ಶಿವಮೊಗ್ಗ ನಗರದ ಜಿಪಿಎನ್ ರಸ್ತೆಯಲ್ಲಿರುವ ಕಾಮಾಕ್ಷಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಡಿಕೆಶಿ ಅಭಿಮಾನಿ ಬಳಗದ ಅಧ್ಯಕ್ಷರಾದ ಆರ್ ಮೋಹನ್ ದಂಪತಿಗಳಿಂದ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಆಗಲಿ ಎಂದು ವಿಶೇಷ ಪೂಜೆ ಮತ್ತು  ವಿಶೇಷ ಹೋಮ ಹವನವನ್ನು ನಡೆಸಿದರು.

ಜಯಂತ್ ಭಾಗವತ್ ಮತ್ತು ತಂಡದವರಿಂದ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನ ದೊರಕಲಿ ಎಂದು ವಿಶೇಷ ವೇದ ಮಂತ್ರಗಳನ್ನು ಪಡಿಸಿದರು.ಮೋದಕ ದ್ರವ್ಯಗಳೊಂದಿಗೆ 108 ಕಾಯಿ ಗಣ ಹೋಮ, ಶತರುದ್ರಾಭಿಷೇಕ ನವಚಂಡಿಪಾರಾಯಣ ಮತ್ತು ಇಡುಗಾಯಿ ಸೇವೆಯನ್ನ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೋಹನ್ ರವರು ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗಲು ಆದಷ್ಟು ಬೇಗ ಯೋಗ ಕೂಡಿ ಬರಲಿ ಎಂದು ವಿಶೇಷ ಪೂಜೆ ಹವನಗಳನ್ನು ಅಭಿಮಾನಿ ಸಂಘದಿಂದ ಮಾಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಅವರು ಮುಖ್ಯಮಂತ್ರಿ ಆಗಿ ರಾಜ್ಯದ ಜನತೆ ಸೇವೆ ಮಾಡುವ ಅವಕಾಶ ಸಿಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಅಭಿಮಾನಿ ಸಂಘದ ಮುಖಂಡರು ಪಕ್ಷದ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.