ಉಸ್ತುವಾರಿ ಸಚಿವರಾದ ಶ್ರೀ ಮಧು ಬಂಗಾರಪ್ಪನವರ
ಹೇಳಿಕೆಯನ್ನು ತಿರುಚಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಾದ ರಮೇಶ್ ಶೆಟ್ಟಿ ಶಂಕರ್ ಘಟ್ಟ ರವರ ನೇತೃತ್ವದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.
—-
21ರಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯ ಭೇಟಿಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿರುವಾಗ, ಮಾಧ್ಯಮ ಪ್ರತಿನಿಧಿಗಳು ಸಿಗಂಧೂರು ಸೇತುವೆ ವಿಷಯವಾಗಿ ಕೇಳಿರುವ ಪ್ರಶ್ನೆಗೆ ಪ್ರತಿಕ್ರಿಸುವಾಗ, “ಸಿಗಂಧೂರು ದೇವಸ್ಥಾನವನ್ನು ಯಾರು ಹಾಳು ಮಾಡಲು ಪ್ರಯತ್ನಿಸಿದರು ಎಂಬುದನ್ನು ಒಂದು ತಿಂಗಳಲ್ಲಿ ಹೇಳುತ್ತೇನೆ” ಎಂದು ಮಾದ್ಯಮದವರ ಮುಂದೆ ನೀಡಿದ ಹೇಳಿಕೆಯನ್ನು ಬಿಜೆಪಿಯ ಸೋಶಿಯಲ್ ಮೀಡಿಯಾ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ಅರ್ದಕ್ಕೆ ಕತ್ತರಿಸಿ, “ಸಿಗಂದೂರು ದೇವಸ್ಥಾನವನ್ನು ಹೇಗೆ ಹಾಳು ಮಾಡಬೇಕೆಂದು ಒಂದು ತಿಂಗಳೊಳಗೆ ನಿಮಗೆ ಡಿಟೈಲ್ ಹೇಳುವೆ ” ಎಂಬ 19 ಸೆಕೆಂಡ್ ವಿಡಿಯೋವನ್ನು ಮಾಡಿ ಅದರ ಕೆಳಗಡೆ ಅಜ್ಞಾನಿ ವಿದ್ಯಾ ಮಂತ್ರಿಗಳೇ ಸಿಗಂದೂರು ಚೌಡೇಶ್ವರಿ ಮಾತೆಯ ಮಂದಿರ ಹಾಳು ಮಾಡ್ತೀವಿ ಎಂದ ನಾಲಿಗೆಗೆ ತಾಯಿ ಬರೆ ಹಾಕುವುದು ನಿಶ್ಚಿತ, ಎಂದು ದೇವರ ಚಿತ್ರದೊಂದಿಗೆ ಬರೆದ ವಿಡಿಯೋ ವೈರಲ್ ಮಾಡಿದ್ದು, ಈ ರೀತಿ ಹೇಳಿಕೆಯನ್ನು ತಿರುಚಿ ಬಿಜೆಪಿ ಕಾರ್ಯಕರ್ತರು ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ವೈರಲ್ ಮಾಡಿದ್ದು, ಮಂತ್ರಿಗಳನ್ನು ಗೌರವಿಸುತ್ತಿದ್ದ ಸಮಾಜದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರಿಂದ ಧಾರ್ಮಿಕ ಭಾವನೆಗೆ ದಕ್ಕೆ ತರುವ ಹೇಳಿಕೆ ನೀಡಿದ್ದಾರೆ ಎಂದು ಜನ ತಪ್ಪು ಭಾವನೆ ಮೂಡುವಂತೆ ಸಾರ್ವಜನಿಕರನ್ನು ಉದ್ರಿಕಿಸುವಂತೆ ಪ್ರಚೋದಿಸುತ್ತಿದ್ದಾರೆ.
ಎಲ್ಲ ಸಮಾಜದವರ ಆರಾಧ್ಯ ದೈವ, ಅದರಲ್ಲೂ ಮುಖ್ಯವಾಗಿ ಹಿಂದುಳಿದ ವರ್ಗಗಳ ಭಕ್ತರು ಅತಿಯಾಗಿ ಪೂಜಿಸುವ ತಾಯಿ ಸಿಗಂದೂರು ಚೌಡೇಶ್ವರಿ, ಬಿಜೆಪಿ ಯವರ ಇಂತಹ ಕ್ಷುಲಕ ನಡವಳಿಕೆಯಿಂದ ಅಪಾರ ಭಕ್ತ ವೃಂದದವರಿಗೆ ಮನಸಿಗೆ ನೋವಾಗಿದೆ. ಈ ರೀತಿಯ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ಮೂಡಿ ಶಾಂತಿಭಂಗವಾಗುವ ಸಾದ್ಯತೆಗಳಿರುವುದರಿಂದ, ಉಸ್ತುವಾರಿ ಸಚಿವರಾದ
ಶ್ರೀ ಮಧು
ಬಂಗಾರಪ್ಪನವರ ಹೇಳಿಕೆಯನ್ನು ತಿರುಚಿರುವವರ ಮೇಲೆ ಮೊಕದ್ದಮೆ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಈ ಮೂಲಕ ಕೋರುತ್ತೇವೆ
ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಜಿಡಿ ಮಂಜುನಾಥ್ ನಾಗರಾಜ್ ಕಂಕಾರಿ, ಪಾಲಾಕ್ಷಿ, ಭಾಸ್ಕರ್,ಶರತ್ ಮರಿಯಪ್ಪ,
ಕುರುವಳ್ಳಿ ನಾಗರಾಜ್, ನವಿಲೆ ಮಂಜುನಾಥ್, ಬಸವರಾಜ್
ಪ್ರವೀಣ್ ಲಕ್ಷ್ಮೀಕಾಂತ್, ಉಮೇಶ್, ಗಿತೇಂದ್ರ, ಶಿವು,ರಘ,
ರಾಘವೇಂದ್ರ, ಮಹೇಂದ್ರ, ಮೋಹನ್,ವಿನೋದ್, ಲೋಕೇಶ್, ಅನಸೂಯಮ್ಮ, ಮಂಜುನಾಥ್,ಮತ್ತಿತರರು ಇದ್ದರು.