್ನ ಮಾಡುವುದರ ಮೂಲಕ ಈ ವ್ಯವಸ್ಥೆ ಸುಧಾರಣೆ ಆಗಬೇಕಿದೆ ಎಂದರು.


ಅಂತಹ ಪ್ರಯತ್ನಕ್ಕೆ ಇಂದು ನಾಂದಿ ಅ ಹಾಡಲಾಗಿದೆ ಸಮಯ ವ್ಯರ್ಥ ಮಾಡದೆ ದಾಖಲೆಗಾಗಿ ಪೀಡಿಸದೆ ಓಡಾಡಿಸದೆ ಸರಳ ದಾಖಲೆಯೊಂದಿಗೆ ಟ್ರೇಡ್ ಲೈನ್ಸ್ ಲೈಸೆನ್ಸ್ ಕಾನೂನಿನ ಚೌಕಟ್ಟಿನಲ್ಲಿ ಮಾಡಿಕೊಡಬೇಕು ಎಂದರು. ಕೇವಲ 15 ನಿಮಿಷದಲ್ಲಿ ಕೆಲಸ ಆಗುತ್ತದೆ ನಮ್ಮ ಸಿಬ್ಬಂದಿ ಕ್ವಿಕ್ ರೆಸ್ಪಾನ್ಸ್ ನೀಡಿ ಯಾರು ನೋವು ಅನುಭವಿಸದ ರೀತಿಯಲ್ಲಿ ಕೆಲಸ ಮಾಡಿ ಕೊಡುತ್ತಾರೆ ಎಂದರು.


ಸಂಘದ ಅಧ್ಯಕ್ಷ ಗೋಪಿನಾಥ್ ಮಾತನಾಡಿ ನಮ್ಮ ಮನವಿಗೆ ಸ್ಪಂದಿಸಿ ಬೃಹತ್ ಟ್ರೇಡ್ ಲೈಸೆನ್ಸ್ ಮೇಳ ಆಯೋಜಿಸಿದ ಆಯುಕ್ತರಿಗೆ ವ oದಿಸಿದ ಅವರು ಆಯುಕ್ತರಿಗೆ ಒಳ್ಳೆಯ ವಿಷನ್ ಇದೆ. ನಾವು ಕೂಡ ಕಟ್ಟಬೇಕಾದ ತೆರಿಗೆ ಕಟ್ಟಿದರೆ ನಮಗೆ ಎಲ್ಲಾ ಲೀಗಲ್ ರೈಟ್ಸ್ ಸಿಗುತ್ತದೆ ಶಿವಮೊಗ್ಗದಲ್ಲಿ 14 ಸಾವಿರಕ್ಕೂ ಹೆಚ್ಚು ವರ್ತಕರಿದ್ದು ಅವರೆಲ್ಲರೂ ಬಂದು ಈ ಅಭಿಯಾನದ ಪ್ರಯೋಜನ ಪಡೆಯಬೇಕು ಎಂದರು.


ನಗರದಲ್ಲಿ ಈ ಖಾತೆ ಸಮಸ್ಯೆ ಇತ್ತು ಅದು ಈಗ ತುಂಬಾ ಸರಳವಾಗಿದೆ ಇನ್ನೂ ಸಣ್ಣಪುಟ್ಟ ತೊಂದರೆಗಳಿವೆ ಆಟೋ ಕಾಂಪ್ಲೆಕ್ಸ್ ಸಾಗರ ರಸ್ತೆ ಮತ್ತು ಕಲ್ಲಹಳ್ಳಿಯ 3 ಕೈಗಾರಿಕಾ ವಲಯಗಳಿಂದ ಅತಿ ಹೆಚ್ಚಿನ ತೆರಿಗೆ ಬರುತ್ತದೆ ಆದರೆ ಅಲ್ಲಿ ಸ್ವಚ್ಛತೆಯ ಕೊರತೆ ಇದೆ ನಗರ ಪಾಲಿಕೆ ಕೈಜೋಡಿಸಬೇಕು ನಗರದ ಬೆಳವಣಿಗೆಗೆ ಪಾಲಿಕೆ ಜೊತೆಗೆ ನಾವು ಇರುತ್ತೇವೆ ಎಂದು ಭರವಸೆ ನೀಡಿದರು. ಮೂರು ದಿನದ ಈ ಟ್ರೇಡ್ ಲೈಸೆನ್ಸ್ ಮೇಳದ ಸದುಪಯೋಗವನ್ನು ವರ್ತಕರು ಪಡೆಯಬೇಕೆಂದು ಅವರು ವಿನಂತಿಸಿದರು.


ವೇದಿಕೆಯಲ್ಲಿ ಉಪಾಧ್ಯಕ್ಷ ಜೀ ವಿಜಯ್ ಕುಮಾರ್. ಮನೋಜ್ ಸುರೇಶ್.ಸುಕುಮಾರ್. ವಾಸುದೇವ್ ಅಶ್ವತ್ ನಾರಾಯಣ ಶೆಟ್ಟಿ ಮತ್ತಿತರರಿದ್ದರು.